ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್‌ಗೆ ಮುನ್ನ ಪರಾಮರ್ಶಿಸಿ
ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ ತಾವೇ ಮಾತಾಡುತ್ತಿದ್ದಾರೆಂಬಂತೆ ಅಥವಾ ತಮ್ಮಷ್ಟಕ್ಕೇ ತಾವೇ ವಿಭಿನ್ನ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದಾರೋ ಎಂಬಂತಿರುವವರನ್ನು ಕಂಡಾಗ ಅನ್ನಿಸಿದ್ದಿದು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಚಾಳಿ ಅತಿಯಾಗುತ್ತಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಬರುವ ಸಂಗತಿಗಳೇ ಪರಮ ಸತ್ಯ ಎಂದು ನಂಬುವವರ ಸಂಖ್ಯೆ ವೃದ್ಧಿಯಾಗುತ್ತಿದೆ. ಯಾವುದೇ ಋಣಾತ್ಮಕ…