ಸಾಫ್ಟ್‌ವೇರ್ ಇಲ್ಲದೆಯೇ ಪಿಡಿಎಫ್!

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ: ಡಿಸೆಂಬರ್ 02, 2013 ಯಾವುದೇ ಲೇಖನ, ಡಾಕ್ಯುಮೆಂಟ್‌ಗಳು, ಮಹತ್ವದ ದಾಖಲೆಗಳು, ಆನ್‌ಲೈನ್ ಬಿಲ್‌ಗಳು, ಆನ್‌ಲೈನ್ ರಶೀದಿಗಳೆಲ್ಲವನ್ನೂ ಸುರಕ್ಷಿತವಾಗಿ ಇರಿಸಿಕೊಳ್ಳುವ ಒಂದು ಫಾರ್ಮ್ಯಾಟ್ ಎಂದರೆ ಪಿಡಿಎಫ್ (ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್). ಪ್ರಕಟವಾಗಿರುವ ಬಹುಮುಖ್ಯ ಲೇಖನಗಳನ್ನು ಕಾಯ್ದಿಟ್ಟುಕೊಳ್ಳಲು, ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪುಸ್ತಕಗಳನ್ನು ಓದಲು ಕೂಡ ಪಿಡಿಎಫ್ ನಮೂನೆಯು ನೆರವಾಗುತ್ತದೆ. ಅಡೋಬಿ ಕಂಪನಿಯು ಪಿಡಿಎಫ್‌ಗೆ ಪ್ರಸಿದ್ಧಿ ಪಡೆದಿದೆ. ಅದರ ಪಿಡಿಎಫ್ ರೀಡರ್ ತಂತ್ರಾಂಶ ಉಚಿತವಾಗಿ ಲಭ್ಯವಿದೆ, ಆದರೆ ಪಿಡಿಎಫ್ ರೈಟರ್ (ಯಾವುದೇ ದಾಖಲೆಯನ್ನು…

Rate this:

ನಿಮ್ಮ ಡಾಕ್ಯುಮೆಂಟ್‌ಗಳನ್ನು ಉಚಿತವಾಗಿ ಪಿಡಿಎಫ್‌ಗೆ ಪರಿವರ್ತಿಸಿ

ಮಾಹಿತಿ@ತಂತ್ರಜ್ಞಾನ – 34 (ಮೇ 13, 2013ರ ವಿಜಯ ಕರ್ನಾಟಕ ಅಂಕಣ) ಹೊಸದಾಗಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್ ಕೊಂಡಾಗ ಅದರಲ್ಲಿ ಸೀಮಿತ ಸಾಫ್ಟ್‌ವೇರ್‌ಗಳಷ್ಟೇ ಇರುತ್ತವೆ. ನಮಗೆ ಬೇಕಾದ ತಂತ್ರಾಂಶಗಳನ್ನು ನಾವೇ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವು ತಂತ್ರಾಂಶಗಳಿಗೆ ಹಣ ಪಾವತಿಸಬೇಕಾಗುತ್ತದೆಯಾದರೆ, ಹೆಚ್ಚಿನವು ಆನ್‌ಲೈನ್‌ನಲ್ಲಿ ಉಚಿತವಾಗಿಯೇ ದೊರೆಯುತ್ತವೆ. ಅಂಥವುಗಳಲ್ಲಿ, ಡಿಜಿಟಲ್ ಯುಗದಲ್ಲಿ ನಮ್ಮ ಎಲ್ಲ ದಾಖಲೆಗಳನ್ನು, ಬರಹಗಳನ್ನು ಅಚ್ಚುಕಟ್ಟಾಗಿ ಕಾಯ್ದಿಡಲು ಮತ್ತು ಎಲ್ಲಿಬೇಕೆಂದರಲ್ಲಿ ಅದನ್ನು ನೋಡಲು ಅನುಕೂಲ ಮಾಡಿಕೊಡುವ ಉಚಿತ ತಂತ್ರಾಂಶದ ಬಗ್ಗೆ ಇಲ್ಲಿದೆ ಮಾಹಿತಿ. PDF (ಪೋರ್ಟೆಬಲ್ ಡಾಕ್ಯುಮೆಂಟ್…

Rate this: