ಮಿಸ್ಡ್ ಕಾಲ್‌ನಿಂದ ಬ್ಯಾಂಕ್ ಖಾತೆಗೆ ಕನ್ನ: ಎಚ್ಚರ ವಹಿಸುವುದು ಹೇಗೆ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 11 ಜನವರಿ 2019 ಐದಾರು ಮಿಸ್ಡ್ ಕಾಲ್ ಬಂದಿತ್ತು, ಇದರಿಂದಾಗಿ ಮುಂಬಯಿಯ ಉದ್ಯಮಿಯೊಬ್ಬರು ತಮ್ಮ ಬ್ಯಾಂಕಿನಿಂದ 1.86 ಕೋಟಿ ರೂ. ಹಣ ಕಳೆದುಕೊಂಡರು ಎಂಬ ಸುದ್ದಿ ಕಳೆದ ವಾರ ಪ್ರಕಟವಾಯಿತು. ಅರೆ, ಮಿಸ್ಡ್ ಕಾಲ್‌ನಿಂದ ಹಣ ಹೇಗೆ ಮಾಯವಾಗುತ್ತದೆ? ಅಂತ ಅಚ್ಚರಿ ಪಟ್ಟವರಲ್ಲಿ ನಾನೂ ಒಬ್ಬ. ಈ ಕುರಿತು ಒಂದಿಷ್ಟು ವಿಚಾರಣೆ ನಡೆಸಿದಾಗ, ನಾವೂ ನೀವೂ ಹೇಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂಬುದೂ ತಿಳಿಯಿತು. ಈ ಮಿಸ್ಡ್ ಕಾಲ್ ಬಂದಿರುವುದು…

Rate this:

ಆನ್‌ಲೈನ್‌ನಲ್ಲಿಯೂ ಮಕ್ಕಳ ರಕ್ಷಣೆ: ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿ

ಕಳೆದ ವಾರ ಬೆಂಗಳೂರಲ್ಲೇ ನಡೆದ ಒಂದು ಘಟನೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮುಂಬಯಿಯ ‘ಸ್ನೇಹಿತ’ನೊಬ್ಬ ಕಿರುಕುಳ ನೀಡುತ್ತಿದ್ದಾನೆ, ಕಾಲೇಜಿಗೆ ಬಂದು ಪೀಡಿಸಿದ್ದಾನೆ, ಫೋಟೋಗಳನ್ನು ತಿದ್ದುಪಡಿ ಮಾಡಿ ಬೆದರಿಸುತ್ತಿದ್ದಾನೆ ಅಂತ ಬೆಂಗಳೂರಿನ ಪಿಯು ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡುತ್ತಾಳೆ. ಇದು ತೀರಾ ಇತ್ತೀಚಿನ ಘಟನೆ. ಸಾಮಾಜಿಕ ಜಾಲ ತಾಣದಲ್ಲಿ ಬೆಳ್ಳಗಿರುವುದೆಲ್ಲವೂ ಹಾಲಲ್ಲ ಎಂಬುದನ್ನು ಅರಿಯದ ಮುಗ್ಧ ಯುವ ಜನಾಂಗವಿಂದು, ಸೂಕ್ತ ಮಾರ್ಗದರ್ಶನವಿಲ್ಲದೆ ಇಂಟರ್ನೆಟ್ ಲೋಕದಲ್ಲಿ ದಾರಿ ತಪ್ಪುತ್ತಿದೆ ಮತ್ತು ಕಡೆಗೆ ಕಿರುಕುಳವನ್ನೂ ಅನುಭವಿಸುತ್ತಿದೆ. ಇದು ತಂತ್ರಜ್ಞಾನ ಯುಗದಲ್ಲಿ ಪೋಷಕರಿಗೆ ಹೆಚ್ಚುವರಿ…

Rate this:

ಬ್ಯಾಂಕಿಂಗ್, ಯುಪಿಐ ಆ್ಯಪ್ ಬಳಕೆ ಬಗ್ಗೆ ಎಚ್ಚರಿಕೆಯಿರಲಿ

ತಂತ್ರಜ್ಞಾನವೆಂಬುದು ಎಷ್ಟು ಅನುಕೂಲಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಎರಡು ವಾರದ ಹಿಂದೆ ಆತಂಕಕಾಗಿ ಸುದ್ದಿಯೊಂದು ಬಂದಿತ್ತು. ಹಲವಾರು ಬ್ಯಾಂಕುಗಳ ನಕಲಿ ಆ್ಯಪ್‌ಗಳು ಗೂಗಲ್‌ನ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ (ಆ್ಯಪ್‌ಗಳನ್ನು ಭಟ್ಟಿ ಇಳಿಸಿಕೊಳ್ಳುವ ತಾಣ) ಕಾರ್ಯಾಚರಿಸುತ್ತಿದ್ದು, ಹಲವಾರು ಮಂದಿ ತಮ್ಮ ಹಣ ಕಳೆದುಕೊಂಡಿದ್ದಾರೆ ಅಂತ. ಅಂದರೆ, ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿರುವಂತೆಯೇ, ವಂಚಕರೂ, ವಂಚನೆಯೂ ಅಪ್‌ಗ್ರೇಡ್ ಆಗುತ್ತಿರುತ್ತದೆ. ಹೀಗಾಗಿ, ನಮ್ಮ ಅನುಕೂಲಕ್ಕೆ ತಂತ್ರಜ್ಞಾನವಿದೆ ಎಂದು ಸುಮ್ಮನೆ ಕೂರುವಂತಿಲ್ಲ, ಎಚ್ಚರ ವಹಿಸಲೇಬೇಕು ಎಂಬುದಕ್ಕೆ ಪದೇ ಪದೇ ವರದಿಯಾಗುತ್ತಿರುವ ಇಂಥ ಸೈಬರ್ ವಂಚನೆ ಪ್ರಕರಣಗಳೇ…

Rate this: