ನಿಮ್ಮ ಫೋನ್ ಸುರಕ್ಷಿತವಾಗಿಟ್ಟುಕೊಳ್ಳಲು ಅಗತ್ಯ ಕ್ರಮಗಳು
ಯಾವುದೋ ಒಂದು ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲಾಯಿತು, ಅಥವಾ ನೂರಾರು ರಹಸ್ಯ ಫೋಟೋಗಳು ಲೀಕ್ ಆದವು ಎಂಬಿತ್ಯಾದಿ ಸುದ್ದಿಗಳನ್ನು ಕೇಳಿರುತ್ತೀರಿ. ಸ್ಮಾರ್ಟ್ ಫೋನ್‌ಗಳು ಹೊಸ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನಗಳೊಂದಿಗೆ ದೊಡ್ಡವರನ್ನು ಮಾತ್ರವಷ್ಟೇ ಅಲ್ಲದೆ, ಮಕ್ಕಳನ್ನೂ ಆಕರ್ಷಿಸುತ್ತಿವೆ. ಹೀಗಾಗಿ, ನಿಮ್ಮ ಪ್ರಮುಖ ವಿಚಾರಗಳನ್ನು, ಫೈಲುಗಳನ್ನು ಹೊಂದಿರಬಹುದಾದ ಸ್ಮಾರ್ಟ್ ಫೋನ್‌ನ ಸಂರಕ್ಷಣೆಗೆ ಹಿಂದೆಂದಿಗಿಂತ ಹೆಚ್ಚು ಆದ್ಯತೆ ನೀಡಬೇಕಾದ ಅನಿವಾರ್ಯತೆಯಿದೆ. ಈ ಕಾರಣಕ್ಕಾಗಿಯೇ ಜೀವನದ ಅನಿವಾರ್ಯ ಭಾಗವಾಗಿರುವ ಸ್ಮಾರ್ಟ್ ಫೋನನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆಂಬ ಬಗ್ಗೆ ಒಂದಿಷ್ಟು ಮಾಹಿತಿ…