ಸ್ಮಾರ್ಟ್ ಫೋನ್‌ನಲ್ಲಿ ಜಾಗ ಸಾಲುತ್ತಿಲ್ಲವೇ? ಒಂದಿಷ್ಟು ಟ್ರಿಕ್ಸ್ ಇಲ್ಲಿವೆ!
ಸ್ಮಾರ್ಟ್ ಫೋನ್ ಕೈಗೆ ಬಂದ ಬಳಿಕ ಎಲ್ಲರೂ ಫೋಟೋಗ್ರಾಫರ್ ಅಥವಾ ವೀಡಿಯೋಗ್ರಾಫರ್‌ಗಳಾಗಿದ್ದೇವೆ. ಫೋನ್ ಕೊಳ್ಳುವಾಗಲೂ ಕ್ಯಾಮೆರಾಕ್ಕೇ ಹೆಚ್ಚು ಪ್ರಾಧಾನ್ಯತೆ. ಹೋದಲ್ಲಿ ಬಂದಲ್ಲಿ, ಯಾವುದೇ ಶುಭ ಸಮಾರಂಭ, ಅಪರೂಪದ ಭೇಟಿಯನ್ನು ದಾಖಲೆಯಾಗಿ ಬರೆದಿಡಲು, ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಇಡೀ ಜಗತ್ತಿಗೇ ತಿಳಿಯಪಡಿಸುವ ಹಂಬಲ ನಮಗೆ. ಜೀವನದ ಪ್ರತಿಯೊಂದು ಕ್ಷಣಗಳನ್ನೂ ಜಗತ್ತಿಗೆ ಸಾರಿ ಹೇಳುವುದಕ್ಕಾಗಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್‌ಗಳಿದ್ದಾವಲ್ಲ… ಹೀಗಾಗಿ ಫೋಟೋ ಹಾಗೂ ವೀಡಿಯೋಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಇಷ್ಟೇ ಅಲ್ಲದೆ, ಸ್ಮಾರ್ಟ್‌ಫೋನುಗಳು ಈಗ ಬಿಡುವಿನ ಸಂಗಾತಿಯಾಗುತ್ತಾ,…