ನಿಮ್ಮ ಮೊಬೈಲ್, ವಾಟ್ಸಾಪ್ ಕನ್ನಡಮಯವಾಗಿಸುವುದು ಹೇಗೆ?

ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಮಾನ ಮನಸ್ಕರನ್ನು ಗ್ರೂಪುಗಳ ಮೂಲಕ ಒಂದುಗೂಡಿಸಿ, ವೈಯಕ್ತಿಕ ಸಂಭಾಷಣೆಗಳಿಗಾಗಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಎಂಬ ಕಿರು ಸಾಮಾಜಿಕ ಜಾಲತಾಣ ಬೆಳೆದುಬಂದ ಬಗೆ ಅಗಾಧ. ಅದರ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅದು ಕೂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಭಾರತದಲ್ಲೇ ಸುಮಾರು 20 ಕೋಟಿಗೂ ಹೆಚ್ಚು ಮಂದಿ ವಾಟ್ಸಾಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅದು ಗ್ರಾಮಾಂತರ ಜನರನ್ನೂ ತಲುಪುತ್ತಿದೆ. ಕೃಷಿ, ಮಾರುಕಟ್ಟೆ ದರ, ಉದ್ಯೋಗ ಇತ್ಯಾದಿ ಸರಕಾರಿ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ವಾಟ್ಸಾಪ್ ಸಂದೇಶದ ಮೂಲಕವೇ…

Rate this:

ಅನಿವಾರ್ಯ ಅಗತ್ಯ: ಆಧಾರ್, ಮೊಬೈಲ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಹೀಗೆ

ಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಎಂಬುದು ಆಧಾರವೇ ಆಗುತ್ತಿದೆ. ಸರಕಾರವಂತೂ ಆಧಾರ್ ಸಂಖ್ಯೆ ಲಿಂಕ್ ಮಾಡುವ ಕ್ಷೇತ್ರಗಳನ್ನು ವಿಸ್ತರಿಸುತ್ತಲೇ ಇದೆ. ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಖಾತೆಗಳು ಜನ ಸಾಮಾನ್ಯರು ಅತ್ಯಗತ್ಯವಾಗಿ ಲಿಂಕ್ ಮಾಡಿಸಿಕೊಳ್ಳಬೇಕಾದ ಎರಡು ಸಂಗತಿಗಳು. ಇದರ ಜತೆಗೆ, ಪ್ಯಾನ್ ಕಾರ್ಡ್, ವಿಮಾ ಪಾಲಿಸಿಗಳು, ಮ್ಯೂಚುವಲ್ ಫಂಡ್, ಪಿಪಿಎಫ್ ಖಾತೆಗಳು ಕೂಡ ಆಧಾರ್ ವ್ಯಾಪ್ತಿಗೆ ಬರುತ್ತಿವೆ. ಜನ ಸಾಮಾನ್ಯರು ಕೂಡ ಹಲವಾರು ಕರೆಗಳು, ಎಸ್ಸೆಮ್ಮೆಸ್ ಬಂದಾಗ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಮಧ್ಯೆ, ಆಧಾರ್ ಲಿಂಕ್ ಮಾಡಿ ಎನ್ನುತ್ತಾ…

Rate this:

ಫೋನ್ ಬದಲಿಸಿದಾಗ ಹೊಸ ಫೋನ್‌ಗೆ WhatsApp ವರ್ಗಾಯಿಸುವುದು ಹೇಗೆ?

ಸ್ಮಾರ್ಟ್ ಫೋನ್ ಇದ್ದವರಲ್ಲಿ ಬಹುತೇಕರು ವಾಟ್ಸಾಪ್ ಬಳಸಿಯೇ ಇರುತ್ತಾರೆ. ಆದರೆ, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಫೋನ್‌ಗಳು ಕೂಡ ಆಧುನೀಕರಣವಾಗುತ್ತಿವೆ ಮತ್ತು ಅಗ್ಗದ ದರದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆಧುನಿಕತೆಗೆ ಮರುಳಾದವರು, ಅದರ ಆಕರ್ಷಣೆಗೆ ಒಳಗಾದವರು, ಮೊಬೈಲ್ ಫೋನ್ ಬಗ್ಗೆ ಕ್ರೇಝ್ ಹೊಂದಿರುವವರು, ಹಣವಂತರು ಪದೇ ಪದೇ ಫೋನ್ ಬದಲಾಯಿಸುವುದು ಸಾಮಾನ್ಯ. ಇನ್ನು ಜನಸಾಮಾನ್ಯರಾದರೆ, ಫೋನ್ ಕೆಟ್ಟು ಹೋದಾಗಲೋ, ಸಾಕಷ್ಟು ವರ್ಷಗಳ ಕಾಲ ಬಳಸಿದ ಬಳಿಕವೋ ಅಥವಾ ಹಳೆಯ ತಂತ್ರಜ್ಞಾನ ಸಪೋರ್ಟ್ ಮಾಡುತ್ತಿಲ್ಲವೆಂಬ ಕಾರಣಕ್ಕೋ…

Rate this:

ಆ್ಯಪ್ ಇನ್‌ಸ್ಟಾಲ್ ಮಾಡುವಾಗ Error ತೋರಿಸುತ್ತಿದೆಯೇ?: ಹೀಗೆ ಮಾಡಿ…

ಇತ್ತೀಚೆಗೆ ಹೊಸದಾಗಿ ಆಂಡ್ರಾಯ್ಡ್ ಫೋನ್ ಖರೀದಿಸಿದವರು ಕೆಲವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವಾಗ ‘Screen Overlay Detected’ ಅಂತ ಒಂದು ಎರರ್ ಮೆಸೇಜ್ ಬರ್ತಿದೆ ಅಂತ ನನ್ನಲ್ಲಿ ಹೇಳಿದ್ದರು. ಏನು ಮಾಡಿದರೂ ಇದು ಹೋಗುತ್ತಿಲ್ಲ ಎಂಬುದು ಅವರ ದೂರು. ನಾನೂ ಹೊಸದೊಂದು ಫೋನ್‌ನಲ್ಲಿ ಪರಿಶೀಲಿಸಿ ನೋಡಿದಾಗ ತಿಳಿಯಿತು, ಇದೆಲ್ಲ ಆಂಡ್ರಾಯ್ಡ್‌ನ ಹೊಸ ಕಾರ್ಯಾಚರಣೆ ವ್ಯವಸ್ಥೆಯ ಸೆಟ್ಟಿಂಗ್ ವೈಶಿಷ್ಟ್ಯವೆಂಬುದು. ಹೀಗಾಗಿ, ಮಾರ್ಷ್‌ಮೆಲೋ ಹಾಗೂ ನೌಗಾಟ್ ಎಂಬ ಆಂಡ್ರಾಯ್ಡ್‌ನ ತೀರಾ ಇತ್ತೀಚಿನ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಹೊಂದಿರುವ ಫೋನ್…

Rate this:

ಟೆಕ್ ಟಾನಿಕ್: ಮೊಬೈಲಿನಲ್ಲಿ FB ವೀಡಿಯೋ

ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ ಆಗುತ್ತಾ ನಿಮ್ಮ ಇಂಟರ್ನೆಟ್ ಪ್ಯಾಕನ್ನೂ ಕಬಳಿಸಿಬಿಡುತ್ತವೆ. ಈ ವೀಡಿಯೋಗಳ ಹಾವಳಿ ತಪ್ಪಿಸಲು ಮತ್ತು ಡೇಟಾ ಪ್ಯಾಕ್ ಉಳಿಸಲು ಹೀಗೆ ಮಾಡಿ. FB ಆ್ಯಪ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ, ‘ಅಕೌಂಟ್ ಸೆಟ್ಟಿಂಗ್ಸ್’ ಅಂತ ಕ್ಲಿಕ್ ಮಾಡಿ. ‘ವೀಡಿಯೋಸ್ ಆ್ಯಂಡ್ ಫೋಟೋಸ್’ ಕ್ಲಿಕ್ ಮಾಡಿ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ Never…

Rate this:

ಫೋನ್ ನೀರಿಗೆ ಬಿತ್ತೇ? ಆತುರ ಪಡಬೇಡಿ

ಸ್ನೇಹಿತರೊಬ್ಬರು ಕರೆ ಮಾಡಿ, ‘ನನ್ನ ಫೋನ್ ನೀರಿಗೆ ಬಿತ್ತು, ಏನು ಮಾಡಬೇಕು’ ಅಂತ ಕೇಳಿದರು. ಸದಾ ಕಾಲ ಅಂಗೈಯಲ್ಲಿರುವ ಸ್ಮಾರ್ಟ್ ಫೋನ್, ಅನುಕ್ಷಣದ ಸಂಗಾತಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಕಚೇರಿ ಕಾರ್ಯ ನಿಮಿತ್ತವೋ, ಸ್ವ ಕಾರ್ಯ ನಿಮಿತ್ತವೋ ತುರ್ತು ಕರೆ ಅಥವಾ ಸಂದೇಶವೊಂದರ ನಿರೀಕ್ಷೆಯಲ್ಲಿರುವಾಗ ಎಲ್ಲೇ ಹೋದರೂ ಅದನ್ನು ಒಯ್ಯಬೇಕೆಂಬ ತುಡಿತವಿರುವುದು ಸಹಜ. ಇಂತಹಾ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಆಕಸ್ಮಿಕವಾಗಿ ನೀರಿಗೆ ಬೀಳುವುದೋ ಅಥವಾ ಮಳೆಗೆ ನನೆಯುವುದೋ – ನಡೆಯುತ್ತಿರುತ್ತದೆ. ಹಾಗಿದ್ದರೆ, ನಿಮಗೂ ಇಂತಹಾ…

Rate this:

ಫೋನ್‌ನ ಬ್ಯಾಟರಿ ಬೇಗನೇ ಚಾರ್ಜ್ ಆಗುತ್ತಿಲ್ಲವೇ? ಇತ್ತ ಗಮನಿಸಿ…

ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ ಹಲವರು ಹೇಳಿರುವುದನ್ನು ಕೇಳಿದ್ದೇನೆ. ಇಂತಹಾ ಸಮಸ್ಯೆ ಬಂದಾಕ್ಷಣ ಕೆಲವರು ಅಗ್ಗದ ದರದ ಚಾರ್ಜರ್‌ಗಳನ್ನು ಖರೀದಿಸಿದವರಿದ್ದಾರೆ, ಸಮಸ್ಯೆ ಮತ್ತೆ ಮುಂದುವರಿಯುತ್ತಲೇ ಇತ್ತು. ಈ ಅನುಭವದ ಆಧಾರದಲ್ಲಿ, ಚಾರ್ಜಿಂಗ್‌ನಲ್ಲಿ ಕೂಡ ನಾವು ಕೆಲವೊಂದು ಮೂಲಭೂತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡಲು ಈ ಲೇಖನ. ಹೆಚ್ಚಿನ ಚಾರ್ಜಿಂಗ್ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಅಡಾಪ್ಟರ್‌ಗೆ…

Rate this:

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್… ಹೀಗೆ ಕಂಪ್ಯೂಟರಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಂದು ಕೂಡ ಅತ್ಯುಪಯುಕ್ತ ವ್ಯವಸ್ಥೆಗಳನ್ನು ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್ ಒದಗಿಸಿದೆ. ಜನ ಸಾಮಾನ್ಯರಿಗೆ ಹತ್ತಿರವಾಗುತ್ತಲೇ, ಆನ್‌ಲೈನ್ ಚಟುವಟಿಕೆಯ ವೇಳೆ ಸುರಕ್ಷಿತವಾಗಿರುವುದರ ಬಗ್ಗೆಯೂ ಅದು ಮಾಹಿತಿ ನೀಡುತ್ತದೆ. ಇದಕ್ಕಾಗಿಯೇ ಗೂಗಲ್ ಟಿಪ್ಸ್ ಎಂಬ ಜಾಲ ತಾಣವನ್ನೂ ತೆರೆದಿದೆ. ಸದಾ ಕಾಲ…

Rate this:

108: ಮೊಬೈಲ್‌ನಲ್ಲಿ ಕಂಪ್ಯೂಟರ್ ಜಾಲಾಡಿ; ಬೇರೆಲ್ಲೋ ಇರುವ ಕಂಪ್ಯೂಟರನ್ನೂ ನಿಯಂತ್ರಿಸಿ

ಕಚೇರಿಯಲ್ಲಿ ಕಂಪ್ಯೂಟರಲ್ಲಿ ಟೈಪ್ ಮಾಡಿಟ್ಟ ಇಮೇಲ್ ಅನ್ನು ಮನೆಯಿಂದಲೇ ಮುಂದುವರಿಸಬೇಕೇ? ದೂರದಲ್ಲೆಲ್ಲೋ ಇರುವ ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ ಫೈಲನ್ನು ನಿಮ್ಮ ಮೊಬೈಲ್ ಮೂಲಕವೇ ಓದಬೇಕೇ? ಸಾಧ್ಯವಿಲ್ಲ ಎಂದುಕೊಂಡಿರಾ? ಇದು ಸಾಧ್ಯ ಮತ್ತು ತೀರಾ ಸುಲಭ ಕೂಡ. ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತೇ ಅಂಗೈಯಲ್ಲಿ ಅಂತ ಹೇಳೋದು ಇದಕ್ಕೇ. ಟೀಮ್ ವ್ಯೂವರ್ ಎಂಬೊಂದು ಉಚಿತ ತಂತ್ರಾಂಶದ ಮೂಲಕ ಬೆಂಗಳೂರಿನಿಂದ ಕುಳಿತು ಮಂಗಳೂರಿನಲ್ಲಿರುವ ಕಂಪ್ಯೂಟರನ್ನು ನಿಯಂತ್ರಿಸಬಹುದು. ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ಹೆಚ್ಚು ಮನೆಮಾತಾಗಿರುವ ಈ ತಂತ್ರಾಂಶವನ್ನು ಯಾರು ಬೇಕಿದ್ದರೂ ಸುಲಭವಾಗಿ ಉಪಯೋಗಿಸಬಹುದು. ಮನೆಯಲ್ಲಿ ಕಂಪ್ಯೂಟರ್…

Rate this:

ಆ್ಯಪ್ ಜತೆಗೆ ಒಂದು ದಿನ

ಕಾಮಿಸಿದ್ದನ್ನು ನೀಡುವ ಕಾಮಧೇನುವಾಗಿ, ಕಲ್ಪಿಸಿದ್ದನ್ನು ಧುತ್ತನೇ ಮುಂದಿಡುವ ಕಲ್ಪವೃಕ್ಷವಾಗಿ, ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಾಗಿ ಅಭೀಪ್ಸಿತಾರ್ಥ ಸಿದ್ಧಿದಾಯಕವಾಗಿ, ಮನೋವೇಗದಿಂದ ಕೆಲಸ ಈಡೇರಿಸಬಲ್ಲ ಸಾಮರ್ಥ್ಯ ತಂತ್ರಜ್ಞಾನಕ್ಕಿದೆ. ಆ್ಯಪ್ ಅಂತ ಸ್ವೀಟಾಗಿ, ಕ್ಯೂಟಾಗಿ ಎಲ್ಲರ ನಾಲಿಗೆಯಲ್ಲಿ ಕುಣಿದಾಡುತ್ತಿರುವ ಈ ಅಪ್ಲಿಕೇಶನ್‌ಗಳೆಂಬ ಭ್ರಾಮಕ ಜಗತ್ತಿನಲ್ಲಿ ಏನಿದೆ, ಏನಿಲ್ಲ? ನಮ್ಮೊಂದು ದಿನದ ಬದುಕಿನ ಬಹುತೇಕ ಎಲ್ಲ ಕ್ಷಣಗಳನ್ನೂ ಈ ಆ್ಯಪ್‌ಗಳೇ ನಿಭಾಯಿಸಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವ ಫೇಸ್‌ಬುಕ್, ವಾಟ್ಸಾಪ್, ಹ್ಯಾಂಗೌಟ್ಸ್ ಮುಂತಾದವನ್ನು ಹೊರಗಿಟ್ಟು ಇನ್ನೂ ಕೆಲವು ಆ್ಯಪ್‌ಗಳು ನಮ್ಮನ್ನು ಹೇಗೆ ಮುನ್ನಡೆಸುತ್ತವೆ? ಹೀಗೆ…

Rate this: