ನಿಮ್ಮ ವಿಂಡೋಸ್ ಸಿಸ್ಟಂನಲ್ಲೇ ಇದೆ ಕನ್ನಡ ಕೀಬೋರ್ಡ್…

ಮಾಹಿತಿ@ತಂತ್ರಜ್ಞಾನ – 35 (ಮೇ 20, 2013ರ ವಿಜಯ ಕರ್ನಾಟಕ ಅಂಕಣ) ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ (OS) ಇರುವ ಕಂಪ್ಯೂಟರ್‌ಗಳಿಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು 2014ರ ಏಪ್ರಿಲ್ 8ರಿಂದ ನಿಲ್ಲಿಸಲಿದೆ. ಅಂದರೆ XP ಕಾರ್ಯಾಚರಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಿಲ್ಲ, ಸಾಫ್ಟ್‌ವೇರ್/ಅಪ್ಲಿಕೇಶನ್/ಪ್ರೋಗ್ರಾಂಗಳ ಸುಧಾರಿತ ರೂಪಗಳೂ, ಅವುಗಳಿಗೆ ಬೆಂಬಲವೂ ಸಿಗುವುದಿಲ್ಲ ಹಾಗೂ ವೈರಸ್, ಫೀಶಿಂಗ್ ಮತ್ತಿತರ ಅಪಾಯ ತಡೆಗೆ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಒದಗಿಸುವುದಿಲ್ಲ. ಬದಲಾಗಿ ವಿಂಡೋಸ್ 7 ಹಾಗೂ ವಿಂಡೋಸ್ 8 ವ್ಯವಸ್ಥೆಗಳನ್ನೇ ಮುಂದುವರಿಸುತ್ತದೆ. ಈ ಸಂಗತಿ ಹೆಚ್ಚಿನವರಿಗೆ ತಿಳಿದಿರಲಾರದು.…

Rate this: