ಆಪಲ್ Vs ಸ್ಯಾಮ್ಸಂಗ್ : ಪಾಲುದಾರರ ಮಧ್ಯೆ ಪೇಟೆಂಟ್ ಸಂಘರ್ಷ

ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವಿನ ಪೇಟೆಂಟ್ ಯುದ್ಧ ಇಂದು-ನಿನ್ನೆಯದಲ್ಲ. ಸ್ಯಾಮ್ಸಂಗ್ ಕಂಪನಿಯು ಯಾವಾಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಆರಂಭಿಸಿತೋ, ಆವಾಗಲೇ ಈ ಕದನ ಶುರುವಾಗಿತ್ತು. ತೀರಾ ಇತ್ತೀಚೆಗೆ, ಐಫೋನ್ ತಂತ್ರಜ್ಞಾನವನ್ನು ನಕಲು ಮಾಡಿದ್ದಕ್ಕಾಗಿ ತನಗೆ ವಿಧಿಸಲಾಗಿದ್ದ ಕೋಟ್ಯಂತರ ಡಾಲರ್ ದಂಡವನ್ನು ಮರುಪರಿಶೀಲಿಸುವಂತೆ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಅಮೆರಿಕ ಫೆಡರಲ್ ಸರ್ಕ್ಯೂಟ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ಈ ಕದನದ ಚರಿತ್ರೆಯತ್ತ ಒಂದು ಹೊರಳು ನೋಟ. ಪಾಲುದಾರರ ಸಂಘರ್ಷ…

Rate this:

ಮಾಹಿತಿ@ತಂತ್ರಜ್ಞಾನ: ಆಪಲ್ V/s ಸ್ಯಾಮ್ಸಂಗ್ ಯುದ್ಧ

ಇಷ್ಟೆಲ್ಲಾ ಆದರೂ ವಿಶೇಷವೇನು ಗೊತ್ತೇ? ಆಪಲ್ ತನ್ನ ಫೋನ್ ಬಿಡಿಭಾಗಗಳಿಗೆ ದ.ಕೊರಿಯಾದ ಎಲೆಕ್ಟ್ರಾನಿಕ್ಸ್ ದಿಗ್ಗಜ ಸ್ಯಾಮ್ಸಂಗನ್ನೇ ನೆಚ್ಚಿಕೊಂಡಿದೆ ಮತ್ತು ಇವೆರಡೂ ವ್ಯವಹಾರದಲ್ಲಿ ಇನ್ನೂ ‘ನಂಬಿಕಸ್ಥ ಪಾಲುದಾರರು’! ಆಪಲ್ ಐಫೋನ್ ಒಂದರ ಶೇ.26 ಭಾಗವನ್ನು ತಯಾರಿಸಿಕೊಡುವುದು ಸ್ಯಾಮ್ಸಂಗ್!

Rate this: