ಇದೋ ಬಂದಿದೆ ವೈಫೈ ಮೂಲಕ ಕರೆ ಸೌಕರ್ಯ!
ಈಗಷ್ಟೇ ಕರ್ನಾಟಕಕ್ಕೂ ಬಂದಿದೆ ವಾಯ್ಸ್ ಓವರ್ ವೈಫೈ ಅಂದರೆ ವೈಫೈ ಸಂಪರ್ಕದ ಮೂಲಕ ನೇರವಾಗಿ ಕರೆ ಮಾಡುವ ಸೌಕರ್ಯ. ಏನಿದು? ಹೇಗೆ ಬಳಸುವುದು? ಸಮಗ್ರ ವಿವರ ಇಲ್ಲಿದೆ. ಮೊಬೈಲ್ ಸೇವಾದಾತರು ಕರೆ ಶುಲ್ಕ ಹಾಗೂ ಇಂಟರ್‌ನೆಟ್ ದರಗಳನ್ನು ಏರಿಸಿದ್ದಾರೆ. ಹೀಗಾಗಿ ಹೆಚ್ಚು ಮಾತನಾಡಿದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ ಎಂದು ಆತಂಕಪಡುವವರ ನೆರವಿಗೆ ಇದೋ ಬಂದಿದೆ ವಿನೂತನ ತಂತ್ರಜ್ಞಾನ. ಅದುವೇ ವೈಫೈ-ಕಾಲಿಂಗ್. ಅಂದರೆ ವೈಫೈ ಮೂಲಕ ಕರೆ ಮಾಡುವ ಸೌಕರ್ಯ. VoLTE ಎಂಬುದನ್ನು ಕೇಳಿದ್ದೀರಿ. 2016ರಲ್ಲಿ ರಿಲಯನ್ಸ್ ಜಿಯೋ…