ಬ್ಯಾಂಕಿಂಗ್, ಯುಪಿಐ ಆ್ಯಪ್ ಬಳಕೆ ಬಗ್ಗೆ ಎಚ್ಚರಿಕೆಯಿರಲಿ
ತಂತ್ರಜ್ಞಾನವೆಂಬುದು ಎಷ್ಟು ಅನುಕೂಲಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಎರಡು ವಾರದ ಹಿಂದೆ ಆತಂಕಕಾಗಿ ಸುದ್ದಿಯೊಂದು ಬಂದಿತ್ತು. ಹಲವಾರು ಬ್ಯಾಂಕುಗಳ ನಕಲಿ ಆ್ಯಪ್‌ಗಳು ಗೂಗಲ್‌ನ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ (ಆ್ಯಪ್‌ಗಳನ್ನು ಭಟ್ಟಿ ಇಳಿಸಿಕೊಳ್ಳುವ ತಾಣ) ಕಾರ್ಯಾಚರಿಸುತ್ತಿದ್ದು, ಹಲವಾರು ಮಂದಿ ತಮ್ಮ ಹಣ ಕಳೆದುಕೊಂಡಿದ್ದಾರೆ ಅಂತ. ಅಂದರೆ, ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿರುವಂತೆಯೇ, ವಂಚಕರೂ, ವಂಚನೆಯೂ ಅಪ್‌ಗ್ರೇಡ್ ಆಗುತ್ತಿರುತ್ತದೆ. ಹೀಗಾಗಿ, ನಮ್ಮ ಅನುಕೂಲಕ್ಕೆ ತಂತ್ರಜ್ಞಾನವಿದೆ ಎಂದು ಸುಮ್ಮನೆ ಕೂರುವಂತಿಲ್ಲ, ಎಚ್ಚರ ವಹಿಸಲೇಬೇಕು ಎಂಬುದಕ್ಕೆ ಪದೇ ಪದೇ ವರದಿಯಾಗುತ್ತಿರುವ ಇಂಥ ಸೈಬರ್ ವಂಚನೆ ಪ್ರಕರಣಗಳೇ…