ಆನ್‌ಲೈನ್‌ನಲ್ಲಿ ಯಕ್ಷಗಾನ ಜಾಗೃತಿ: ಕೊರೊನಾಸುರ ಕಾಳಗ
ಕರಾವಳಿ ಜನರ ಜೀವನಾಡಿಯಾಗಿರುವ ಯಕ್ಷಗಾನವನ್ನೂ ಕೊರೊನಾ ವೈರಸ್ ಬಿಟ್ಟಿಲ್ಲ. ಪ್ರತಿದಿನ ನೂರಾರು, ಸಾವಿರಾರು ಜನ ಸೇರುವ ಯಕ್ಷಗಾನ ಪ್ರದರ್ಶನಗಳು ನಿಂತಿವೆ, ಅದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಅವರು ಸುಮ್ಮನೆ ಕುಳಿತಿಲ್ಲ. ಅಚಾನಕ್ ಆಗಿ ಸಿಕ್ಕ ಬಿಡುವಿನ ಸಮಯವನ್ನು ಜನರ ಬದುಕನ್ನು ಕಸಿದುಕೊಳ್ಳುತ್ತಿರುವ ಕೊರೊನಾ ವೈರಸ್ ಹರಡದಂತೆ ಜನಜಾಗೃತಿ ಮೂಡಿಸಲು ಬಳಸಿಕೊಂಡಿದ್ದಾರೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಬ್ರೇಕ್ ಬಿದ್ದಾಗ ಕಲಾವಿದರೆಲ್ಲರೂ ಮನೆ ಸೇರಬೇಕಾಯಿತು. ಜನತಾ ಕರ್ಫ್ಯೂ ಹಿಂದಿನ ದಿನವಾದ ಮಾ.21ರ ಶನಿವಾರ ಮನೆಯಲ್ಲಿ…