ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್‌ಗೆ ಮುನ್ನ ಪರಾಮರ್ಶಿಸಿ

ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್‌, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ ತಾವೇ ಮಾತಾಡುತ್ತಿದ್ದಾರೆಂಬಂತೆ ಅಥವಾ ತಮ್ಮಷ್ಟಕ್ಕೇ ತಾವೇ ವಿಭಿನ್ನ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದಾರೋ ಎಂಬಂತಿರುವವರನ್ನು ಕಂಡಾಗ ಅನ್ನಿಸಿದ್ದಿದು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಚಾಳಿ ಅತಿಯಾಗುತ್ತಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಬರುವ ಸಂಗತಿಗಳೇ ಪರಮ ಸತ್ಯ ಎಂದು ನಂಬುವವರ ಸಂಖ್ಯೆ ವೃದ್ಧಿಯಾಗುತ್ತಿದೆ. ಯಾವುದೇ ಋಣಾತ್ಮಕ…

Rate this:

ನಿಮ್ಮ ಸ್ಮಾರ್ಟ್ ಫೋನ್ ರಕ್ಷಣೆಗೊಂದು ಬೀಗ: ಸ್ಕ್ರೀನ್ ಲಾಕ್

ಸ್ಮಾರ್ಟ್‌ಫೋನ್‌ನ ಅಗತ್ಯವೂ ಬಳಕೆಯೂ ಹೆಚ್ಚಾಗುವುದರೊಂದಿಗೆ ಅದರ ದುರ್ಬಳಕೆ ಕೂಡ ಜಾಸ್ತಿಯಾಗುತ್ತಿದೆ. ಮಕ್ಕಳ ಕೈಗೆ, ಅಥವಾ ಕಳೆದುಹೋದ ನಮ್ಮ ಫೋನ್ ಅಪರಿಚಿತರ ಕೈಗೆ ಸಿಕ್ಕಾಗ, ನಮ್ಮ ಪಾಡು ಹೇಳತೀರದು. ಸಾಮಾನ್ಯ ದಿನಗಳಲ್ಲಿ ಈ ರೀತಿಯಾಗಿ ದುರ್ಬಳಕೆ ಆಗುವುದನ್ನು ತಪ್ಪಿಸಲು ಆಂಡ್ರಾಯ್ಡ್ ಸಿಸ್ಟಂನಲ್ಲೇ ವ್ಯವಸ್ಥೆ ಇದೆ. ಸ್ಕ್ರೀನ್‌ಗೆ ಲಾಕ್ (ಬೀಗ) ಹಾಕುವುದು ಅಂಥದ್ದರಲ್ಲಿ ಒಂದು. ಸ್ಕ್ರೀನ್ ಲಾಕ್ ಮಾಡಲು ಪಿನ್, ಪಾಸ್‌ವರ್ಡ್, ಗೆರೆ ಎಳೆಯುವುದು, ಬೆರಳಚ್ಚು (ಫಿಂಗರ್‌ಪ್ರಿಂಟ್) ಮುಂತಾದ ಅನ್‌ಲಾಕಿಂಗ್ (ಸ್ಕ್ರೀನ್‌ನ ಲಾಕ್ ತೆಗೆಯುವ) ವೈಶಿಷ್ಟ್ಯಗಳು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅಡಗಿವೆ.…

Rate this:

ಸಹಾಯದ ಕೋರಿಕೆಯಿರುವ ಸ್ನೇಹಿತರ ಇ-ಮೇಲ್ ಬಗ್ಗೆ ಎಚ್ಚರ!

ಫೇಸ್‌ಬುಕ್‌ನಲ್ಲಿನ ನಮ್ಮ ಖಾಸಗಿ ಮಾಹಿತಿಯು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಪಾಲಾಗಿರುವುದು, ಆ ಬಳಿಕ ಜಿಮೇಲ್ ಮಾಹಿತಿಯೂ ಆ್ಯಪ್ ಡೆವಲಪರ್‌ಗಳಿಗೆ ಸೋರಿಕೆಯಾಗಿದೆ ಅಂತ ಸುದ್ದಿಯಾಗಿರುವುದು – ಅಂತರ್ಜಾಲದಲ್ಲಿ ನಮ್ಮ ಪ್ರೈವೆಸಿ ಅಥವಾ ಖಾಸಗಿತನ/ಗೌಪ್ಯತೆ ಕಾಯ್ದುಕೊಳ್ಳಬೇಕಾದುದರ ಅಗತ್ಯದ ಬಗ್ಗೆ ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸಿದೆ. ನಮ್ಮ ಇಮೇಲ್ ಖಾತೆಯ ಬಗ್ಗೆ ಎಚ್ಚರಿಕೆ ವಹಿಸಲೇಬೇಕು, ಯಾಕೆಂದರೆ ಹೆಚ್ಚಿನವರು ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವುದರಿಂದಾಗಿ, ಅದಕ್ಕೆ ಸಂಬಂಧಿಸಿದಂತೆ, ಗೂಗಲ್ ಒದಗಿಸಿರುವ ಜಿಮೇಲ್ ಎಂಬ ಇಮೇಲ್ ಸಂವಹನ ಖಾತೆ ಬೇಕೇಬೇಕು. ಆದರೆ, ನಿಮ್ಮ ಇಮೇಲ್…

Rate this:

ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಳ್ಳುವ ಮೊದಲು ಇದನ್ನು ಓದಿ!

ವಾಟ್ಸ್ಆ್ಯಪ್‌ಗೆ ಸ್ಫರ್ಧೆಯೊಡ್ಡಲು ಪತಂಜಲಿ ಸಂಸ್ಥೆ ಹೊರತಂದಿರುವ ಕಿಂಭೋ ಎಂಬ ಆ್ಯಪ್ ಬಂದಿದ್ದು, ಮಾಯವಾಗಿದ್ದು ಮತ್ತು ಅದರ ಹೆಸರಲ್ಲಿ ಸಾಕಷ್ಟು ನಕಲಿ ಆ್ಯಪ್‌ಗಳು ಬಂದು ನಮ್ಮ ಖಾಸಗಿ ಮಾಹಿತಿಯನ್ನು ಕಬಳಿಸಲು ಪ್ರಯತ್ನಿಸಿರುವ ಬಗ್ಗೆ ಕಳೆದ ವಾರ ಬರೆದಿದ್ದೆ. ಆಂಡ್ರಾಯ್ಡ್ ಸಾಧನಗಳಿಗೆ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಆ್ಯಪ್‌ಗಳು ಲಭ್ಯವಿದ್ದು, ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದು ತ್ರಾಸದಾಯಕ ಕೆಲಸ. ಆ್ಯಪಲ್ ಸಾಧನಗಳಿಗೆ ಹೋಲಿಸಿದರೆ, ಗೂಗಲ್ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್‌ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ ಇಲ್ಲಿ ಇಷ್ಟೊಂದು ಆ್ಯಪ್‌ಗಳ…

Rate this:

ಅಸಲಿ ನಡುವೆ ನುಸುಳುವ ನಕಲಿ ಆ್ಯಪ್‌ಗಳು: ‘ಕಿಂಭೋ’ ನೀಡಿದ ಎಚ್ಚರಿಕೆ!

ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು ಹರಡುವ ವೇಗಕ್ಕಿಂತ ತಪ್ಪು ಮತ್ತು ಕೆಟ್ಟ ಸಂದೇಶಗಳು ಬೇಗನೇ ಹರಡುತ್ತವೆ. ಕಳೆದ ವಾರ ಆಗಿದ್ದೂ ಇದೇ. ಜನರ ಅರಿವಿನ ಕೊರತೆಯನ್ನು ಮತ್ತು ತರಾತುರಿಯನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುವ, ಸಿಕ್ಕದ್ದನ್ನು ಬಾಚಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ ಎಂಬುದಕ್ಕೆ ಉದಾಹರಣೆ, ಕಿಂಭೋ ಎಂಬ ಪತಂಜಲಿಯ ಆ್ಯಪ್. ಇದು ಸ್ವದೇಶೀ ಸಂದೇಶ ವಿನಿಮಯ…

Rate this:

ಫೇಸ್‌ಬುಕ್‌ನಲ್ಲಿ Trusted Contacts: ಏನಿದರ ಪ್ರಯೋಜನ, ಬಳಕೆ ಹೇಗೆ?

ಖಾಸಗಿ ಮಾಹಿತಿ ಸೋರಿಕೆಯ ಕುರಿತಾಗಿ ಭಾರಿ ಸುದ್ದಿ ಕೇಳಿ ಬಂದ ಬಳಿಕ ಪ್ರೈವೆಸಿ ಬಗ್ಗೆ ಬಹುತೇಕರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ನನ್ನ ಲೇಖನಗಳಲ್ಲಿ ಪದೇ ಪದೇ ಹೇಳುತ್ತಿರುವಂತೆ, ಯಾವುದೇ ಅನಗತ್ಯ ಮತ್ತು ಸಂದೇಹಾಸ್ಪದ ಲಿಂಕ್‌ಗಳನ್ನು ಕುತೂಹಲಕ್ಕಾಗಿಯೂ ಕ್ಲಿಕ್ ಮಾಡುವ ಮುನ್ನ ಎರಡೆರಡು ಬಾರಿ ದೃಢಪಡಿಸಿಕೊಳ್ಳಿ ಎಂಬ ಮಾತನ್ನು ಈಗಲೂ ಹೇಳುತ್ತಿದ್ದೇನೆ. ಇದು ನಮ್ಮ ಮಾಹಿತಿಯ ಸುರಕ್ಷತೆಗಾಗಿ. ಈ ಆನ್‌ಲೈನ್ ರಕ್ಷಣೆಯ ಮತ್ತೊಂದು ರೂಪವೆಂದರೆ, ಪದೇ ಪದೇ ಪಾಸ್‌ವರ್ಡ್ ಬದಲಾಯಿಸುವುದು. ಆಗಾಗ್ಗೆ ಪಾಸ್‌ವರ್ಡ್ ಬದಲಿಸಬೇಕಾಗಿರುವುದು ಒಳ್ಳೆಯ ವ್ಯವಸ್ಥೆಯಾದರೂ, ಈಗಾಗಲೇ…

Rate this:

ಹೋದಲ್ಲಿ ಟ್ರ್ಯಾಕ್ ಮಾಡುವ ಗೂಗಲ್: ಸುರಕ್ಷಿತವಾಗಿರುವುದು ಹೇಗೆ?

ಫೇಸ್‌ಬುಕ್‌ನಿಂದ ನಮ್ಮ ವೈಯಕ್ತಿಕ ಮಾಹಿತಿಯು ಮೂರನೆಯವರ ಪಾಲಾದ ವಿಚಾರವು ಕಳೆದ ಮೂರ್ನಾಲ್ಕು ವಾರಗಳಿಂದ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ ಎಂಬುದೇನೋ ನಿಜ. ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ನಿಂದ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಕುರಿತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍‌ಬರ್ಗ್ ಈಗಾಗಲೇ ಜನತೆಯ ಕ್ಷಮೆ ಯಾಚಿಸಿದ್ದಾರೆ. ಇಂತಹ ದೊಡ್ಡ ದೊಡ್ಡ ಕಂಪನಿಗಳು ಒತ್ತಟ್ಟಿಗಿರಲಿ, ಸಣ್ಣ ಪುಟ್ಟವು ಕೂಡ ಆ್ಯಪ್ ಅಥವಾ ವೆಬ್ ಸೈಟ್ ರೂಪದಲ್ಲಿ ನಮ್ಮ ಖಾಸಗಿ ಮಾಹಿತಿಯನ್ನು ಪಡೆಯುತ್ತವೆ ಎಂಬುದು ಅವುಗಳಲ್ಲಿ ಹೆಸರು ನೋಂದಾಯಿಸಿಕೊಂಡಾಗ ಅಥವಾ…

Rate this:

ವಾಟ್ಸಪ್ ಸಂದೇಶ: ಸಾವಧಾನದಿಂದಿರಿ, ಸುರಕ್ಷಿತವಾಗಿರಿ

ಫೇಸ್‌ಬುಕ್ ಪ್ರೈವೆಸಿ ಬಗೆಗಿನ ಆತಂಕವಿನ್ನೂ ಮರೆಯಾಗಿಲ್ಲ. ಈಗ ಅತ್ಯಧಿಕ ಬಳಸುತ್ತಿರುವ ವಾಟ್ಸಪ್ ಮೆಸೆಂಜರ್‌ನಲ್ಲಿಯೂ ನಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ನೆಟ್ ಲೂಟಿಕೋರರು ಭಾರಿ ಪ್ರಮಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂಟರ್ನೆಟ್ ಕ್ರಾಂತಿಯಾದ ಬಳಿಕ ಟೆಕ್ಕೀಗಳು, ಸುಶಿಕ್ಷಿತರಷ್ಟೇ ಅಲ್ಲದೆ, ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರವೇ ಬಳಸಲು ತಿಳಿದುಕೊಂಡಿರುವವರೂ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಸಂದೇಶಗಳಲ್ಲಿ ಬರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸದೆ, ತಮ್ಮ ಸ್ನೇಹಿತ ಕಳುಹಿಸಿದನೆಂದು ನಂಬಿ ಲಿಂಕ್ ಕ್ಲಿಕ್ ಮಾಡುವ ಮೂಲಕ ತಮಗರಿವಿಲ್ಲದಂತೆಯೇ ತಮ್ಮ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವವರ ಸಂಖ್ಯೆಯೂ ಅಷ್ಟೇ…

Rate this:

ಫೇಸ್‌ಬುಕ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾವಣೆ: ಏನು, ಹೇಗೆ?

ಇಂಟರ್ನೆಟ್ ಬಳಕೆಯು ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿದೆಯೋ ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯು ಜಾಣ್ನುಡಿಯಾಗಿ ಇಲ್ಲಿಗೂ ಅನ್ವಯವಾಗುತ್ತದೆ. ತಂತ್ರಜ್ಞಾನವು ನಮ್ಮ ಬದುಕನ್ನು ಸರಳಗೊಳಿಸಿದೆ ಎಂಬುದಂತೂ ನಿಜ, ಆದರೆ ನಮ್ಮ ಖಾಸಗಿ ಮಾಹಿತಿಯನ್ನು ನಾವು ಸ್ವಲ್ಪವೂ ಯೋಚಿಸದೆ ಎಲ್ಲರೊಂದಿಗೆ ಬೇಕಾಬಿಟ್ಟಿಯಾಗಿ ಹಂಚಿಕೊಂಡಿರುತ್ತೇವೆ. ನಮ್ಮದೇ ನಿರ್ಲಕ್ಷ್ಯದಿಂದ ನಾವು ಈ ಮಾಹಿತಿಯೆಲ್ಲವನ್ನೂ ಪರರಿಗೆ ಬಿಟ್ಟುಕೊಟ್ಟಿರುತ್ತೇವಾದರೂ ಕೊನೆಯಲ್ಲಿ ದೂರುವುದು ತಂತ್ರಜ್ಞಾನವನ್ನು. ಕಳೆದ ವಾರವಿಡೀ ಚರ್ಚೆಯ ವಸ್ತುವಾಗಿದ್ದು, ಆತಂಕಕ್ಕೂ ಕಾರಣವಾಗಿದ್ದು ಈ ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವು ನಾವು ಅದಕ್ಕೆ ಉದಾರವಾಗಿ ಉಣಬಡಿಸಿರುವ…

Rate this: