ಟೆಕ್ ಟಾನಿಕ್: ವಾಟ್ಸ್ಆ್ಯಪ್ ನೀಲಿ ಟಿಕ್ ಮಾರ್ಕ್

ನಾವು ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಮತ್ತೊಬ್ಬರು ಓದಿದರೇ ಇಲ್ಲವೇ, ಓದಿದ್ದರೆ ಎಷ್ಟು ಹೊತ್ತಿಗೆ ನೋಡಿದರು ಎಂದು ತಿಳಿದುಕೊಳ್ಳುವ ಅವಕಾಶವೊಂದನ್ನು ವಾಟ್ಸ್ಆ್ಯಪ್ ಹಿಂದೆಯೇ ಪರಿಚಯಿಸಿತ್ತು. ಅದುವೇ ನೀಲಿ ಬಣ್ಣದ ಟಿಕ್ ಮಾರ್ಕ್. ತಮ್ಮ ಪ್ರೈವೆಸಿ ಬಗ್ಗೆ ಹೆಚ್ಚು ಆಸ್ಥೆ ವಹಿಸುವವರು, ಸದಾ ಕಾಲ ಆನ್‌ಲೈನ್‌ನಲ್ಲೇ ಇರುತ್ತಾರೆ ಅಂತ ಬೇರೆಯವರು ತಿಳಿದುಕೊಳ್ಳದಂತಿರಲು ಅಥವಾ ಬೇರಾವುದೇ ಉದ್ದೇಶಕ್ಕೆ ಇದು ಬೇರೊಬ್ಬರಿಗೆ ತಿಳಿಯದೇ ಇರಬೇಕಿದ್ದರೆ, ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ, ಪ್ರೈವೆಸಿ ಎಂಬಲ್ಲಿ ‘ಲಾಸ್ಟ್ ಸೀನ್’ ಎಂಬುದನ್ನು ಯಾರಿಗೂ ಕಾಣಿಸದಂತೆ ಮಾಡುವ ಆಯ್ಕೆಯಿದೆ. ಇದು…

Rate this:

ನಿಮ್ಮ ಮೊಬೈಲ್, ವಾಟ್ಸಾಪ್ ಕನ್ನಡಮಯವಾಗಿಸುವುದು ಹೇಗೆ?

ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಮಾನ ಮನಸ್ಕರನ್ನು ಗ್ರೂಪುಗಳ ಮೂಲಕ ಒಂದುಗೂಡಿಸಿ, ವೈಯಕ್ತಿಕ ಸಂಭಾಷಣೆಗಳಿಗಾಗಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಎಂಬ ಕಿರು ಸಾಮಾಜಿಕ ಜಾಲತಾಣ ಬೆಳೆದುಬಂದ ಬಗೆ ಅಗಾಧ. ಅದರ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅದು ಕೂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಭಾರತದಲ್ಲೇ ಸುಮಾರು 20 ಕೋಟಿಗೂ ಹೆಚ್ಚು ಮಂದಿ ವಾಟ್ಸಾಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅದು ಗ್ರಾಮಾಂತರ ಜನರನ್ನೂ ತಲುಪುತ್ತಿದೆ. ಕೃಷಿ, ಮಾರುಕಟ್ಟೆ ದರ, ಉದ್ಯೋಗ ಇತ್ಯಾದಿ ಸರಕಾರಿ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ವಾಟ್ಸಾಪ್ ಸಂದೇಶದ ಮೂಲಕವೇ…

Rate this:

ಟೆಕ್‌ಟಾನಿಕ್: ಸಂದೇಶ ಡಿಲೀಟ್ ಅವಧಿ ವಿಸ್ತರಣೆ

ವಾಟ್ಸಾಪ್ ಬಳಸುತ್ತಿರುವವರಿಗೆ ಇತ್ತೀಚೆಗೆ ಅದು ಪರಿಚಯಿಸಿದ ‘ಡಿಲೀಟ್’ ಆಯ್ಕೆ ಬಗ್ಗೆ ಗೊತ್ತಿದೆ. ನಾವೇನಾದರೂ ತಪ್ಪು ಸಂದೇಶವನ್ನು ಕಳುಹಿಸಿದರೆ, ಅಥವಾ ತಪ್ಪಾದ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಏಳು ನಿಮಿಷಗಳೊಳಗೆ ಡಿಲೀಟ್ ಮಾಡುವ ಆಯ್ಕೆ ನೀಡಲಾಗಿತ್ತು. ಅದರ ಜನಪ್ರಿಯತೆಯನ್ನು ಮನಗಂಡ ವಾಟ್ಸಾಪ್, ಡಿಲೀಟ್ ಮಾಡಬಹುದಾದ ಅವಧಿಯನ್ನು ವಿಸ್ತರಿಸಿದೆ. ಅಂದರೆ, ಬೇರೆಯವರು ನೋಡುವ ಮುನ್ನ ಇದುವರೆಗೆ 420 ಸೆಕೆಂಡುಗಳೊಳಗೆ ನಾವು ಡಿಲೀಟ್ ಮಾಡಿದ್ದರೆ ಅದನ್ನು ಮುಂದೆ ಯಾರೂ ನೋಡುವುದು ಸಾಧ್ಯವಿರಲಿಲ್ಲ. ಈಗಿನ ಪ್ರಕಾರ, ಈ ಅವಧಿಯನ್ನು ವಾಟ್ಸಾಪ್ 4096 ಸೆಕೆಂಡಿಗೆ…

Rate this:

ವಾಟ್ಸಪ್ ಸಂದೇಶ: ಸಾವಧಾನದಿಂದಿರಿ, ಸುರಕ್ಷಿತವಾಗಿರಿ

ಫೇಸ್‌ಬುಕ್ ಪ್ರೈವೆಸಿ ಬಗೆಗಿನ ಆತಂಕವಿನ್ನೂ ಮರೆಯಾಗಿಲ್ಲ. ಈಗ ಅತ್ಯಧಿಕ ಬಳಸುತ್ತಿರುವ ವಾಟ್ಸಪ್ ಮೆಸೆಂಜರ್‌ನಲ್ಲಿಯೂ ನಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ನೆಟ್ ಲೂಟಿಕೋರರು ಭಾರಿ ಪ್ರಮಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂಟರ್ನೆಟ್ ಕ್ರಾಂತಿಯಾದ ಬಳಿಕ ಟೆಕ್ಕೀಗಳು, ಸುಶಿಕ್ಷಿತರಷ್ಟೇ ಅಲ್ಲದೆ, ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರವೇ ಬಳಸಲು ತಿಳಿದುಕೊಂಡಿರುವವರೂ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಸಂದೇಶಗಳಲ್ಲಿ ಬರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸದೆ, ತಮ್ಮ ಸ್ನೇಹಿತ ಕಳುಹಿಸಿದನೆಂದು ನಂಬಿ ಲಿಂಕ್ ಕ್ಲಿಕ್ ಮಾಡುವ ಮೂಲಕ ತಮಗರಿವಿಲ್ಲದಂತೆಯೇ ತಮ್ಮ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವವರ ಸಂಖ್ಯೆಯೂ ಅಷ್ಟೇ…

Rate this:

ಫೇಸ್‌ಬುಕ್, ವಾಟ್ಸಾಪ್ ‘ಶಾಕಿಂಗ್’: ಬಂದದ್ದೆಲ್ಲವೂ ನಿಜವಲ್ಲ!

ಫೇಸ್‌ಬುಕ್ ಬಳಸುತ್ತಿರುವವರಿಗೆ ಗೊತ್ತಿದೆ, ‘ಶಾಕಿಂಗ್ ನ್ಯೂಸ್, ಬೆಚ್ಚಿ ಬೀಳಿಸೋ ಸುದ್ದಿ ಇಲ್ಲಿದೆ, ನೋಡಿ, ಕ್ಲಿಕ್ ಮಾಡಿ’ ಎಂಬ ಒಕ್ಕಣೆಯುಳ್ಳ ಅದೆಷ್ಟೋ ಲಿಂಕ್‌ಗಳನ್ನು ನೋಡಿರುತ್ತೀರಿ. ಹತ್ತೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ, ಮೂರೇ ದಿನದಲ್ಲಿ 3 ಕೆಜಿ ಕಳೆದುಕೊಳ್ಳಿ, ಒಂದೇ ವಾರದಲ್ಲಿ ಮಧುಮೇಹದಿಂದ ಮುಕ್ತಿ ಪಡೆಯಿರಿ ಎನ್ನುತ್ತಾ ‘ಹೇಗೆ ಎಂದು ತಿಳಿಯಲು ‘ಶೇರ್ ಮಾಡಿ ಮತ್ತು ಕ್ಲಿಕ್ ಮಾಡಿ’ ಅಂತ ಒಕ್ಕಣೆಯೂ ಇರುತ್ತದೆ. ಇಂಥವುಗಳ ಹಾವಳಿ ಇಂದು ಹೆಚ್ಚಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಮಾಹಿತಿ ಪ್ರವಾಹದಲ್ಲಿ ಎಲ್ಲವೂ ನಿಜವಾಗಿರುವುದಿಲ್ಲ ಎಂಬುದು…

Rate this:

ಟೆಕ್ ಟಾನಿಕ್: WhatsApp ಚಾಟ್ ಕ್ಲಿಯರ್

ವಾಟ್ಸಾಪ್ ಬಳಸುತ್ತಿರುವವರು ಸ್ನೇಹಿತರ ಜತೆಗಿನ ಚಾಟ್ ಸಂದೇಶಗಳನ್ನೋ, ಗ್ರೂಪ್ ಸಂದೇಶಗಳನ್ನೋ ‘ಕ್ಲಿಯರ್ ಆಲ್’ ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ನಿರ್ದಿಷ್ಟವಾದ ಸಂದೇಶ ತೆರೆದು, ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ ಬಟನ್ ಒತ್ತಿ, ‘ಮೋರ್’ ಒತ್ತಿ, ‘ಕ್ಲಿಯರ್ ಚಾಟ್’ ಮಾಡಿದರೆ ಎಲ್ಲ ಸಂದೇಶಗಳು ಡಿಲೀಟ್ ಆಗುತ್ತವೆ. ಅದೇ ರೀತಿ, ಎಲ್ಲ ಚಾಟ್ ಹಿಸ್ಟರಿಯೂ ಬೇಡವೆಂದಾದರೆ, ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್ ಎಂಬಲ್ಲಿ ಹೋಗಿ, ‘ಚಾಟ್ ಹಿಸ್ಟರಿ’ ಕ್ಲಿಕ್ ಮಾಡಿ, ಕ್ಲಿಯರ್ ಅಥವಾ ಡಿಲೀಟ್ ಮಾಡಲು ಆಯ್ಕೆಯಿದೆ.…

Rate this:

ಕಳುಹಿಸಿದ WhatsApp ಸಂದೇಶ ಡಿಲೀಟ್ ಮಾಡುವುದು ಹೇಗೆ?

ಕಳೆದ ವಾರ ವಾಟ್ಸಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶವು ಕೆಲವು ನಿಮಿಷಗಳ ಕಾಲ ಸ್ಥಗಿತವಾದಾಗ ಅದು ಜಾಗತಿಕವಾಗಿ ಉಂಟು ಮಾಡಿದ ಚಡಪಡಿಕೆ ಅಷ್ಟಿಷ್ಟಲ್ಲ. ಈಗ ಜನರಿಗೆ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್ ಎಷ್ಟು ಅನಿವಾರ್ಯವಾಗಿದೆಯೋ, ಅದರಲ್ಲಿ ವಾಟ್ಸಪ್ ಇರುವುದು ಕೂಡ ಅಷ್ಟೇ ಅನಿವಾರ್ಯವಾಗಿಬಿಟ್ಟಿದೆ. ಇಂಥ ವಾಟ್ಸಪ್‌ನಲ್ಲಿ ತಂತ್ರಾಂಶ ಸೌಕರ್ಯಗಳು ನಿಧಾನವಾಗಿ ಹೆಚ್ಚುತ್ತಿವೆ. ಟೆಲಿಗ್ರಾಂ ಎಂಬ ಮತ್ತೊಂದು ಸಂದೇಶ ವಿನಿಮಯ ಕಿರು ತಂತ್ರಾಂಶದಲ್ಲಿ (ಆ್ಯಪ್) ವಾಟ್ಸಪ್‌ಗಿಂತ ತುಂಬ ಮುಂದಿದೆ. ಅದರಲ್ಲಿ ಈಗಾಗಲೇ ಇರುವ ಅನುಕೂಲವೊಂದು ವಾಟ್ಸಪ್‌ಗೆ ಕಳೆದ ವಾರ…

Rate this: