ವಿಂಡೋಸ್ ಎಕ್ಸ್‌ಪಿ ಇರುವವರು ಗಮನಿಸಿ!

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014ಬಹುತೇಕ ಮಂದಿ ತಮ್ಮ ಕಂಪ್ಯೂಟರ್‌ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್‌ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ – OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್ ನೀಡುತ್ತಿರುವ ಅಪ್‌ಡೇಟ್‌ಗಳ ಬೆಂಬಲವು ಏಪ್ರಿಲ್ 8ಕ್ಕೆ ಸ್ಥಗಿತಗೊಂಡಿದೆ. ಇದರಿಂದ ಎಕ್ಸ್‌ಪಿ ಸಿಸ್ಟಮ್ಮೇ ಕೆಲಸ ಮಾಡುವುದಿಲ್ಲ, ಯಾವಾಗ ಬೇಕಾದರೂ ನಿಲ್ಲಬಹುದು ಎಂಬುದು ತಪ್ಪು ಕಲ್ಪನೆ. ಕಾಲಕಾಲಕ್ಕೆ ವಿಭಿನ್ನ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಸ್ಪೈ‌ವೇರ್‌ಗಳೆಂಬ ನಮ್ಮ ಮಾಹಿತಿ ಕದಿಯುವ ತಂತ್ರಾಂಶಗಳು ಸಿಸ್ಟಂಗೆ ಸೋಕದಂತೆ ತಡೆಯುವ ವ್ಯವಸ್ಥೆಯನ್ನು…

Rate this:

ವಿಂಡೋಸ್ ಎಕ್ಸ್‌ಪಿಗೆ ನಿವೃತ್ತಿ: ನಮಗೇನು ನಷ್ಟ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಜೂನ್ 17, 2013 ಬಹುತೇಕ ಮಂದಿ ಮೈಕ್ರೋಸಾಫ್ಟ್‌ನ ವಿಂಡೋಸ್ ಎಂಬ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರ್‌ಗಳನ್ನು ಹೊಂದಿದ್ದಾರೆ. ವಿಂಡೋಸ್ 98 ಆವೃತ್ತಿಯು ಈಗ ಹೇಗೆ ಮೂಲೆಗುಂಪಾಗಿದೆಯೋ ವಿಂಡೋಸ್ ಎಕ್ಸ್‌ಪಿ ಆವೃತ್ತಿಯೂ 2014ರ ಏಪ್ರಿಲ್ 8ರಂದು ‘ನಿವೃತ್ತಿ’ಯಾಗಲಿದೆ. ಇದರೊಂದಿಗೆ ‘ಆಫೀಸ್ 2003’ (ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮುಂತಾದವುಗಳ 2003ರ ಆವೃತ್ತಿ) ಎಂಬ ಪಠ್ಯ ಪರಿಷ್ಕರಣೆ ತಂತ್ರಾಂಶವೂ ನಿಂತ ನೀರಾಗಲಿದೆ. ಇದರ ಪರಿಣಾಮವೇನು? ಹಾಗಿದ್ದರೆ ವಿಂಡೋಸ್ ಎಕ್ಸ್‌ಪಿ ಇರುವ ನಮ್ಮ ಕಂಪ್ಯೂಟರುಗಳು ಕೆಲಸ ಮಾಡುವುದಿಲ್ಲವೇ?…

Rate this:

ನಿಮ್ಮ ವಿಂಡೋಸ್ ಸಿಸ್ಟಂನಲ್ಲೇ ಇದೆ ಕನ್ನಡ ಕೀಬೋರ್ಡ್…

ಮಾಹಿತಿ@ತಂತ್ರಜ್ಞಾನ – 35 (ಮೇ 20, 2013ರ ವಿಜಯ ಕರ್ನಾಟಕ ಅಂಕಣ) ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ (OS) ಇರುವ ಕಂಪ್ಯೂಟರ್‌ಗಳಿಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು 2014ರ ಏಪ್ರಿಲ್ 8ರಿಂದ ನಿಲ್ಲಿಸಲಿದೆ. ಅಂದರೆ XP ಕಾರ್ಯಾಚರಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಿಲ್ಲ, ಸಾಫ್ಟ್‌ವೇರ್/ಅಪ್ಲಿಕೇಶನ್/ಪ್ರೋಗ್ರಾಂಗಳ ಸುಧಾರಿತ ರೂಪಗಳೂ, ಅವುಗಳಿಗೆ ಬೆಂಬಲವೂ ಸಿಗುವುದಿಲ್ಲ ಹಾಗೂ ವೈರಸ್, ಫೀಶಿಂಗ್ ಮತ್ತಿತರ ಅಪಾಯ ತಡೆಗೆ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಒದಗಿಸುವುದಿಲ್ಲ. ಬದಲಾಗಿ ವಿಂಡೋಸ್ 7 ಹಾಗೂ ವಿಂಡೋಸ್ 8 ವ್ಯವಸ್ಥೆಗಳನ್ನೇ ಮುಂದುವರಿಸುತ್ತದೆ. ಈ ಸಂಗತಿ ಹೆಚ್ಚಿನವರಿಗೆ ತಿಳಿದಿರಲಾರದು.…

Rate this: