ಟೆಕ್‌ಟಾನಿಕ್: ಭಾಷಾಂತರಕ್ಕೆ ಗೂಗಲ್ ಆ್ಯಪ್
ವಿದೇಶ ಪ್ರವಾಸ ಮಾಡುವವರಿಗೆ ಗೂಗಲ್ ಒದಗಿಸಿರುವ ಗೂಗಲ್ ಟ್ರಾನ್ಸ್‌ಲೇಟ್ ಎಂಬ ಆ್ಯಪ್ ಅತ್ಯುತ್ತಮ ಸಹಕಾರ ಒದಗಿಸುತ್ತಿದೆ. ಇದು ಜಗತ್ತಿನ 103 ಆ್ಯಪ್‌ಗಳ ನಡುವೆ ಭಾಷಾಂತರ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಅಳವಡಿಸಿಕೊಂಡರೆ, ಯಾವುದೇ ಆ್ಯಪ್ ಓದುತ್ತಿರುವಾಗ, ಬೇರೆ ಭಾಷೆಯ ಸುದ್ದಿ ಅಥವಾ ಪದ ಕಾಣಿಸಿದರೆ, ಅದರ ಅರ್ಥವನ್ನು ತಕ್ಷಣ ತಿಳಿದುಕೊಳ್ಳಲು ಸಹಕಾರಿ. ಇಂಟರ್ನೆಟ್ ಸಂಪರ್ಕವಿಲ್ಲದಿರುವಾಗಲೂ ಇದು 59 ಭಾಷೆಗಳನ್ನು ಪರಸ್ಪರ ಅನುವಾದ ಮಾಡುತ್ತದೆ. ಇಷ್ಟಲ್ಲದೆ 38 ಭಾಷೆಗಳಲ್ಲಿ, ಕ್ಯಾಮೆರಾದ ಮೂಲಕ ಯಾವುದಾದರೂ ಪಠ್ಯವನ್ನು ಸೆರೆಹಿಡಿದರೆ ಅದನ್ನೂ ಭಾಷಾಂತರಿಸುವ ಸಾಮರ್ಥ್ಯವು…