ಮೊಬೈಲ್‌ನಲ್ಲಿ ಡಾರ್ಕ್ ಮೋಡ್ ಎಂಬ ಹೊಸ ಟ್ರೆಂಡ್: ಏನಿದು, ನಮಗೇನು ಲಾಭ?
ಕಳೆದ ಎರಡೇ ಎರಡು ವರ್ಷಗಳಲ್ಲಿ ಮೊಬೈಲ್ ಅವಲಂಬನೆ ಜಾಸ್ತಿಯಾಗಿಬಿಟ್ಟಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಅದರಲ್ಲೂ ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳ ಬಳಕೆ ಹೆಚ್ಚಾಗಿದೆ; ಮಕ್ಕಳಾದರೆ ಗೇಮ್ಸ್‌ನಲ್ಲಿ (ದೊಡ್ಡವರೂ ಕೂಡ!) ಮುಳುಗೇಳುತ್ತಿದ್ದಾರೆ. ಇದರ ನೇರ ಪರಿಣಾಮವಾಗುತ್ತಿರುವುದು ನಮ್ಮ ಕಣ್ಣುಗಳ ಮೇಲೆ ಎಂಬುದು ಸರ್ವವಿದಿತ. ಹಾಗೂ ಕಣ್ಣಿಗೇ ನಿದ್ದೆ ಹತ್ತುವುದರಿಂದಾಗಿ ನಿದ್ದೆಯ ಮೇಲೂ, ಪರಿಣಾಮವಾಗಿ ತತ್ಸಂಬಂಧಿತ ಅನಾರೋಗ್ಯಗಳಿಗೂ ಮೊಬೈಲ್ ಫೋನೆಂಬ ಮಾಯಾಲೋಕವು ನಮಗರಿವಿಲ್ಲದಂತೆಯೇ ಕಾರಣವಾಗುತ್ತಿರುವುದು ದಿಟ. ನಿದ್ದೆಗೆ ಕಾರಣವಾಗುವ ಹಾರ್ಮೋನುಗಳಲ್ಲಿ ಮೆಲಟೋನಿನ್ ಕೂಡ ಒಂದು. ಆದರೆ ಮೊಬೈಲ್, ಟ್ಯಾಬ್ಲೆಟ್,…