ಲಾಕ್‌ಡೌನ್ | ಇಂಟರ್ನೆಟ್ ಬಳಕೆ ಹೆಚ್ಚಳ: ವಿಡಿಯೊ ರೆಸೊಲ್ಯುಶನ್‌ಗೆ ಯೂಟ್ಯೂಬ್ ನಿರ್ಬಂಧ
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಿಕೆಗಾಗಿ ಎಲ್ಲರೂ ಮನೆಯೊಳಗೇ ಇರಿ ಎಂದು ಸರ್ಕಾರ ಸೂಚನೆ ನೀಡಿದ ಬಳಿಕ, ಮನೆಯಿಂದಲೇ ಕಚೇರಿ ಕೆಲಸ ನಿಭಾವಣೆಗಾಗಿ ಹಾಗೂ ಅನಿರೀಕ್ಷಿತವಾಗಿ ರಜೆಯನ್ನೇ ಪಡೆದು ಮನೆಯಲ್ಲಿ ಕುಳಿತಿರುವವರೆಲ್ಲರೂ ಈಗ ಇಂಟರ್ನೆಟ್ ಮೊರೆ ಹೋಗಿದ್ದಾರೆ. ಕಚೇರಿ ಕೆಲಸಕ್ಕಾಗಿ ಫೈಲ್ ಶೇರಿಂಗ್ ಇತ್ಯಾದಿಗಳಿಗಾಗಿ ಹೆಚ್ಚಿನ ವೇಗದ ಇಂಟರ್ನೆಟ್ ಬೇಕಿದ್ದರೆ, ರಜೆಯಲ್ಲಿ ಮನೆಯೊಳಗಿರುವವರು ಆನ್‌ಲೈನ್‌ನಲ್ಲಿ ವಿಭಿನ್ನ ಮನರಂಜನಾ ತಾಣಗಳಲ್ಲಿ ಲಭ್ಯವಾಗುವ ವಿಡಿಯೊಗಳು, ಸಿನಿಮಾ, ಧಾರಾವಾಹಿಗಳನ್ನು, ಹಾಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಇಂಟರ್ನೆಟ್ ಬ್ಯಾಂಡ್‌ವಿಡ್ತ್ ಬಳಕೆಯಲ್ಲಿಯೂ ದಿಢೀರ್ ಏರಿಕೆಗೆ ಕಾರಣವಾಗಿರುವುದರಿಂದ,…