ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್: ಒಂದು ಆ್ಯಪ್, ಹಲವು ಪ್ರಯೋಜನಗಳು

ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ನ್ಯೂರಲ್ ನೆಟ್‌ವರ್ಕ್ಸ್ ಎಂಬ ತಂತ್ರಜ್ಞಾನಗಳನ್ನು ಆಧರಿಸಿ ಕೆಲಸ ಮಾಡುವ ಈ ತಂತ್ರಾಂಶವು ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ (ಕಂಪ್ಯೂಟರ್ ಸಹಿತ) ಕಾರ್ಯಾಚರಣಾ ವ್ಯವಸ್ಥೆಗಳಿಗೆ ಆ್ಯಪ್ ರೂಪದಲ್ಲಿ ಲಭ್ಯವಿದೆ. ಕನ್ನಡ, ಮಲಯಾಳಂ, ಪಂಜಾಬಿ, ಗುಜರಾತಿ ಹಾಗೂ ಮರಾಠಿ ಭಾಷೆಗಳು ಹೊಸದಾಗಿ ಸೇರ್ಪಡೆಯಾಗಿದ್ದರೆ, ಹಿಂದಿ, ಬಂಗಾಳಿ, ತಮಿಳು, ತೆಲುಗು ಮತ್ತು…

Rate this:

ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?

ಸೆಲ್ ಫೋನ್‌ಗಳು ಮಾರುಕಟ್ಟೆಗೆ ಬಂದಾಗ 1991ರಿಂದೀಚೆಗೆ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್ (ಸಿಮ್) ಕಾರ್ಡ್ ಎಂಬುದು ನಮಗೆ ಪರಿಚಯವಾಗಿತ್ತು. ತಂತ್ರಜ್ಞಾನ ಬೆಳೆಯುತ್ತಾ ಬಂದಂತೆ ಸಿಮ್ ಕಾರ್ಡ್ ಎಂಬ ಈ ಮೆಮೊರಿ ಚಿಪ್‌ನ ಗಾತ್ರವೂ ಕಿರಿದಾಗತೊಡಗಿ, ಪುಟ್ಟದಾದ ಮೈಕ್ರೋ ಸಿಮ್ ಬಂತು. ಆ ಬಳಿಕ ಹಗುರ ತೂಕದ, ತೆಳುವಾದ ಗಾತ್ರದ ಸ್ಮಾರ್ಟ್ ಫೋನ್‌ಗಳು ಬರತೊಡಗಿದಂತೆ, ಅದಕ್ಕೆ ಪೂರಕವಾಗಿ 2012ರಿಂದೀಚೆಗೆ ನ್ಯಾನೋ ಸಿಮ್ ಎಂಬ ತೀರಾ ಕಿರಿದಾದ ಗಾತ್ರದ ಸಿಮ್ ಕಾರ್ಡ್‌ಗಳು (ಬಹುತೇಕ ಸಾಧನಗಳಲ್ಲಿ) ಚಲಾವಣೆಯಲ್ಲಿವೆ. ಆದರೆ, ಎರಡು ವರ್ಷಗಳಿಂದೀಚೆಗೆ ಹೊಸ…

Rate this:

ಟ್ವಿಟರ್ ಯುಗದಲ್ಲಿ ರಾಮಾಯಣದ ರಾಮ, ಸೀತೆ, ಲಕ್ಷ್ಮಣರಿಗೆ ನಕಲಿಗಳ ಕಾಟ

ಇದೊಂದು ಪೀಳಿಗೆಯ ಸಂಘರ್ಷದ ಕಥೆ. ಆ ಕಾಲದಲ್ಲಿ ಟ್ವಿಟರ್, ಫೇಸ್‌ಬುಕ್ ಇರಲಿಲ್ಲ. ಆ ಕಾಲದ ಖ್ಯಾತನಾಮರಿಗೆ ಈಗ ಮರಳಿ ಬೆಲೆ ಬಂದಿದ್ದೇ ತಡ, ಅವರ ಹೆಸರಿನಲ್ಲಿ ಸಾಕಷ್ಟು ಖಾತೆಗಳನ್ನು ಈ ಪೀಳಿಗೆಯ ಮಂದಿ ನೋಂದಾಯಿಸಿಕೊಂಡುಬಿಟ್ಟಿದ್ದಾರೆ. ಅಂದಿನವರು ಸೋಷಿಯಲ್ ಮೀಡಿಯಾಗೆ ಕಾಲಿಡುವಷ್ಟರಲ್ಲಿ ಈ ಪೀಳಿಗೆಯವರು ಅವರ ಹೆಸರಿನಲ್ಲಿ ಖ್ಯಾತಿ ಗಳಿಸಿ ಆಗಿಬಿಟ್ಟಿದೆ! ನಕಲಿಗಳ ನಡುವೆ ಅಸಲಿ ಖಾತೆಗಳು ಕನಲಿ ಹೋಗಿವೆ. 1987ರಲ್ಲಿ ದೇಶದ ಜನರನ್ನು ಜಾತಿ, ಮತ ಭೇದವಿಲ್ಲದೆ ಒಗ್ಗೂಡಿಸಿ ಮನರಂಜಿಸಿದ್ದ ರಾಮಾಯಣ ಧಾರಾವಾಹಿ ಈಗ ಕೊರೊನಾ ವೈರಸ್…

Rate this:

ಮನೆಯೇ ಕಚೇರಿ: ಮೀಟಿಂಗ್‌ಗೆ ನೆರವಾಗುವ ‘ಝೂಮ್’

ಕೊರೊನಾ ವೈರಸ್ ಈ ಪರಿಯಾಗಿ ಮನುಷ್ಯನನ್ನು ಕಾಡುತ್ತದೆಯೆಂದು ಯಾರೂ ಊಹಿಸಿರಲಾರರು. ವಿಶ್ವದ ಬಹುತೇಕ ಜನರನ್ನು ಮನೆಯಲ್ಲೇ ಕೂರುವಂತೆ ಮಾಡಿರುವ ಈ ಕೋವಿಡ್-19 ಕಾಯಿಲೆಯು ಕಚೇರಿಯ ಅಗತ್ಯವಿಲ್ಲದೆ, ಮನೆಯಿಂದಲೇ ದುಡಿಯಬಹುದಾದ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಉತ್ತಮ ಇಂಟರ್ನೆಟ್ ಸಂಪರ್ಕವಿದ್ದರಾಯಿತಷ್ಟೇ. ಈಗಾಗಲೇ ಹಣಕಾಸು ಹಿಂಜರಿತದ ದೆಸೆಯಿಂದಾಗಿ ಅದೆಷ್ಟೋ ಕಂಪನಿಗಳು ಕಚೇರಿಯ ಖರ್ಚು ಕಡಿಮೆ ಮಾಡುವುದಕ್ಕಾಗಿ ಹೆಚ್ಚಿನ ಟೆಕಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾರಂಭಿಸಿತ್ತು. ಆದರೆ, ಭವಿಷ್ಯದ ಈ ವ್ಯವಸ್ಥೆಯ ಆಗಮನವನ್ನು ವೇಗವಾಗಿಸಿದ್ದು ಕೊರೊನಾ ವೈರಸ್ ತಂದಿರುವ ಅನಿವಾರ್ಯ ಲಾಕ್‌ಡೌನ್. ತಂಡವಾಗಿ…

Rate this:

‘ಕ್ವಾರಂಟೈನ್ ವಾಚ್’ ಆ್ಯಪ್ ಬಗ್ಗೆ ನಿಮಗಿದು ತಿಳಿದಿರಲಿ

ಹೋಂ ಕ್ವಾರಂಟೈನ್‌ನಲ್ಲಿದ್ದೀರಾ? ಹದ್ದಿನ ಕಣ್ಣಿಡುತ್ತದೆ ಈ ಆ್ಯಪ್! ವಿದೇಶಕ್ಕೆ ಹೋಗಿ ಬಂದವರಿಗೆ ಮತ್ತು ಕೊರೊನಾ ವೈರಸ್ ಸೋಂಕುಳ್ಳವರೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಕಡ್ಡಾಯ 14 ದಿನಗಳ ಕಾಲ ಮನೆಯೊಳಗಿನ ಪ್ರತ್ಯೇಕ ವಾಸಕ್ಕೆ ಸೂಚಿಸಿದರೂ, ಕೆಲವರು ವಿವೇಕಶೂನ್ಯವಾಗಿ ವರ್ತಿಸಿ ಊರೆಲ್ಲಾ ಓಡಾಡುತ್ತಾ ವೈರಸ್ ಹರಡಲು ಕಾರಣರಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮವಾಗಿ ಇತರರಿಗೂ ಸೋಂಕು ಹರಡುವ ಶಂಕಿತರ ಚಲನವಲನಕ್ಕೆ ಕಡಿವಾಣ ಹಾಕಲೆಂದೇ ಕರ್ನಾಟಕ ಸರ್ಕಾರವು ಈಗ ತಂತ್ರಜ್ಞರ ನೆರವು ಪಡೆದು ಒಂದು ಮೂರನೇ ಕಣ್ಣನ್ನು ಸೃಷ್ಟಿಸಿದೆ.…

Rate this:

ವರ್ಕ್ ಫ್ರಂ ಹೋಂ?: ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿಸುವುದು ಹೀಗೆ!

ವರ್ಕ್ ಫ್ರಂ ಹೋಮ್? ಇಂಟರ್ನೆಟ್ ಸಂಪರ್ಕ ತತ್‌ಕ್ಷಣಕ್ಕೆ ಸಿಗುತ್ತಿಲ್ಲವಾದರೆ, ನಿಮ್ಮ ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಧಾನ ಇಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್. ಹೀಗಾಗಿ ವರ್ಕ್ ಫ್ರಂ ಹೋಮ್ ಅಂದರೆ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ. ಆದರೆ, ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ಕೂಡ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ಹೊಸದಾಗಿ ವೈಫೈ ಹಾಟ್‌ಸ್ಪಾಟ್ ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕ…

Rate this:

ಮೊಬೈಲ್ ಫೋನ್‌ನಿಂದಲೂ ಕರೋನಾ ವೈರಸ್ ಹರಡುತ್ತದೆಯೇ?

ಎಲ್ಲೆಡೆ ಕೊರೊನಾ ವೈರಸ್ಸಿನದ್ದೇ ರಾದ್ಧಾಂತ. ಈ ವೈರಸ್ ಹರಡುವ ಕೋವಿಡ್-19 ಕಾಯಿಲೆಯಿಂದ ಪಾರಾಗಲು ಜನರು ಆತಂಕ ಪಡುತ್ತಿರುವಂತೆಯೇ, ಫೇಕ್ ಸುದ್ದಿಗಳು, ಭಯ ಹುಟ್ಟಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಈ ಆತಂಕದ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ‘ಸೋಷಿಯಲ್ ಡಿಸ್ಟೆನ್ಸಿಂಗ್’ ಅಂದರೆ ಸಾಮಾಜಿಕವಾಗಿ ಪರಸ್ಪರ ಸಂಪರ್ಕದಿಂದ ದೂರ ಇರುವುದು ಇಲ್ಲವೇ ಅಂತರ ಕಾಯ್ದುಕೊಳ್ಳುವುದು ಎಂಬ ವಿಧಾನವನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಆದರೆ ಈ ಪದಗುಚ್ಛವನ್ನೇ, ‘ಸೋಷಿಯಲ್ ಮೀಡಿಯಾ ಡಿಸ್ಟೆನ್ಸಿಂಗ್’ ಎಂದು ತಿಳಿದುಕೊಂಡವರು ಮತ್ತೊಂದು ವಿಧದಲ್ಲಿ…

Rate this:

ಸುನೋಜೀ, ಬರುತ್ತಿದೆ 5G!: ನೀವು ತಿಳಿಯಬೇಕಾದ ವಿಚಾರ

5ಜಿ ಎಂಬುದು ಮೊಬೈಲ್ ನೆಟ್‌ವರ್ಕ್‌ನ ಅತ್ಯಾಧುನಿಕ ತಂತ್ರಜ್ಞಾನ. ಇದರಲ್ಲಿ ‘ಜಿ’ ಅಕ್ಷರವು ಜನರೇಶನ್ ಅಥವಾ ಪೀಳಿಗೆ/ತಲೆಮಾರು ಎಂಬುದನ್ನು ಸೂಚಿಸುತ್ತದೆ. ಬಹುಶಃ 1ನೇ ಪೀಳಿಗೆ ತಂತ್ರಜ್ಞಾನವನ್ನು ನಾವು-ನೀವು ಬಳಸಿರಲಿಕ್ಕಿಲ್ಲ. ಮೊಬೈಲ್ ಫೋನ್ ನಾವು ಬಳಸಲಾರಂಭಿಸಿದ್ದೇ 2ಜಿ ತಂತ್ರಜ್ಞಾನದ ಮೂಲಕ. ಅದಕ್ಕೆ ಮೊದಲು 1973ರಲ್ಲಿ ಅಮೆರಿಕದ ಎಂಜಿನಿಯರ್ ಮಾರ್ಟಿನ್ ಕೂಪರ್ ಎಂಬಾತ, ಮೋಟೋರೋಲ ಕಂಪನಿಯ ತನ್ನ ಜತೆಗಾರರೊಂದಿಗೆ ಸೇರಿ ಮೊದಲ ಬಾರಿಗೆ ಮೊಬೈಲ್ ಫೋನ್ ರೂಪಿಸಿ, ಕರೆ ಮಾಡಿ ಇತಿಹಾಸ ಸೃಷ್ಟಿಸಿದ್ದ. ಅಂದಿನಿಂದ ಈ ಮೊಬೈಲ್ ಫೋನೆಂಬ ಅಂಗೈಯ ಅರಮನೆಯು…

Rate this:

ಎಟಿಎಂ ಸ್ಕಿಮ್ಮಿಂಗ್ ವಂಚನೆ: ಸುರಕ್ಷಿತವಾಗಿರಲು ಇಲ್ಲಿವೆ ಟಿಪ್ಸ್

ಕಳೆದ ತಿಂಗಳಾಂತ್ಯದಲ್ಲಿ ಎಟಿಎಂ ಸ್ಕಿಮ್ಮರ್‌ಗಳಿಂದಾಗಿ ಹಲವಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಸುದ್ದಿಯೊಂದಿಗೆ, ಇದರಲ್ಲಿ ಸಕ್ರಿಯವಾಗಿದ್ದ ನೈಜೀರಿಯಾ ಗ್ಯಾಂಗನ್ನು ಬಂಧಿಸಿರುವುದೂ ಸದ್ದು ಮಾಡಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿತ್ರದುರ್ಗದಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು. ಎಟಿಎಂ ಸ್ಕಿಮ್ಮಿಂಗ್‌ನಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡವರ ಕಥೆಯನ್ನು ಇತ್ತೀಚಿನ ವರ್ಷಗಳಲ್ಲಿ ಕೇಳುತ್ತಲೇ ಇದ್ದೇವೆ. ಬ್ಯಾಂಕುಗಳು ನೀಡುವ ಎಟಿಎಂ ಕಾರ್ಡು ನಮ್ಮ ಕೈಯಲ್ಲೇ ಭದ್ರವಾಗಿದ್ದರೂ, ನಮ್ಮ ಖಾತೆಯಿಂದ ಅವರು ಹಣವನ್ನು ಹೇಗೆ ಲೂಟಿ ಮಾಡುತ್ತಿದ್ದರು ಎಂಬುದು ಜನಸಾಮಾನ್ಯರಿಗೆ ಅರ್ಥವಾಗದ ಸಂಗತಿ. ಹಾಗಿದ್ದರೆ ನಾವು…

Rate this:

ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳು

ಅನಿವಾರ್ಯ ಸಹಯೋಗಿಯಾಗಿರುವ ವಾಟ್ಸ್ಆ್ಯಪ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಏನೆಲ್ಲ ಹೊಸ ಬದಲಾವಣೆಗಳು ಬಂದಿವೆ ಎಂಬುದನ್ನು ಗಮನಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ. ಉತ್ತರಿಸಲು ಸ್ವೈಪ್ ಯಾವುದೇ ಸಂದೇಶವೊಂದಕ್ಕೆ ಉತ್ತರಿಸಬೇಕಿದ್ದರೆ ಆ ಸಂದೇಶದ ಮೇಲೆ ಬೆರಳಿನಿಂದ ಬಲಕ್ಕೆ ಸ್ವೈಪ್ ಮಾಡಿದರಾಯಿತು. ಹಿಂದೆ ಸಂದೇಶವನ್ನು ಒತ್ತಿ ಹಿಡಿದು, ಮೇಲ್ಭಾಗದಲ್ಲಿರುವ ರಿಪ್ಲೈ ಬಟನ್ ಒತ್ತಬೇಕಿತ್ತು. ಗ್ಯಾಲರಿಯಲ್ಲಿ ಅದೃಶ್ಯವಾಗುವ ಚಿತ್ರಗಳು ವಾಟ್ಸ್ಆ್ಯಪ್‌ನಲ್ಲಿ ನಮ್ಮ ಸ್ನೇಹಿತರಿಂದ ಅಥವಾ ಗ್ರೂಪ್‌ಗಳಲ್ಲಿ ಸಾಕಷ್ಟು ಚಿತ್ರಗಳು ಬರುತ್ತಿರುತ್ತವೆ. ಅವುಗಳೆಲ್ಲವೂ ಗ್ಯಾಲರಿ ಆ್ಯಪ್ ಮೂಲಕ…

Rate this: