ವಾಟ್ಸ್ಆ್ಯಪ್ ಸ್ಟೇಟಸ್ ವಿಡಿಯೊ ಇನ್ನು 15 ಸೆಕೆಂಡಿಗೆ ಸೀಮಿತ!
ಕೊರೊನಾ ವೈರಸ್ ಪಿಡುಗು ಎಲ್ಲರನ್ನೂ ಮನೆಯೊಳಗೆ ಕಟ್ಟಿ ಹಾಕಿರುವ ಈ ಸಂದರ್ಭದಲ್ಲಿ ಅಂತರಜಾಲ ಜಾಲಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಆನ್‌ಲೈನ್ ಬಳಕೆದಾರರ ದಿಢೀರ್ ಏರಿಕೆಯಿಂದಾಗಿ ನೆಟ್‌ವರ್ಕ್ ಸಾಂದ್ರತೆಯೂ ಹೆಚ್ಚಾಗಿದ್ದು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಆನ್‌ಲೈನ್ ವಿಡಿಯೊ ದಿಗ್ಗಜ ಕಂಪನಿಗಳಾದ ನೆಟ್‌ಫ್ಲಿಕ್ಸ್, ಯೂಟ್ಯೂಬ್‌ಗಳು ಕೆಲವೊಂದು ಮಿತಿಗಳನ್ನು ವಿಧಿಸಿವೆ. ಅವೆಂದರೆ, ವಿಡಿಯೊದ ಬಿಟ್‌ರೇಟ್ ಕಡಿತಗೊಳಿಸುವುದು ಹಾಗೂ ಕಡಿಮೆ ರೆಸೊಲ್ಯುಶನ್ ವಿಡಿಯೊಗಳನ್ನು ಬಳಸುವಂತೆ ಮಾಡುವುದು. ಇದೀಗ ವಾಟ್ಸ್ಆ್ಯಪ್ ಕೂಡ ಈ ರೀತಿಯಲ್ಲಿ ಇಂಟರ್ನೆಟ್ ಮಿತಿಗೊಳಿಸುವ ಪ್ರಕ್ರಿಯೆಗೆ ಮುಂದಾಗಿದೆ. ತನ್ನ ಬಳಕೆದಾರರ ‘ಸ್ಟೇಟಸ್’ನಲ್ಲಿ ಹೆಚ್ಚಿನವರು…