ನಿಮ್ಮ ಮೊಬೈಲ್, ವಾಟ್ಸಾಪ್ ಕನ್ನಡಮಯವಾಗಿಸುವುದು ಹೇಗೆ?
ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಮಾನ ಮನಸ್ಕರನ್ನು ಗ್ರೂಪುಗಳ ಮೂಲಕ ಒಂದುಗೂಡಿಸಿ, ವೈಯಕ್ತಿಕ ಸಂಭಾಷಣೆಗಳಿಗಾಗಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಎಂಬ ಕಿರು ಸಾಮಾಜಿಕ ಜಾಲತಾಣ ಬೆಳೆದುಬಂದ ಬಗೆ ಅಗಾಧ. ಅದರ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅದು ಕೂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಭಾರತದಲ್ಲೇ ಸುಮಾರು 20 ಕೋಟಿಗೂ ಹೆಚ್ಚು ಮಂದಿ ವಾಟ್ಸಾಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅದು ಗ್ರಾಮಾಂತರ ಜನರನ್ನೂ ತಲುಪುತ್ತಿದೆ. ಕೃಷಿ, ಮಾರುಕಟ್ಟೆ ದರ, ಉದ್ಯೋಗ ಇತ್ಯಾದಿ ಸರಕಾರಿ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ವಾಟ್ಸಾಪ್ ಸಂದೇಶದ ಮೂಲಕವೇ…