ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್: ಯಾವುದು ಕೊಳ್ಳುವುದೆಂಬ ಗೊಂದಲವೇ?
ಡೆಸ್ಕ್‌ಟಾಪ್ ಬದಲು ಲ್ಯಾಪ್‌ಟಾಪ್ ಖರೀದಿಗೆ ನೀವು ಮನಸ್ಸು ಮಾಡಿದ್ದರೆ, ಹೆಚ್ಚು ಹಣ ತೆರುವ ಬದಲು ಟ್ಯಾಬ್ಲೆಟ್‌ಗಳನ್ನೇಕೆ ಕೊಳ್ಳಬಾರದು ಅಂತ ಯೋಚಿಸಿದ್ದೀರಾ? ಹಾಗಿದ್ದರೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳ ಸೌಕರ್ಯಗಳು ಮತ್ತು ಇತಿಮಿತಿಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು. ಓದಿದ ಬಳಿಕ ಟ್ಯಾಬ್ಲೆಟ್ ಖರೀದಿಸುವ ಮೂಲಕ ಹಣ ಉಳಿತಾಯ ಮಾಡಬಹುದೇ ಅಥವಾ ಲ್ಯಾಪ್‌ಟಾಪೇ ನಿಮಗೆ ಅಗತ್ಯವೇ ಎಂಬುದನ್ನು ನಿರ್ಧರಿಸಿ ಮುಂದುವರಿಯಿರಿ. ಲ್ಯಾಪ್‌ಟಾಪ್: ತೂಕದ ಹಾಗೂ ಹೆಚ್ಚು ತಂತ್ರಾಂಶಗಳು ಅಗತ್ಯವಿರುವ ಕೆಲಸ ನಿಮ್ಮದಾಗಿದ್ದರೆ, ಇದಕ್ಕೆ ಟ್ಯಾಬ್ಲೆಟ್ ಬದಲು ಲ್ಯಾಪ್‌ಟಾಪ್ ಕೊಳ್ಳುವುದೇ ಸೂಕ್ತ.…