ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ ಆಪಲ್… ಯಾವುದನ್ನು ಆಯ್ದುಕೊಳ್ಳಲಿ?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-45, ಜುಲೈ 29, 2013ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲ್ ಫೋನ್‌ಗಳು ಸ್ಮಾರ್ಟ್‌ಫೋನ್ ಎಂಬ ಕೆಟಗರಿಯಲ್ಲಿ ಬರುತ್ತವೆ. ಇವುಗಳಲ್ಲಿ ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಆಪಲ್ ಐಒಎಸ್ ಮುಂತಾದ ಹೆಸರುಗಳನ್ನು ಕೇಳಿರಬಹುದು. ನಗರ ವಾಸಿಗಳಿಗೆ ಅದರಲ್ಲೂ ಟೆಕ್ನಾಲಜಿ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಇವುಗಳ ಬಗ್ಗೆ ತಿಳಿದಿರಬಹುದು. ಆದರೆ ಸಾಮಾನ್ಯ ಜನರಿಗೆ ಈ ಹೆಸರುಗಳು ಗೊಂದಲ ಹುಟ್ಟಿಸಬಹುದು. ಆಂಡ್ರಾಯ್ಡ್ ಫೋನ್‌ಗಳು ಒಳ್ಳೆಯವೇ? ವಿಂಡೋಸ್ ಫೋನ್ ಉತ್ತಮವೇ, ಅಥವಾ ಐಫೋನ್ ಚೆನ್ನಾಗಿರುತ್ತದೆಯೇ, ಬ್ಲ್ಯಾಕ್‌ಬೆರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು…

Rate this:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದೀರಾ? ಇಲ್ಲಿ ಕೊಂಚ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-26 (ಮಾರ್ಚ್ 04, 2013) ಐಒಎಸ್ ಕಾರ್ಯಾಚರಣಾ ವ್ಯವಸ್ಥೆ ಇರುವ ‘ಐಫೋನ್’ ದುಬಾರಿ, ‘ಬ್ಲ್ಯಾಕ್‌ಬೆರಿ’ ಬಿಜಿನೆಸ್ ಮಂದಿಗೆ ಸೂಕ್ತ ಮತ್ತು ಈಗ ಸುದ್ದಿ ಮಾಡುತ್ತಿರುವ ‘ವಿಂಡೋಸ್’ ಕಾರ್ಯಾಚರಣಾ ವ್ಯವಸ್ಥೆಯ ಮೊಬೈಲುಗಳಲ್ಲಿ ಅಪ್ಲಿಕೇಶನ್‌ಗಳು ಕಡಿಮೆ ಎಂಬ ಭಾವನೆ ಇರುವುದರಿಂದಾಗಿ ಭಾರತದಲ್ಲಿ ಈಗ ‘ಆಂಡ್ರಾಯ್ಡ್’ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಫೋನ್‌ಗಳಿಗೆ ಬೇಡಿಕೆಯೂ ಹೆಚ್ಚು, ಜೇಬಿಗೆ ಭಾರವೂ ಕಡಿಮೆ ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆ ‘ಗೂಗಲ್’ನಿಂದಲೇ ಆಂಡ್ರಾಯ್ಡ್ ಅಭಿವೃದ್ಧಿಯಾಗುತ್ತಿರುವುದರಿಂದ ಅದಕ್ಕೆ ಆಕರ್ಷಣೆಯೂ ಹೆಚ್ಚು. ಹೀಗಾಗಿ ಹೆಚ್ಚು ಹೆಚ್ಚು ಜನ…

Rate this: