ಝೂಮ್‌ಗೆ ಪರ್ಯಾಯ ಕಂಡುಹಿಡಿಯಿರಿ, 1 ಕೋಟಿ ರೂ. ಗೆಲ್ಲಿರಿ!
ಕೊರೊನಾ ವೈರಸ್ ಹರಡುವಿಕೆ ತಡೆಗೆ ಮಾರ್ಚ್ 25ರಂದು ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಂದಿನಿಂದ ಕಾರ್ಪೊರೇಟ್ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಣ್ಣಪುಟ್ಟ ಕಂಪನಿಗಳು ಕೂಡ ತಮ್ಮ ಕೆಲಸ ಕಾರ್ಯ ಮುಂದುವರಿಸಲು ಆನ್‌ಲೈನ್ ವಿಡಿಯೊ ಮಾರ್ಗವನ್ನು ಕಂಡುಕೊಂಡಿವೆ. ಈ ರೀತಿಯ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಸದ್ದು ಮಾಡಿದ್ದು ಝೂಮ್ ಎಂಬ ಆ್ಯಪ್. ಇದೀಗ ಸೈಬರ್ ಭದ್ರತೆಯ ದೃಷ್ಟಿಯಿಂದ ಅದನ್ನು ಬಳಸದಂತೆ ಕೇಂದ್ರ ಸರ್ಕಾರ ಮತ್ತು ಇತರ ತಂತ್ರಜ್ಞಾನ ಜಗತ್ತಿನ ದಿಗ್ಗಜರೂ ಹೇಳಿರುವುದರಿಂದ ಹೊಸ ಸಮಸ್ಯೆ ಶುರುವಾಗಿದೆ. ಇದೀಗ, ಮೇಕ್ ಇನ್…