ಆಂಡ್ರಾಯ್ಡ್ ಸಾಧನ ಬಳಕೆಯಲ್ಲಿ ವ್ಯತ್ಯಾಸ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -81, ಜೂನ್ 09, 2014ಜಗತ್ತಿನಾದ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳು. ಇತ್ತೀಚೆಗೆ ಬಂದ ಮೈಕ್ರೋಸಾಫ್ಟ್ ಕಂಪನಿ ಒಡೆತನದಲ್ಲಿರುವ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಇರುವ ಸಾಧನಗಳು ಆಂಡ್ರಾಯ್ಡ್‌ಗೆ ಸಡ್ಡು ಹೊಡೆಯುವ ಲಕ್ಷಣಗಳಿವೆಯಾದರೂ, ಗೂಗಲ್ ಒಡೆತನದಲ್ಲಿರುವ ಆಂಡ್ರಾಯ್ಡ್, ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಲು ಪ್ರಮುಖ ಕಾರಣವೆಂದರೆ, ಅದು ಅಗ್ಗದ ದರದಲ್ಲಿ ಮತ್ತು ಮುಕ್ತವಾಗಿ ಲಭ್ಯ. ಈ ಓಪನ್ ಸೋರ್ಸ್ (ಮುಕ್ತವಾಗಿ ಲಭ್ಯವಿರುವ) ತಂತ್ರಾಂಶವನ್ನು ಬಳಸಿಕೊಂಡು…

Rate this:

ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಉಳಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -80, ಜೂನ್ 02, 2014 ಸ್ಮಾರ್ಟ್‌ಫೋನ್ ಬಳಸುವವರು ಹೆಚ್ಚಾಗಿ ದೂರುವ ಸಂಗತಿಯೆಂದರೆ ಬ್ಯಾಟರಿ ಚಾರ್ಜ್ ನಿಲ್ಲುವುದಿಲ್ಲ ಅಂತ. ಸಾಮಾನ್ಯ ಫೀಚರ್ ಫೋನ್‌ಗಳಲ್ಲಾದರೆ ಎರಡು – ಮೂರು ದಿನಕ್ಕೊಮ್ಮೆ, ತೀರಾ ಕಡಿಮೆ ಮಾತನಾಡುವವರಾದರೆ ನಾಲ್ಕೈದು ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಫೀಚರ್ ಫೋನ್‌ಗಳಲ್ಲಿ ಎಫ್ಎಂ, ಹಾಡುಗಳು, ವೀಡಿಯೋ ಮತ್ತು ಕರೆಗಳು ಹೊರತುಪಡಿಸಿ, ಇನ್ಯಾವುದೇ ವಿಶೇಷ ಸೌಕರ್ಯಗಳ ಬಳಕೆ ಕಡಿಮೆಯಿರುವುದು ಇದಕ್ಕೆ ಕಾರಣ. ಆದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಗಲ್ಲ. ಬಹುತೇಕ ದಿನಕ್ಕೊಮ್ಮೆ ಚಾರ್ಜ್ ಮಾಡಬೇಕಾಗುತ್ತದೆ.…

Rate this:

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಚಿತ್ರ ತೆಗೆಯುವುದು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಡಿಸೆಂಬರ್ 30 ಕಂಪ್ಯೂಟರಿನಲ್ಲಿ ಏನಾದರೂ ಸಮಸ್ಯೆಯಾದರೆ, ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ನಿಮ್ಮ ಸ್ನೇಹಿತರು ಅಥವಾ ಸಿಸ್ಟಂ ತಜ್ಞರಿಂದ ಸಲಹೆ ಕೇಳಿದಾಗ, ಸಮಸ್ಯೆಯ ಕುರಿತು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿ ಅಂತ ನಿಮಗವರು ಹೇಳಿರಬಹುದು. ಇದರಿಂದ, ಯಾವ ಹಂತದಲ್ಲಿ ಏನು ದೋಷ ಕಂಡುಬಂದಿದೆ ಮತ್ತು ನಿಮ್ಮ ಕಂಪ್ಯೂಟರಿನಲ್ಲಿ ಯಾವ ರೀತಿಯ ಸಂದೇಶ (Error Message) ತೋರಿಸಲಾಗಿದೆ ಎಂದು ತಿಳಿದುಕೊಂಡು, ಅದಕ್ಕೆ ಪರಿಹಾರ ಸೂಚಿಸುವುದು ಸುಲಭವಾಗುತ್ತದೆ. ಕಂಪ್ಯೂಟರಿನ ಕೀಬೋರ್ಡ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಕ್ರೀನ್‌ಶಾಟ್…

Rate this:

ಸ್ಕ್ರೀನ್ ಬಾಗಿಸಬಹುದಾದ ಸ್ಮಾರ್ಟ್‌ಫೋನ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಡಿ.23 2013 ಅಂತ್ಯವಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ತೀರಾ ಹಳೆಯವು ಅನ್ನಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈಗ ಬರುತ್ತಿರುವ ಮತ್ತು ಮುಂದೆ ಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೈಡೆಫಿನಿಷನ್ ಡಿಸ್‌ಪ್ಲೇಗಳು ಸಾಮಾನ್ಯವಾಗಿಬಿಟ್ಟಿವೆ. ಐದರಿಂದ 7 ಇಂಚಿನ ಸ್ಕ್ರೀನ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ, ಅದರಲ್ಲಿ ಕನಿಷ್ಠ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮರಾಗಳು ಕೂಡ ಸಾಮಾನ್ಯವಾಗುತ್ತಿವೆ. ಇಷ್ಟೆಲ್ಲಾ ಸಾಕಾಗುತ್ತದೆ ಎಂದುಕೊಂಡು ಖರೀದಿಸಿದವರಿಗೆ ವರ್ಷಾಂತ್ಯದಲ್ಲಿ ನಡೆದಿರುವ ತಂತ್ರಜ್ಞಾನ ಪ್ರಗತಿಯು ಆಘಾತ…

Rate this:

ಏನಿದು ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್?

ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು ಎಂಬುದು ಹಲವರ ಕುತೂಹಲ. ಈ ಕುರಿತು ಸ್ಥೂಲವಾಗಿ ತಿಳಿದುಕೊಳ್ಳೋಣ. ಬೇಸಿಕ್ ಫೋನ್: ಇವು ಹೆಚ್ಚಿನವರು ಬಳಸುತ್ತಿರುವ ಮೊಬೈಲ್ ಫೋನ್‌ಗಳು. ಕರೆ, ಎಸ್ಎಂಎಸ್ ಮತ್ತು ಎಫ್ಎಂ ರೇಡಿಯೋ, ಕ್ಯಾಲ್ಕುಲೇಟರ್ ಮುಂತಾದ ಮೂಲಭೂತ ಅನುಕೂಲಗಳು ಇದರಲ್ಲಿರುತ್ತವೆ. ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಪುಟ್ಟ ಕ್ಯಾಮರಾ, ಟಾರ್ಚ್ ಲೈಟ್, ಇನ್ನು…

Rate this:

ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಬಿಲ್ಟ್ ಕನ್ನಡ ಟೈಪಿಂಗ್ ತಂತ್ರಾಂಶ

ಮಾಹಿತಿ@ತಂತ್ರಜ್ಞಾನ: ವಿಕ ಅಂಕಣ-52, 16 ಸೆಪ್ಟೆಂಬರ್ 2013ಸ್ಮಾರ್ಟ್‌ಫೋನ್‌ಗಳ ಬಗ್ಗೆ ಭಾರತೀಯರಿಗೆ ಆಸಕ್ತಿ/ಆಕರ್ಷಣೆ ಹೆಚ್ಚಾಗುತ್ತಿರುವುದನ್ನು ಅಗ್ಗದ ಫೋನ್ ತಯಾರಕ ಕಂಪನಿಗಳು ಸರಿಯಾಗಿಯೇ ಮನಗಂಡಿವೆ. ಬ್ರ್ಯಾಂಡೆಡ್ ಫೋನ್‌ಗಳ ಬೆಲೆಯಿಂದಾಗಿ ಕಂಗೆಟ್ಟಿರುವ ಗ್ರಾಹಕರಿಗೆ ದೇಶೀ ಕಂಪನಿಗಳು ಸಾಕಷ್ಟು ವೈಶಿಷ್ಟ್ಯಗಳನ್ನು ಕಡಿಮೆ ದರದಲ್ಲಿ ನೀಡುತ್ತಾ ಆಕರ್ಷಿಸುತ್ತಿವೆ. ಭಾರತೀಯರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನ ಹೆಚ್ಚು ಎಂಬುದನ್ನು ಅವುಗಳು ತಿಳಿದುಕೊಂಡಷ್ಟು ಬ್ರ್ಯಾಂಡೆಡ್ ಕಂಪನಿಗಳು ಅರ್ಥ ಮಾಡಿಕೊಂಡಂತಿಲ್ಲ. ನಮ್ಮ ನಮ್ಮ ಮಾತೃ ಭಾಷೆಯಲ್ಲೇ (ನಮಗಾದರೆ ಕನ್ನಡ) ಓದಬೇಕು ಮತ್ತು ಬರೆಯುವಂತಾಗಬೇಕು ಎಂಬ ಭಾರತೀಯರ ತುಡಿತವನ್ನು ಮನಗಂಡ…

Rate this:

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್: ಯಾವುದು ಸೂಕ್ತ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ-48, ಆಗಸ್ಟ್ 19, 2013ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ವರದಿ ಬಂದಿತ್ತು. ರಾಜ್ಯದ 300 ಶಾಸಕರಿಗೆ (ವಿಧಾನ ಪರಿಷತ್ ಸಹಿತ) ತಲಾ 46,900 ರೂ. ಬೆಲೆಯ ಐಪ್ಯಾಡ್ 2ಎಸ್ ಎಂಬ ಟ್ಯಾಬ್ಲೆಟನ್ನು 1.4 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗಿದ್ದು, ಶೇ.10ರಷ್ಟು ಮಂದಿಗೆ ಮಾತ್ರ ಇದನ್ನು ಬಳಕೆಯ ಜ್ಞಾನ ಇದೆ ಅಂತ. ಆಳುವವರನ್ನು ಇ-ಸಾಕ್ಷರರನ್ನಾಗಿಸಿ, ಕೆಲಸ ಕಾರ್ಯ ಶೀಘ್ರವಾಗಲಿ, ತಂತ್ರಜ್ಞಾನವನ್ನು ರಾಜ್ಯದ ಅಭಿವೃದ್ಧಿಗೆ, ಪ್ರಜೆಗಳ ಉನ್ನತಿಗೆ ಬಳಸಬೇಕೆಂಬ ಹಿರಿದಾಸೆ ಅಲ್ಲಿತ್ತು. ಹಾಗಿದ್ದರೆ, ಈ…

Rate this:

ಸ್ಮಾರ್ಟ್‌ಫೋನ್ ಬ್ಯಾಟರಿ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆಯೇ? ಹೀಗೆ ಮಾಡಿ

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ– 37 – ಜೂನ್ 3, 2013 ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬೇಗನೇ ಚಾರ್ಜ್ ಕಳೆದುಕೊಳ್ಳುತ್ತದೆ ಎಂಬುದು ಹೆಚ್ಚಿನವರ ಕೊರಗು. ಇವು ಇಂಟರ್ನೆಟ್ ಮೂಲಕ ನಾವು ಸದಾ ಆನ್‌ಲೈನ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತವೆಯಾದರೂ, ಅದಕ್ಕಾಗಿ ಸಾಕಷ್ಟು ವಿದ್ಯುಚ್ಛಕ್ತಿ ವ್ಯಯವಾಗುತ್ತದೆ. ಸಾಮಾನ್ಯವಾಗಿ, ಕೇವಲ ಮಾತುಕತೆಗಾಗಿ ನಿಮ್ಮ ಸ್ಮಾರ್ಟ್‌ಫೋನನ್ನು ಬಳಸಿದರೆ ಎರಡು ಮೂರು ದಿನ ಬ್ಯಾಟರಿ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. ಆದರೆ ಇಂಟರ್ನೆಟ್, ವಿಶೇಷವಾಗಿ 2ಜಿ ಗಿಂತಲೂ 3ಜಿ ಸಂಪರ್ಕವನ್ನು ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿ ಬೇಕಾಗುತ್ತದೆ…

Rate this:

ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012) ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು ಅರ್ಥವಾಗಲಿಲ್ಲ ಅಂದುಕೊಂಡಿರಾ? ಕಂಪ್ಯೂಟರ್‌ನಲ್ಲಿ ಕನ್ನಡ ಓದುವವರಿಗೆ, ಬರೆಯುವವರಿಗೆ ಒಂದು ಸಮಸ್ಯೆಯ ಕುರಿತು ಗೊತ್ತು. ಅದೆಂದರೆ, ನೀವು ಏನೋ ಕನ್ನಡದಲ್ಲಿ ಟೈಪ್ ಮಾಡಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ. ಅವರಿಗೆ ಅದನ್ನು ಓದಲಾಗುವುದಿಲ್ಲ ಅಥವಾ ತಿದ್ದಲು ಕೂಡ ಆಗುವುದಿಲ್ಲ. ಅಥವಾ ಪತ್ರಿಕೆಗಳಿಗೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ…

Rate this:

ಮೊಬೈಲ್ ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲುವುದಿಲ್ಲವೇ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ-5: ವಿಕ ಅಂಕಣ 24-ಸೆಪ್ಟೆಂಬರ್-2012 ಮೊಬೈಲ್ ಫೋನ್‌ನ ಬ್ಯಾಟರಿಯಲ್ಲಿ ಚಾರ್ಜ್ ಉಳಿಯೋದೇ ಇಲ್ಲ ಅಂತ ಪರಿತಪಿಸುತ್ತಿದ್ದೀರಾ? ಕಂಪ್ಯೂಟರುಗಳ ಥರಾನೇ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಸದಾ ಪ್ಲಗ್‌ಗೆ ಸಿಲುಕಿಸಿಡುವುದು ಸಾಧ್ಯವಿಲ್ಲ. ಹಲವಾರು ಅಪ್ಲಿಕೇಶನ್‌ಗಳು ರನ್ ಆಗುತ್ತಿರುವಾಗ ಬ್ಯಾಟರಿಯ ಹೀರಿಕೊಳ್ಳುವಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ 1000 – 1200 mAhಗಿಂತ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್ ಫೋನ್‌ಗಳನ್ನೇ ಖರೀದಿಸುವುದು ಸ್ಮಾರ್ಟ್ ಹೆಜ್ಜೆ. ಸ್ಮಾರ್ಟ್‌ಫೋನ್‌ಗಳು ಎಂಪಿ3 ಪ್ಲೇಯರ್‌ಗಳಾಗಿ, ಇಮೇಲ್‌ಗಾಗಿ, ಡಿಜಿಟಲ್ ಕ್ಯಾಮರಾ ಆಗಿ, ಗೇಮಿಂಗ್ ಸಾಧನವಾಗಿ ಮತ್ತು ಟಿವಿಯಾಗಿಯೂ…

Rate this: