ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್ಬೆರಿ ಆಪಲ್… ಯಾವುದನ್ನು ಆಯ್ದುಕೊಳ್ಳಲಿ?
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-45, ಜುಲೈ 29, 2013ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲ್ ಫೋನ್ಗಳು ಸ್ಮಾರ್ಟ್ಫೋನ್ ಎಂಬ ಕೆಟಗರಿಯಲ್ಲಿ ಬರುತ್ತವೆ. ಇವುಗಳಲ್ಲಿ ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್ಬೆರಿ, ಆಪಲ್ ಐಒಎಸ್ ಮುಂತಾದ ಹೆಸರುಗಳನ್ನು ಕೇಳಿರಬಹುದು. ನಗರ ವಾಸಿಗಳಿಗೆ ಅದರಲ್ಲೂ ಟೆಕ್ನಾಲಜಿ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಇವುಗಳ ಬಗ್ಗೆ ತಿಳಿದಿರಬಹುದು. ಆದರೆ ಸಾಮಾನ್ಯ ಜನರಿಗೆ ಈ ಹೆಸರುಗಳು ಗೊಂದಲ ಹುಟ್ಟಿಸಬಹುದು. ಆಂಡ್ರಾಯ್ಡ್ ಫೋನ್ಗಳು ಒಳ್ಳೆಯವೇ? ವಿಂಡೋಸ್ ಫೋನ್ ಉತ್ತಮವೇ, ಅಥವಾ ಐಫೋನ್ ಚೆನ್ನಾಗಿರುತ್ತದೆಯೇ, ಬ್ಲ್ಯಾಕ್ಬೆರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು…