ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?
ಸೆಲ್ ಫೋನ್‌ಗಳು ಮಾರುಕಟ್ಟೆಗೆ ಬಂದಾಗ 1991ರಿಂದೀಚೆಗೆ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್ (ಸಿಮ್) ಕಾರ್ಡ್ ಎಂಬುದು ನಮಗೆ ಪರಿಚಯವಾಗಿತ್ತು. ತಂತ್ರಜ್ಞಾನ ಬೆಳೆಯುತ್ತಾ ಬಂದಂತೆ ಸಿಮ್ ಕಾರ್ಡ್ ಎಂಬ ಈ ಮೆಮೊರಿ ಚಿಪ್‌ನ ಗಾತ್ರವೂ ಕಿರಿದಾಗತೊಡಗಿ, ಪುಟ್ಟದಾದ ಮೈಕ್ರೋ ಸಿಮ್ ಬಂತು. ಆ ಬಳಿಕ ಹಗುರ ತೂಕದ, ತೆಳುವಾದ ಗಾತ್ರದ ಸ್ಮಾರ್ಟ್ ಫೋನ್‌ಗಳು ಬರತೊಡಗಿದಂತೆ, ಅದಕ್ಕೆ ಪೂರಕವಾಗಿ 2012ರಿಂದೀಚೆಗೆ ನ್ಯಾನೋ ಸಿಮ್ ಎಂಬ ತೀರಾ ಕಿರಿದಾದ ಗಾತ್ರದ ಸಿಮ್ ಕಾರ್ಡ್‌ಗಳು (ಬಹುತೇಕ ಸಾಧನಗಳಲ್ಲಿ) ಚಲಾವಣೆಯಲ್ಲಿವೆ. ಆದರೆ, ಎರಡು ವರ್ಷಗಳಿಂದೀಚೆಗೆ ಹೊಸ…