ಫ್ಯಾಬ್ಲೆಟ್/ಟ್ಯಾಬ್ಲೆಟ್‌ಗೆ ಅನುಕೂಲವಿರುವ ಕನ್ನಡ ಕೀಬೋರ್ಡ್

ಇಡೀ ಕೀಲಿಮಣೆಯು ಕನ್ನಡ ವರ್ಣಮಾಲೆಯ ಅನುಕ್ರಮಣಿಕೆಯಲ್ಲಿದೆ. ಇಲ್ಲಿ ಕಗಪ, ಇನ್‌ಸ್ಕ್ರಿಪ್ಟ್, ಫೋನೆಟಿಕ್ (ಟ್ರಾನ್ಸ್‌ಲಿಟರೇಶನ್ – ಲಿಪ್ಯಂತರ) ಹೀಗೆಲ್ಲಾ ವೈವಿಧ್ಯವಿಲ್ಲ. ಸ್ವರಾಕ್ಷರಗಳೆಲ್ಲವೂ ಒಂದೇ ಕೀಲಿಯಲ್ಲಿ ಗುಂಪುಗೂಡಿವೆ. ವ್ಯಂಜನಾಕ್ಷರಗಳು ನಾವು ಕನ್ನಡ ಕಲಿಯಲಾರಂಭಿಸಿದಾಗ ಬಳಪದಲ್ಲಿ ಬರೆದಂತಹಾ ಸ್ಥಾನಗಳಲ್ಲೇ ಇವೆ. ಇದಲ್ಲದೆ, ಒತ್ತಕ್ಷರ, ಮಾತ್ರಾ ಸಂಯೋಜನೆ… ಇವೆಲ್ಲವೂ ಚಕ್ರಾಕಾರದ ಪರದೆಯಲ್ಲಿ ಕಾಣಿಸುವುದರಿಂದಲೇ ಇದಕ್ಕೆ ಸ್ವರಚಕ್ರ ಎಂದು ಹೆಸರಿಸಲಾಗಿದೆ.

Rate this:

ವಿಂಡೋಸ್‌ನಲ್ಲಿ ಕನ್ನಡ ಟೈಪ್ ಮಾಡಲು ಟೂಲ್

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಆಗಸ್ಟ್ 12, 2013 ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರ್ ಸಿಸ್ಟಂಗಳಲ್ಲಿ ಯುನಿಕೋಡ್ ಕನ್ನಡ ಅಕ್ಷರಗಳು ಕಾಣಿಸಬೇಕಿದ್ದರೆ ಏನು ಮಾಡಬೇಕೆಂದು ಕಳೆದ ವಾರ ಓದಿದ್ದೀರಿ. Inscript ಎಂಬ ಕೀಬೋರ್ಡ್ ವಿನ್ಯಾಸದ ಅರಿವು ಇರುವವರಿಗೆ ಟೈಪ್ ಮಾಡಲೂ ಅದು ಅನುಕೂಲ ಮಾಡುತ್ತದೆ. ಆದರೆ, Inscript ತಿಳಿಯದವರಿಗೆ ಮತ್ತು ಕೆಜಿಪಿ/ನುಡಿ ಕೀಬೋರ್ಡ್ ಟೈಪಿಂಗ್ ಶೈಲಿ ಗೊತ್ತಿರುವವರಿಗೆ ಕನ್ನಡದಲ್ಲಿ ಟೈಪ್ ಮಾಡುವುದು ಕಷ್ಟವಾಗುತ್ತದೆಯಲ್ಲವೇ? ಅದರ ನಿವಾರಣೆಗಾಗಿ ಮೈಕ್ರೋಸಾಫ್ಟ್ ಕಂಪನಿಯೇ ಒಂದು ಇನ್‌ಪುಟ್ ಮೆಥಡ್ ಎಡಿಟರ್ (IME) ಅನ್ನು ತನ್ನ…

Rate this:

ವಿಂಡೋಸ್ ಫೋನ್‌ನಲ್ಲಿ ಕನ್ನಡ ಟೈಪ್ ಮಾಡಲು ಟೂಲ್

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಮೇ 27, 2013 ಸ್ಮಾರ್ಟ್‌ಫೋನ್‌ಗಳ ಮೂಲಕ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದೆ. ಅಂತೆಯೇ ಬಹುತೇಕರಿಗೆ ತಮ್ಮ ಮಾತೃಭಾಷೆಯಲ್ಲೇ ಸಂವಹನ ನಡೆಸುವ ಉತ್ಸಾಹ ಹೆಚ್ಚಾಗುತ್ತಿರುವಂತೆಯೇ, ಪ್ರಾದೇಶಿಕ ಭಾಷೆಗಳಲ್ಲಿ ಓದಲು, ಬರೆಯಲು ಅನುಕೂಲ ಮಾಡಿಕೊಡುವುದರ ಬಗ್ಗೆ ಅಪ್ಲಿಕೇಶನ್ ಡೆವಲಪರ್‌ಗಳು ಉತ್ಸಾಹ ತೋರಿದ್ದಾರೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪ್ ಮಾಡಲು ಸಾಕಷ್ಟು ಉಚಿತ ಟೂಲ್‌ಗಳು ಲಭ್ಯವಿದ್ದರೂ, ಮೈಕ್ರೋಸಾಫ್ಟ್‌ನವರ ವಿಂಡೋಸ್ ಸಾಫ್ಟ್‌ವೇರ್ ಬಳಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಆಯ್ಕೆ ಇದುವರೆಗೆ ಇಲ್ಲದಿರುವುದು ಅಚ್ಚರಿಯ ಸಂಗತಿ. ಆದರೆ,…

Rate this:

ಮೊಬೈಲಿನಲ್ಲಿ ಕನ್ನಡ ಬರೆಯೋದು ಹೀಗೆ

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ-10” (ಅಕ್ಟೋಬರ್ 29, 2012) ಮೊಬೈಲ್‌ಗಳಲ್ಲಿ ಕನ್ನಡದ ವೆಬ್‌ಸೈಟುಗಳನ್ನು ನೋಡುವುದು ಹೇಗೆ ಅಂತ ಹಿಂದಿನ ಅಂಕಣವೊಂದರಲ್ಲಿ ತಿಳಿಸಿದ ಬಳಿಕ, ಕನ್ನಡ ಬರೆಯುವುದು ಹೇಗೆ ಹೇಳಿಕೊಡಿ ಅಂತ ಫೇಸ್‌ಬುಕ್‌ನಲ್ಲಿ ಹಲವರು ಕೇಳಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ (ಕಂಗ್ಲಿಷ್!) ಬರೆಯುತ್ತಾ, ಓದುವವರಿಗೂ ತ್ರಾಸ ಉಂಟುಮಾಡುತ್ತಿದ್ದಾರೆ, ‘ಒಂದೋ ಇಂಗ್ಲಿಷ್ ಭಾಷೆಯನ್ನೇ ಬಳಸಿ, ಇಲ್ಲವೇ ಪೂರ್ತಿ ಕನ್ನಡದಲ್ಲೇ ಬರೆಯಿರಿ, ಕಂಗ್ಲಿಷ್ ಮಾತ್ರ ಬೇಡ್ವೇಬೇಡ’ ಎಂಬ ಆತ್ಮೀಯ ಧಮಕಿಯನ್ನೂ ನೋಡಿದ್ದೇವೆ. ‘ಮೊಬೈಲಿನಲ್ಲಿ ಕನ್ನಡ ಬರುವುದಿಲ್ಲ, ಬರೆಯಲಾಗುವುದಿಲ್ಲ’ ಎಂಬುದು ಹೆಚ್ಚಿನವರು…

Rate this: