ಫೇಸ್‌ಬುಕ್ ಮೆಸೆಂಜರ್ ಮೂಲಕ ಆನ್‌ಲೈನ್ ಮೀಟಿಂಗ್: ಹೀಗೆ ಮಾಡಿ
ಮನೆಯಿಂದಲೇ ಕಚೇರಿ ಕೆಲಸ ನಿಭಾಯಿಸುವಲ್ಲಿ ಮತ್ತು ಕಚೇರಿಗೆ ಸಂಬಂಧಿಸಿದ ದೈನಂದಿನ ಸಭೆಗಳನ್ನು ನಡೆಸುವಲ್ಲಿ ಆ್ಯಪ್‌ಗಳು ಮಹತ್ತರ ಪಾತ್ರ ವಹಿಸಿವೆ. ಇತ್ತೀಚೆಗೆ ಝೂಮ್ ಹಾಗೂ ಹೌಸ್‌ಪಾರ್ಟಿ ಎಂಬ ಆ್ಯಪ್‌ಗಳು ಭರ್ಜರಿಯಾಗಿ ಪ್ರಚಾರ ಪಡೆದು, ಬಳಕೆಯೂ ಹೆಚ್ಚಾದ ಬೆನ್ನಿಗೆ, ಖಾಸಗಿತನ ರಕ್ಷಣೆ ಕುರಿತು ಆತಂಕಗಳು ಸೃಷ್ಟಿಯಾದವು. ಆದರೆ ಸ್ಕೈಪ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ಹ್ಯಾಂಗೌಟ್ಸ್ (ಗೂಗಲ್ ಮೀಟ್), ಸಿಸ್ಕೋ ವೆಬೆಕ್ಸ್ ಮುಂತಾದವುಗಳನ್ನು ಜನರು ನೆಚ್ಚಿಕೊಂಡಿದ್ದಾರೆ. ಇದರ ಮಧ್ಯೆಯೇ, ಆನ್‌ಲೈನ್ ಮೀಟಿಂಗ್‌ಗೆ ಇರುವ ಬೇಡಿಕೆಯನ್ನು ಮನಗಂಡು, ಫೇಸ್‌ಬುಕ್‌ನ ಮೆಸೆಂಜರ್ ತಂತ್ರಾಂಶವು ಕೂಡ…