ವಿಂಡೋಸ್‌ನಲ್ಲಿ ವೇಗದ ಕೆಲಸಕ್ಕೆ ಒಂದಿಷ್ಟು ಉಪಯುಕ್ತ ತಂತ್ರಗಳು
ಈಗ ಹೆಚ್ಚಿನವರು ಕಂಪ್ಯೂಟರುಗಳಲ್ಲಿ ಬಳಸುತ್ತಿರುವುದು ವಿಂಡೋಸ್ 7 ಹಾಗೂ ವಿಂಡೋಸ್ 8. ಮುಂದಿನ ಆವೃತ್ತಿ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಕೂಡ ಶೀಘ್ರವೇ ಬರಲಿದೆಯಾದರೂ, ಈಗಿರುವ ಕಂಪ್ಯೂಟರುಗಳಲ್ಲಿ ಕೆಲವೊಂದು ಕೆಲಸಗಳನ್ನು ಕ್ಷಿಪ್ರವಾಗಿ ಮಾಡಿ ಮುಗಿಸಲು ಸಾಕಷ್ಟು ಉಪಯುಕ್ತ ವಿಧಾನಗಳು ವಿಂಡೋಸ್ ಅಡಗಿವೆ. ಕೆಲವರಿಗೆ ಇದರ ಬಗ್ಗೆ ತಿಳಿದಿರಬಹುದು. ತಿಳಿಯದವರಿಗೆ ಇಲ್ಲಿವೆ ಕೆಲವು ಟಿಪ್ಸ್. * ವಿಂಡೋಸ್ 8 ಬಳಸುತ್ತಿರುವವರಿಗೆ ದೊಡ್ಡ ಸಮಸ್ಯೆಯಾಗುವುದೆಂದರೆ ಹಿನ್ನೆಲೆಯಲ್ಲಿ ಇಂಟರ್ನೆಟ್ ಸಂಪರ್ಕಿಸುವ ಲೈವ್ ಟೈಲ್‌ಗಳು. ಅಂದರೆ, ಫೇಸ್‌ಬುಕ್, ಟ್ವಿಟರ್, ಮೇಲ್ ಮುಂತಾದ ವಿಭಿನ್ನ…