ಟೆಕ್ ಟಾನಿಕ್: ಮೊಬೈಲ್ ಟ್ಯಾರಿಫ್: ಯಾವುದು ಒಳ್ಳೆಯದು?

ಭಾರತೀಯ ಟೆಲಿಕಾಂ ಪ್ರಾಧಿಕಾರವು ಬಳಕೆದಾರರಿಗೆ ಅತ್ಯುತ್ತಮ ಆನ್‌ಲೈನ್ ಟೂಲ್ ಒಂದನ್ನು ಒದಗಿಸಿದೆ. ಬೇರೆ ಬೇರೆ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳ ಟ್ಯಾರೀಫ್ ಹೇಗಿದೆ ಅಂತ ತಿಳಿದುಕೊಂಡು ಹೋಲಿಸಿ ನೋಡುವ ಒಂದು ಜಾಲ ತಾಣವನ್ನು ರೂಪಿಸಿದೆ. ಅದನ್ನು tariff.trai.gov.in ಎಂಬಲ್ಲಿ ನೋಡಬಹುದು. ಸದ್ಯಕ್ಕೆ ಇದು ದಿಲ್ಲಿ ಟೆಲಿಕಾಂ ವೃತ್ತದ ದರಗಳನ್ನು ಮಾತ್ರ ತೋರಿಸುತ್ತಿದೆ. ಶೀಘ್ರದಲ್ಲೇ ಕರ್ನಾಟಕದ ವೃತ್ತವೂ ಸೇರಿಕೊಳ್ಳುವ ನಿರೀಕ್ಷೆ ಇದೆ. ಆದರೆ, ನಮ್ಮ ಆಪರೇಟರ್‌ಗಳ (ಏರ್‌ಟೆಲ್, ಐಡಿಯಾ, ಬಿಎಸ್ಸೆನ್ನೆಲ್, ವೊಡಾಫೋನ್, ಜಿಯೋ ಇತ್ಯಾದಿ) ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್…

Rate this:

ಟೆಕ್‌ಟಾನಿಕ್: ಸಂಗಾತಿ ಮೊಬೈಲ್ ಕದ್ದು ನೋಡಿದ್ರೆ ದಂಡ!

ಸೌದಿ ಅರೇಬಿಯಾದಲ್ಲಿ ಹೊಸದೊಂದು ಕಾನೂನು ಕಳೆದ ವಾರ ಜಾರಿಗೆ ಬಂದಿದೆ. ಸಂಗಾತಿಯ ಮೊಬೈಲ್ ಫೋನ್ ಕದ್ದು ನೋಡುವುದು (ಸ್ಪೈ ಮಾಡುವುದು) ಕ್ರಿಮಿನಲ್ ಅಪರಾಧ. ಇದಕ್ಕೆ ಭಾರೀ ದಂಡ ತೆರಬೇಕಾಗಬಹುದು ಮತ್ತು ಒಂದು ವರ್ಷ ಜೈಲಿಗೂ ಹೋಗಬಹುದು. ಇದಕ್ಕೆ ತೆರಬೇಕಾಗಿರುವ ದಂಡದ ಪ್ರಮಾಣವೆಷ್ಟು ಗೊತ್ತೇ? 5 ಲಕ್ಷ ಸೌದಿ ರಿಯಲ್ಸ್ (ಅಂದರೆ ಸುಮಾರು 87 ಲಕ್ಷ ರೂ.). ಕಳೆದ ವಾರದಿಂದ ಅಲ್ಲಿ ಈ ಸೈಬರ್-ಕ್ರೈಮ್ ನಿರೋಧಕ ಕಾನೂನು ಜಾರಿಗೊಳಿಸಲಾಗಿದ್ದು, ಇದು ವ್ಯಕ್ತಿಗಳ ನೈತಿಕತೆಯನ್ನು ಹಾಗೂ ಖಾಸಗಿತನವನ್ನು ರಕ್ಷಿಸುವ ಉದ್ದೇಶ…

Rate this:

ಟೆಕ್ ಟಾನಿಕ್: BFF ಎಂಬ ನಕಲಿ ಸುದ್ದಿ

ಫೇಸ್‌ಬುಕ್ ನಮ್ಮ ಪ್ರೈವೆಸಿಯನ್ನು ಬಯಲಾಗಿಸುತ್ತಿದೆ ಎಂಬ ಸುದ್ದಿಯೂ, ಅದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸುವುದಕ್ಕೂ ಮೊದಲು, ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿಯೇ ಸದ್ದು ಮಾಡುತ್ತಿತ್ತು. ಅದೆಂದರೆ, ನಿಮ್ಮ ಪ್ರೊಫೈಲ್ ಸುರಕ್ಷಿತವೇ ಎಂದು ತಿಳಿಯಲು BFF ಎಂಬ ಕೋಡ್ ಒಂದನ್ನು ಜುಕರ್‌ಬರ್ಗ್ ಸಂಶೋಧಿಸಿದ್ದಾರೆ, ಕಾಮೆಂಟ್‌ನಲ್ಲಿ ಇದನ್ನು ಟೈಪ್ ಮಾಡಿ, ಅದು ಹಸಿರು ಬಣ್ಣವಾಗಿ ಪರಿವರ್ತನೆಗೊಂಡರೆ ಸುರಕ್ಷಿತ ಎಂದರ್ಥ, ಇಲ್ಲವಾದರೆ, ಕೂಡಲೇ ಪಾಸ್‌ವರ್ಡ್ ಚೇಂಜ್ ಮಾಡಿಕೊಳ್ಳಿ, ಯಾರೋ ನಿಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ…

Rate this:

ಟೆಕ್ ಟಾನಿಕ್: ಟ್ವಿಟರ್ ವೆರಿಫೈಡ್ ಖಾತೆ

280 ಅಕ್ಷರಗಳಿಗೆ ಅವಕಾಶವಿರುವ ಕಿರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿಯಿಂದಾಗಿ ಸೆಲೆಬ್ರಿಟಿಗಳು ಹಾಗೂ ಇತರರಿಗೂ ತುಂಬ ಹಾನಿಯಾಗುತ್ತಿತ್ತು. ಅಂದರೆ, ನಿರ್ದಿಷ್ಟ ವ್ಯಕ್ತಿಯ ಐಡೆಂಟಿಟಿಯನ್ನೇ ಹೋಲುವ ನಕಲಿ ಖಾತೆಗಳಿಂದಾಗಿ ಅಸಲಿ ವ್ಯಕ್ತಿಗಳು ಇರಸುಮುರಸಿಗೆ ಈಡಾಗುತ್ತಿದ್ದರು. ಇದಕ್ಕಾಗಿ 2016ರಲ್ಲಿ ಟ್ವಿಟರ್ ದೃಢೀಕೃತ ಖಾತೆ (ವೆರಿಫೈಡ್ ಅಕೌಂಟ್) ಒದಗಿಸುವ ಪರಿಪಾಠ ಆರಂಭಿಸಿತು. ಆದರೆ ವಿವಾದಾಸ್ಪದ ಖಾತೆಗಳಿಗೂ ವೆರಿಫೈಡ್ ಅಕೌಂಟ್ ಎಂಬ ನೀಲಿ ಟಿಕ್ ಮಾರ್ಕ್ ನೀಡುವುದಕ್ಕೆ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಟ್ವಿಟರ್ 2017ರಲ್ಲಿ ಖಾತೆಯ ದೃಢೀಕರಣವನ್ನು ನಿಲ್ಲಿಸಿತ್ತು. ಇದೀಗ,…

Rate this:

ಟೆಕ್‌ಟಾನಿಕ್: ಫೇಸ್‌ಬುಕ್ ಆಲ್ಬಂ ಫೋಟೋಗಳ ಡೌನ್‌ಲೋಡ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋಗಳನ್ನೆಲ್ಲ ನೀವು ಫೇಸ್‌ಬುಕ್‌ಗೆ ಈಗಾಗಲೇ ಅಪ್‌ಲೋಡ್ ಮಾಡಿದ್ದೀರಿ. ಅದರಲ್ಲಿ ಮದುವೆಯದ್ದೋ, ಬರ್ತಡೇ ಪಾರ್ಟಿಯದ್ದೋ ಅಥವಾ ಬೇರಾವುದಾದರೂ ಕಾರ್ಯಕ್ರಮದ್ದೋ ಫೋಟೋಗಳಿರಬಹುದು. ಆದರೆ, ಆವತ್ತು ಫೋಟೋ ತೆಗೆದಿದ್ದ ಫೋನ್ ನಿಮ್ಮ ಬಳಿ ಈಗಿಲ್ಲ. ಯಾವುದೋ ಕಾರಣಕ್ಕೆ ಅದನ್ನು ‘ಫ್ಯಾಕ್ಟರಿ ರೀಸೆಟ್’ ಮಾಡಬೇಕಾಗಿಬಂದಿದೆ ಅಥವಾ ಅದನ್ನು ಬದಲಾಯಿಸಿರುತ್ತೀರಿ. ಹೀಗಾದಾಗ ಆ ಫೋಟೋಗಳೂ ಹೋಗಿಬಿಟ್ಟಿವೆ. ಅವುಗಳು ಮತ್ತೆ ನಿಮಗೆ ಬೇಕೆಂದಾದರೆ ಈ ಚಿತ್ರಗಳನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಂತ ಗೊತ್ತೇ? ಒಂದು ನಿರ್ದಿಷ್ಟ ಕಾರ್ಯಕ್ರಮದ ಹಲವಾರು ಫೋಟೋಗಳಿದ್ದರೆ ಅವುಗಳನ್ನು ಆಲ್ಬಂ ರೂಪದಲ್ಲಿ…

Rate this:

ಟೆಕ್ ಟಾನಿಕ್: ಯೂನಿಕೋಡ್‌ನಲ್ಲಿ ಅಕ್ಷರ ಶೈಲಿ ವೈವಿಧ್ಯ

ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಲೇಖನಗಳ ಪುಟವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಯೂನಿಕೋಡ್ ಶಿಷ್ಟತೆಯ ಕನ್ನಡ ಅಕ್ಷರಗಳಲ್ಲಿ ವೈವಿಧ್ಯ ಇಲ್ಲದಿರುವುದು ಒಂದು ಮಟ್ಟಿನ ತೊಡಕು. ಯಾಕೆಂದರೆ, ನುಡಿ, ಬರಹ ಅಥವಾ ಶ್ರೀಲಿಪಿಗಳಲ್ಲಿದ್ದಷ್ಟು ಅಕ್ಷರ ವಿನ್ಯಾಸದ ವೈವಿಧ್ಯಗಳು ಯೂನಿಕೋಡ್‌ನಲ್ಲಿ ರೂಪುಗೊಂಡಿಲ್ಲ. ಆದರೂ, ಸದ್ಯಕ್ಕೆ ತುಂಗಾ ಹಾಗೂ ಏರಿಯಲ್ ಯೂನಿಕೋಡ್ ಎಂಎಸ್ ಎಂಬ ಫಾಂಟ್‌ಗಳ ಜತೆಗೆ ಕೇದಗೆ, ಮಲ್ಲಿಗೆ, ಸಂಪಿಗೆ, ಅಕ್ಷರ, ಜನ ಕನ್ನಡ, ರಘು ಕನ್ನಡ, ಸರಸ್ವತಿ ಮುಂತಾದವು ಅಂತರಜಾಲದಲ್ಲಿ ಉಚಿತವಾಗಿ ಲಭ್ಯ ಇವೆ. ಇವುಗಳ ಅಕ್ಷರ ಶೈಲಿಗಳು ಒಂದಕ್ಕಿಂತ…

Rate this:

ಟೆಕ್ ಟಾನಿಕ್: ಅಕ್ಷರ ಕೂಡಿಕೊಳ್ಳದಂತೆ ಟೈಪ್ ಮಾಡುವುದು

ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ ಕೆಲವರಿಗಿನ್ನೂ ಸಂದೇಹವಿದೆ. ಅದೆಂದರೆ, ಅರ್ಧ ವ್ಯಂಜನಗಳು ಕೂಡಿಕೊಳ್ಳದಂತೆ ಮಾಡುವುದು ಹೇಗೆ? ಉದಾಹರಣೆಗೆ, ‘ಫೇಸ್‌ಬುಕ್’ ಅಂತ ಬರೆಯಬೇಕಿರುವುದು ‘ಫೇಸ್ಬುಕ್’ ಅಂತಾಗುತ್ತದೆ. ಈ ರೀತಿಯಾಗಿ ಅರ್ಧಾಕ್ಷರದ ಅಂತ್ಯವು ಮುಂದಿನ ವ್ಯಂಜನಾಕ್ಷರದೊಂದಿಗೆ ಕೂಡಿಕೊಳ್ಳದಂತೆ ಮಾಡುವುದಕ್ಕೆ ಹಲವರು ತ್ರಾಸ ಪಡುತ್ತಿದ್ದಾರೆ. ಅಕ್ಷರಗಳು ಕೂಡಿಕೊಳ್ಳದಂತೆ ಮಾಡಲು, ಯುನಿಕೋಡ್ ಅಕ್ಷರ ಶೈಲಿಯಲ್ಲಿ ‘ಝೀರೋ ವಿಡ್ತ್ ನಾನ್ ಜಾಯಿನರ್’…

Rate this:

ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ ಸ್ಥಳದಲ್ಲಿರುತ್ತದೆ. ಲಾಗೌಟ್ ಬಟನ್ ನೋಡಲು ಹೀಗೆ ಮಾಡಿ: ಟ್ವಿಟರ್ ಆ್ಯಪ್ ಓಪನ್ ಮಾಡಿ, ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಸ್ಪರ್ಶಿಸಿ. ಕಾಣಿಸಿಕೊಳ್ಳುವ ಮೆನು ಸ್ಕ್ರೀನ್‌ನಲ್ಲಿ ಕೆಳಗೆ ‘ಸೆಟ್ಟಿಂಗ್ಸ್ ಆ್ಯಂಡ್ ಪ್ರೈವೆಸಿ’ ಎಂದಿರುವಲ್ಲಿ ಸ್ಪರ್ಶಿಸಿದಾಗ ಮತ್ತೊಂದು ಸ್ಕ್ರೀನ್ ಪಾಪ್-ಅಪ್ ಆಗುತ್ತದೆ. ಅಲ್ಲಿ ‘ಅಕೌಂಟ್’ ಎಂಬುದನ್ನು ಕ್ಲಿಕ್ ಮಾಡಿದಾಗ ತಳಭಾಗದಲ್ಲಿ ಲಾಗೌಟ್…

Rate this:

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ನಂಬರ್ ಹಾಗೂ ರಕ್ತದ ಗುಂಪು ದಾಖಲಿಸಿದರೆ, ಆ ಪ್ರದೇಶದಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದರೆ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಈ ಫೇಸ್‌ಬುಕ್ ರಕ್ತದಾನಿಗಳ ಗುಂಪಿನಲ್ಲಿ ಈಗಾಗಲೇ 60 ಲಕ್ಷ ಮಂದಿ ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಫೇಸ್‌ಬುಕ್ ಪ್ರಕಟಿಸಿದೆ. ಈ…

Rate this:

ಟೆಕ್ ಟಾನಿಕ್: ಸ್ಟೋರ್‌ಗಳಲ್ಲಿ ಆ್ಯಪ್‌ಗಳೆಷ್ಟಿವೆ ಗೊತ್ತೇ?

ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ – ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್ ಸಾಧನಗಳಿಗೆ ವೈವಿಧ್ಯಮಯ ಆ್ಯಪ್‌ಗಳಿರುವ ತಾಣಗಳಿವೆ. ನಮ್ಮಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ನಮಗೆ ಬೇಕಾದಂತೆ ಫೋನನ್ನು ಬದಲಾಯಿಸಬಲ್ಲ ಆ್ಯಪ್‌ಗಳಿರುವ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಮಾರ್ಚ್ 2017ರ ಮಾಹಿತಿಯ ಅನುಸಾರ, 28 ಲಕ್ಷ ಆ್ಯಪ್‌ಗಳಿವೆ. ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗುತ್ತಿರುವ ಆ್ಯಪಲ್ ಸ್ಟೋರ್‌ನಲ್ಲಿರುವ ಆ್ಯಪ್‌ಗಳ ಸಂಖ್ಯೆ 22 ಲಕ್ಷ. ಇತ್ತೀಚೆಗೆ ಬೇಡಿಕೆ…

Rate this: