ವರ್ಕ್ ಫ್ರಂ ಹೋಂ?: ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿಸುವುದು ಹೀಗೆ!

ವರ್ಕ್ ಫ್ರಂ ಹೋಮ್? ಇಂಟರ್ನೆಟ್ ಸಂಪರ್ಕ ತತ್‌ಕ್ಷಣಕ್ಕೆ ಸಿಗುತ್ತಿಲ್ಲವಾದರೆ, ನಿಮ್ಮ ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಧಾನ ಇಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್. ಹೀಗಾಗಿ ವರ್ಕ್ ಫ್ರಂ ಹೋಮ್ ಅಂದರೆ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ. ಆದರೆ, ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ಕೂಡ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ಹೊಸದಾಗಿ ವೈಫೈ ಹಾಟ್‌ಸ್ಪಾಟ್ ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕ…

Rate this:

ಮೊಬೈಲ್ ಫೋನ್‌ನಿಂದಲೂ ಕರೋನಾ ವೈರಸ್ ಹರಡುತ್ತದೆಯೇ?

ಎಲ್ಲೆಡೆ ಕೊರೊನಾ ವೈರಸ್ಸಿನದ್ದೇ ರಾದ್ಧಾಂತ. ಈ ವೈರಸ್ ಹರಡುವ ಕೋವಿಡ್-19 ಕಾಯಿಲೆಯಿಂದ ಪಾರಾಗಲು ಜನರು ಆತಂಕ ಪಡುತ್ತಿರುವಂತೆಯೇ, ಫೇಕ್ ಸುದ್ದಿಗಳು, ಭಯ ಹುಟ್ಟಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಈ ಆತಂಕದ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ‘ಸೋಷಿಯಲ್ ಡಿಸ್ಟೆನ್ಸಿಂಗ್’ ಅಂದರೆ ಸಾಮಾಜಿಕವಾಗಿ ಪರಸ್ಪರ ಸಂಪರ್ಕದಿಂದ ದೂರ ಇರುವುದು ಇಲ್ಲವೇ ಅಂತರ ಕಾಯ್ದುಕೊಳ್ಳುವುದು ಎಂಬ ವಿಧಾನವನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಆದರೆ ಈ ಪದಗುಚ್ಛವನ್ನೇ, ‘ಸೋಷಿಯಲ್ ಮೀಡಿಯಾ ಡಿಸ್ಟೆನ್ಸಿಂಗ್’ ಎಂದು ತಿಳಿದುಕೊಂಡವರು ಮತ್ತೊಂದು ವಿಧದಲ್ಲಿ…

Rate this:

ಮೊಬೈಲ್‌ನಲ್ಲಿ ಡಾರ್ಕ್ ಮೋಡ್ ಎಂಬ ಹೊಸ ಟ್ರೆಂಡ್: ಏನಿದು, ನಮಗೇನು ಲಾಭ?

ಕಳೆದ ಎರಡೇ ಎರಡು ವರ್ಷಗಳಲ್ಲಿ ಮೊಬೈಲ್ ಅವಲಂಬನೆ ಜಾಸ್ತಿಯಾಗಿಬಿಟ್ಟಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಅದರಲ್ಲೂ ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳ ಬಳಕೆ ಹೆಚ್ಚಾಗಿದೆ; ಮಕ್ಕಳಾದರೆ ಗೇಮ್ಸ್‌ನಲ್ಲಿ (ದೊಡ್ಡವರೂ ಕೂಡ!) ಮುಳುಗೇಳುತ್ತಿದ್ದಾರೆ. ಇದರ ನೇರ ಪರಿಣಾಮವಾಗುತ್ತಿರುವುದು ನಮ್ಮ ಕಣ್ಣುಗಳ ಮೇಲೆ ಎಂಬುದು ಸರ್ವವಿದಿತ. ಹಾಗೂ ಕಣ್ಣಿಗೇ ನಿದ್ದೆ ಹತ್ತುವುದರಿಂದಾಗಿ ನಿದ್ದೆಯ ಮೇಲೂ, ಪರಿಣಾಮವಾಗಿ ತತ್ಸಂಬಂಧಿತ ಅನಾರೋಗ್ಯಗಳಿಗೂ ಮೊಬೈಲ್ ಫೋನೆಂಬ ಮಾಯಾಲೋಕವು ನಮಗರಿವಿಲ್ಲದಂತೆಯೇ ಕಾರಣವಾಗುತ್ತಿರುವುದು ದಿಟ. ನಿದ್ದೆಗೆ ಕಾರಣವಾಗುವ ಹಾರ್ಮೋನುಗಳಲ್ಲಿ ಮೆಲಟೋನಿನ್ ಕೂಡ ಒಂದು. ಆದರೆ ಮೊಬೈಲ್, ಟ್ಯಾಬ್ಲೆಟ್,…

Rate this:

ಸುನೋಜೀ, ಬರುತ್ತಿದೆ 5G!: ನೀವು ತಿಳಿಯಬೇಕಾದ ವಿಚಾರ

5ಜಿ ಎಂಬುದು ಮೊಬೈಲ್ ನೆಟ್‌ವರ್ಕ್‌ನ ಅತ್ಯಾಧುನಿಕ ತಂತ್ರಜ್ಞಾನ. ಇದರಲ್ಲಿ ‘ಜಿ’ ಅಕ್ಷರವು ಜನರೇಶನ್ ಅಥವಾ ಪೀಳಿಗೆ/ತಲೆಮಾರು ಎಂಬುದನ್ನು ಸೂಚಿಸುತ್ತದೆ. ಬಹುಶಃ 1ನೇ ಪೀಳಿಗೆ ತಂತ್ರಜ್ಞಾನವನ್ನು ನಾವು-ನೀವು ಬಳಸಿರಲಿಕ್ಕಿಲ್ಲ. ಮೊಬೈಲ್ ಫೋನ್ ನಾವು ಬಳಸಲಾರಂಭಿಸಿದ್ದೇ 2ಜಿ ತಂತ್ರಜ್ಞಾನದ ಮೂಲಕ. ಅದಕ್ಕೆ ಮೊದಲು 1973ರಲ್ಲಿ ಅಮೆರಿಕದ ಎಂಜಿನಿಯರ್ ಮಾರ್ಟಿನ್ ಕೂಪರ್ ಎಂಬಾತ, ಮೋಟೋರೋಲ ಕಂಪನಿಯ ತನ್ನ ಜತೆಗಾರರೊಂದಿಗೆ ಸೇರಿ ಮೊದಲ ಬಾರಿಗೆ ಮೊಬೈಲ್ ಫೋನ್ ರೂಪಿಸಿ, ಕರೆ ಮಾಡಿ ಇತಿಹಾಸ ಸೃಷ್ಟಿಸಿದ್ದ. ಅಂದಿನಿಂದ ಈ ಮೊಬೈಲ್ ಫೋನೆಂಬ ಅಂಗೈಯ ಅರಮನೆಯು…

Rate this:

ಹದಿಹರೆಯದವರವಲ್ಲಿ ಮೊಬೈಲ್ ಗೀಳು ಹೆಚ್ಚಿಸಿದ ಗೋಳು

Digital Detox ಮಾತಿಲ್ಲ, ಕತೆಯಿಲ್ಲ. ಮೊಬೈಲ್ ಫೋನೊಂದು ಕೈಗೆ ಸಿಕ್ಕಿದೆ. ನನ್ನದೇ ಪ್ರಪಂಚ. ಯಾರೇನು ಬೇಕಾದರೂ ಆಡಿಕೊಳ್ಳಲಿ, ಮಾಡಿಕೊಳ್ಳಲಿ. ನನಗೇಕೆ ಬೇರೆಯವರ ಉಸಾಬರಿ? ನನ್ನ ಪಾಡಿಗೆ ನಾನಿದ್ದರಾಯಿತಲ್ಲ… ಅಲ್ಲ, ಏನೆಲ್ಲಾ ಇದೆ ಇದರಲ್ಲಿ! ಅಂಗೈಯಲ್ಲಿ ಅರಮನೆ ಅಂತ ಮಾತಲ್ಲಷ್ಟೇ ಕೇಳಿದ ನನಗೆ, ಇದು ಸಾಕಾರಗೊಂಡಿದ್ದೊಂದು ಅಚ್ಚರಿಯ ಸಂಭ್ರಮ. ಹೊತ್ತು ಹೋಗಬೇಕಲ್ಲಾ! ಈ ರೀತಿಯ ಸ್ವಗತದೊಂದಿಗೆ ಮನೆಯ ಒಂದು ಮೂಲೆಗೆ ಆತುಕೊಂಡಿದ್ದು ಯಾರು? ಕೂಡು ಕುಟುಂಬದಲ್ಲಿ ಬೆಳೆದು ಇದೀಗ ನ್ಯೂಕ್ಲಿಯಾರ್ ಕುಟುಂಬವಾಗಿ ಪರಿವರ್ತನೆಗೊಂಡ ಬಳಿಕ, ಮಕ್ಕಳು, ಮೊಮ್ಮಕ್ಕಳ ಪ್ರೀತಿ…

Rate this:

ಬರುತ್ತಿದೆ ಪುಟ್ಟದಾದ ಇ-ಸಿಮ್ ಕಾರ್ಡ್: ಏನಿದು? ಏನು ಉಪಯೋಗ?

ಸೆಪ್ಟೆಂಬರ್ 12ರಂದು ಆ್ಯಪಲ್ ಕಂಪನಿಯು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದಾಗ, ಅತ್ಯಾಧುನಿಕವಾದ, ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸಬಲ್ಲ ತಂತ್ರಜ್ಞಾನವೊಂದನ್ನು ಕೂಡ ತಿಳಿಯಪಡಿಸಿತು. ಇದುವೇ ಇ-ಸಿಮ್ ಅಥವಾ ಎಲೆಕ್ಟ್ರಾನಿಕ್ ಸಿಮ್. ಇದೇನು, ಇದರ ಸಾಧ್ಯತೆಗಳೇನು? ನಮಗೇನು ಲಾಭ? ಹೌದು, ಇಂದು ಇಂಟರ್ನೆಟ್ ಸಂಪರ್ಕವಿರುವ ಸಿಮ್ ಕಾರ್ಡ್ ಹೊಂದುವುದು ತೀರಾ ಸುಲಭವೂ ಅಗ್ಗವೂ ಆಗಿರುವುದರಿಂದ, ಮಾತನಾಡಲೊಂದು, ಇಂಟರ್ನೆಟ್ ಸಂಪರ್ಕಕ್ಕೊಂದು, ವಾಟ್ಸ್ಆ್ಯಪ್‌ಗೊಂದು ಸಿಮ್ ಕಾರ್ಡ್ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಸ್ಮಾರ್ಟ್ ಫೋನ್ ತಯಾರಕರು ಕೂಡ ಡ್ಯುಯಲ್ (ಎರಡು) ಸಿಮ್ ಕಾರ್ಡ್…

Rate this:

ಮೊಬೈಲ್ ಇರೋದು ಮಕ್ಳ್ ಕೈಲಲ್ವೇ?

“ಪುಟ್ಟಾ, ಎಷ್ಟೂಂತ ಆ ಮೊಬೈಲ್ ಫೋನ್ ಬಳಸ್ತೀಯಾ?” “ಇಲ್ಲಮ್ಮಾ, ಚೂರೇ ಚೂರು. ಒಂದ್ಗಂಟೆ ಮಾತ್ರ” *** “ಬೋರಾಗ್ತಿದೆ, ಮೊಬೈಲ್ ಕೊಡಮ್ಮಾ” “ಫ್ರೆಂಡ್ಸೆಲ್ಲ ಮೊಬೈಲ್ ಆಡ್ತಾರೆ, ನಂಗ್ಯಾಕಮ್ಮಾ ಬಿಡಲ್ಲ?” “ಇಲ್ಲಮ್ಮ, ಇನ್ನೂ ಒಂದು ಗಂಟೆ ಆಗಿಲ್ಲ, ತಡಿ” *** “ಅಪ್ಪ ನೋಡಿದ್ರೆ ಯಾವಾಗ್ಲೂ ಮೊಬೈಲ್ ನೋಡ್ತಾರೆ, ನಂಗೆ ಮಾತ್ರ ಯಾಕಮ್ಮಾ ಹೇಳ್ತೀ?” “ಫ್ರೆಂಡ್ಸ್ ಪೇರೆಂಟ್ಸ್ ಅವ್ರಿಗೇನೂ ಹೇಳಲ್ಲ, ನೀವ್ಯಾಕೆ ಇಷ್ಟು ಸ್ಟ್ರಿಕ್ಟ್ ಮಾಡೋದು?” ಮಕ್ಕಳಿರುವ ಪ್ರತಿಯೊಂದು ಮನೆಯಲ್ಲಿ ಮಾತು-ಕಥೆ ಸರ್ವೇಸಾಮಾನ್ಯವಾಗಿ ಈ ಪರಿ ಸಾಗುತ್ತದೆ. ಆಧುನಿಕತೆಯೊಂದಿಗೆ ಜೀವನಶೈಲಿ ಬದಲಾಗುತ್ತಾ…

Rate this:

ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಫೋನ್ ಮೆಮೊರಿ ಕಾರ್ಡ್‌ನಲ್ಲಿರುವ ಫೈಲುಗಳು ಡಿಲೀಟ್ ಆದರೆ ಏನು ಮಾಡಬೇಕೆಂದು ಕಳೆದ ಬಾರಿಯ ಅಂಕಣದಲ್ಲಿ ತಿಳಿಸಿದ್ದೆ. ಪುಟ್ಟ ಸಾಧನದಲ್ಲಿ ಅಷ್ಟೆಲ್ಲಾ ಫೈಲುಗಳು, ಆ್ಯಪ್‌ಗಳನ್ನು ಸೇರಿಸಬೇಕಿದ್ದರೆ ಮೆಮೊರಿ (ಸ್ಟೋರೇಜ್ ಅಥವಾ ಸ್ಥಳಾವಕಾಶ) ಹೆಚ್ಚು ಬೇಕಾಗುತ್ತದೆ. ಸ್ಮಾರ್ಟ್ ಫೋನ್‌ಗಳಲ್ಲಿ ವಿಸ್ತರಿಸಬಹುದಾದ ಮೆಮೊರಿ (ಎಕ್ಸ್‌ಟೆಂಡೆಬಲ್ ಮೆಮೊರಿ) ಅನ್ನೋ ಪದಗುಚ್ಛವನ್ನು ನೀವು ಕೇಳಿರಬಹುದು. ಅಂದರೆ, ಫೋನ್‌ನಲ್ಲಿ ಇರುವ ಇಂಟರ್ನಲ್ ಸ್ಟೋರೇಜ್ ಜಾಗವಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್ ಅಳವಡಿಸಿ 128 ಜಿಬಿವರೆಗೂ ವಿಸ್ತರಿಸಬಹುದು ಎಂದರ್ಥ. ಈ ಮೆಮೊರಿ ಬಗ್ಗೆ ಹೇಳಬೇಕಾದರೆ, ಒಂದು ಫೋನ್‌ನಲ್ಲಿ…

Rate this:

ಕಿರಿಕಿರಿ ಇಲ್ಲದ ಸೆಕೆಂಡರಿ ಫೋನ್: ಪರ್ಸ್‌ನಲ್ಲಿಟ್ಟುಕೊಳ್ಳಬಹುದಾದ ಫಾಕ್ಸ್ ಮಿನಿ 1

  ಅತ್ಯಂತ ತೆಳುವಾದ, ಕ್ರೆಡಿಟ್ ಕಾರ್ಡ್‌ನಂತೆ ಕಾಣಿಸಬಹುದಾದ ಮೊಬೈಲ್ ಫೋನ್ ಒಂದು ಇತ್ತೀಚೆಗೆ ಭಾರತದಲ್ಲಿಯೂ ಬಿಡುಗಡೆಯಾಗಿದೆ. ಫಾಕ್ಸ್ ಮೊಬೈಲ್ಸ್ ಹೊಸತಂದಿರುವ ಈ ಪುಟ್ಟ ಬೇಸಿಕ್ ಫೀಚರ್ ಹೆಸರು ಮಿನಿ 1. ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ, ಬೇಡಪ್ಪಾ ಈ ಇಂಟರ್ನೆಟ್, ವಾಟ್ಸಾಪ್, ಮೆಸೆಂಜರ್ ಕಿರಿಕಿರಿ, ಬರೇ ಫೋನ್ ಮಾಡಿಕೊಂಡು, ಎಸ್ಸೆಮ್ಮೆಸ್ ಸ್ವೀಕರಿಸಿಕೊಂಡು ಸುಮ್ಮನಿರೋಣ ಅಂತಂದುಕೊಳ್ಳುವವರಿಗೆ ಈ ಮೊಬೈಲ್ ಇಷ್ಟವಾಗಬಹುದು. ಇದರ ವಿಶೇಷತೆಯೆಂದರೆ, ನಿಮ್ಮಲ್ಲಿ ಎರಡು ಸರ್ವಿಸ್ ಪ್ರೊವೈಡರ್‌ಗಳ ಎರಡು ಸಿಮ್ ಕಾರ್ಡ್‌ಗಳು ಇದ್ದರೆ, ಒಂದನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು.…

Rate this:

ಟೆಕ್ ಟಾನಿಕ್: ಕದ್ದ ಫೋನ್ ಬಳಸಲಾಗದು

ಕಳವಾದ ಅಥವಾ ಎಲ್ಲೋ ಕಳೆದು ಹೋದ ಫೋನ್‌ಗಳು ಮರಳಿ ಸಿಗುವುದು ತೀರಾ ತ್ರಾಸದಾಯಕ. ಆದರೆ ಅವುಗಳಲ್ಲಿರುವ ಅಮೂಲ್ಯ ಮಾಹಿತಿಯದ್ದೇ ಚಿಂತೆ. ಫೋನ್ ಸಿಗದಿದ್ದರೂ ಪರವಾಗಿಲ್ಲ, ಅದರೊಳಗಿರುವ ಮಾಹಿತಿಯು ಕಳ್ಳರ ಪಾಲಾಗಬಾರದು ಎಂದುಕೊಳ್ಳುವವರೂ ಇದ್ದಾರೆ. ಇದೀಗ ಯಾವುದೇ ಸ್ಮಾರ್ಟ್ ಫೋನ್ ಕಳವಾದರೆ, ಅದನ್ನು ಯಾರಿಂದಲೂ ಬಳಸಲಾಗದ ಒಂದು ತಂತ್ರಜ್ಞಾನವನ್ನು ಅಳವಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಬೇರೆಯೇ ಸಿಮ್ ಕಾರ್ಡ್ ಹಾಕಿದರೂ ಕಳವಾದ ಫೋನ್ ಮತ್ತೆ ಕೆಲಸ ಮಾಡದಂತೆ ತಡೆಯುವ ತಂತ್ರಜ್ಞಾನವಿದು. ಕೇಂದ್ರೀಯ ಉಪಕರಣ ಗುರುತಿನ ರಿಜಿಸ್ಟರ್ (ಸಿಇಐಆರ್)…

Rate this: