ಟೆಕ್ ಟಾನಿಕ್: ಫೋನ್ ಸ್ಕ್ರೀನ್‌ನಿಂದ ಕಣ್ಣು ರಕ್ಷಣೆ
ಸ್ಮಾರ್ಟ್ ಫೋನ್ ಬಂದಾಗಿನಿಂದ ಕನ್ನಡಕಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಬಹುಶಃ ಎಲ್ಲರ ಗಮನಕ್ಕೆ ಬಂದಿರಬಹುದು. ಮಕ್ಕಳು ಸಣ್ಣ ವಯಸ್ಸಿನಲ್ಲೇ ಅವಿರತವಾಗಿ ಗೇಮ್ಸ್ ಆಡುತ್ತಾ ಫೋನ್ ಸ್ಕ್ರೀನ್‌ನ ಬೆಳಕಿಗೆ ಕಣ್ಣನ್ನು ಹೆಚ್ಚು ಹೊತ್ತು ಒಡ್ಡುವುದರಿಂದ ಕಣ್ಣಿಗೆ ಹಾನಿಯಾಗುವುದು ಸಾಕಷ್ಟು ಸಂಶೋಧನೆಗಳಿಂದ ದೃಢಪಟ್ಟಿದೆ. ಇದಕ್ಕೆ ಕಾರಣ, ಸ್ಕ್ರೀನ್‌ನಿಂದ ಹೊರ ಸೂಸುವ ಬ್ಲೂ ರೇ ಅಥವಾ ನೀಲ ಕಿರಣಗಳು. ಕಣ್ಣುಗಳಿಗೆ ಒಂದಿಷ್ಟಾದರೂ ರಕ್ಷಣೆ ನೀಡಲೆಂದು ಹೆಚ್ಚಿನ ಫೋನ್ ತಯಾರಿಕಾ ಕಂಪನಿಗಳು ಈಗ ವ್ಯವಸ್ಥೆ ಮಾಡಿಕೊಂಡಿವೆ. ಅದನ್ನು ಬಳಸಿಕೊಳ್ಳಿ. ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ…