ಜಮೀನು, ಫ್ಲ್ಯಾಟ್ ಖರೀದಿ: ಮೋಸ ಹೋಗದಂತೆ ತಡೆಯುವ ಆ್ಯಪ್ ‘ದಿಶಾಂಕ್’

ಸರಕಾರಿ ಭೂಮಿ ಅಥವಾ ಅತಿಕ್ರಮಿತ ಭೂಮಿಯನ್ನು ಖರೀದಿಸದಂತೆ ಜನರನ್ನು ಎಚ್ಚರಿಸಲು ಹೊಸದೊಂದು ಆಂಡ್ರಾಯ್ಡ್ ಆ್ಯಪ್ ಅಣಿಯಾಗಿದೆ. ಭೂಗಳ್ಳರು, ಅತಿಕ್ರಮಣಕಾರರ ಹಾವಳಿ ತಡೆಗೂ ಇದು ನೆರವಾಗಲಿದೆ. ದಿಶಾಂಕ್ (DISHAANK) ಎಂಬ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಅಳವಡಿಸಿಕೊಂಡರೆ ಅದರ ಪ್ರಯೋಜನ ಪಡೆಯಬಹುದು. ನೀವು ನಿಂತ ಜಾಗದ ಸರ್ವೇ ನಂಬರ್ ಯಾವುದು ಎಂಬುದನ್ನು ಅದು ತಿಳಿಸುತ್ತದೆ. ಜಿಪಿಎಸ್ ಆಧರಿಸಿ ನಾವಿರುವ ಸ್ಥಳವನ್ನು ಈ ಆ್ಯಪ್ ಗುರುತಿಸುತ್ತದೆ. ನಂತರ ಅದು ಯಾವ ಸರ್ವೇ ನಂಬರಿಗೆ ಸೇರಿದೆ, ಸರಕಾರಿ…

Rate this:

ಮಾಹಿತಿ@ತಂತ್ರಜ್ಞಾನ: ಸಾಮಾನ್ಯ ಜನರಿಗೆ ತಲುಪಿಸುವ ಕಾಯಕಕ್ಕೆ ಐದು ವರ್ಷ!

ಇದು ಪುಂಗಿ ಅಲ್ಲ. 🙂 ನನಗಂತೂ ಹೆಮ್ಮೆಯ ವಿಚಾರ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲು ಇರಬಹುದೇನೋ. ಪತ್ರಿಕೆಯಲ್ಲಿ, ಓದುಗರನ್ನು ತಟ್ಟುವ ಅಂಕಣವೊಂದು ನಿರಂತರವಾಗಿ ಐದು ವರ್ಷಗಳ ಕಾಲ ಪ್ರಕಟವಾಗುತ್ತದೆ ಎಂದರೆ ಅದು ಹೆಮ್ಮೆಯೇ ಅಲ್ಲವೇ? ರಾಜಕೀಯ, ಕ್ರೀಡೆ, ನಾಟಕ, ಯಕ್ಷಗಾನ, ಭರತನಾಟ್ಯ ಸಂಗೀತ, ಸಿನಿಮಾ, ವಾಣಿಜ್ಯ ಮುಂತಾದ ಹತ್ತು ಹಲವಾರು ವಿಭಾಗಗಳಲ್ಲಷ್ಟೇ ಲೇಖನಗಳನ್ನು ಬರೆಯುತ್ತಿದ್ದ ನಾನು ಐದು ವರ್ಷದ ಹಿಂದೆ ಮಾಹಿತಿ ತಂತ್ರಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು ಆಕಸ್ಮಿಕವೇ. ವಿಜಯ ಕರ್ನಾಟಕಕ್ಕೊಂದು ವೆಬ್‌ಸೈಟ್ ಬೇಕೆಂಬ ಆಡಳಿತ ಮಂಡಳಿಯ…

Rate this:

ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ

ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್, ಆಫೀಸ್ ಅಥವಾ ಬೇರಾವುದೇ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸುವಾಗ ನಮ್ಮ ವೆಬ್ ಜಾಲಾಟದ (ಬ್ರೌಸಿಂಗ್) ಕುರುಹುಗಳೆಲ್ಲವೂ ಆ ಕಂಪ್ಯೂಟರಿನಲ್ಲಿ ಉಳಿಯುತ್ತವೆ ಮತ್ತು ಅದನ್ನು ಮತ್ತೊಬ್ಬರು ಬಂದು ಪುನಃ ನೋಡಬಹುದು, ದುರ್ಬಳಕೆ ಮಾಡಬಹುದು ಎಂಬ ವಿಚಾರ ಜನ ಸಾಮಾನ್ಯರಲ್ಲಿ ಬಹುತೇಕರಿಗೆ ತಿಳಿದಿಲ್ಲ. ಕಂಪ್ಯೂಟರ್ ಸೆಂಟರಿಗೆ ಹೋಗುವುದು,…

Rate this:

ಮೊಬೈಲ್‌ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್

ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್‌ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಈಗಲೂ ಮೊಬೈಲ್ ಫೋನ್‌ಗಳ ಪುಟ್ಟ ಕೀಬೋರ್ಡ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದಕ್ಕಿಂತಲೂ, ಇಂಗ್ಲಿಷಿನಲ್ಲಿಯೇ ಕನ್ನಡವನ್ನು (ಕಂಗ್ಲಿಷ್ ಎನ್ನಲಾಗುತ್ತಿದೆ) ಬರೆಯುವವರೇ ಹೆಚ್ಚು. ಆದರೆ ಅದನ್ನು ಓದುವವರಿಗೆ ಎಷ್ಟು ಕಷ್ಟವಾಗುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಇದಕ್ಕೆ ಸೂಕ್ತ ಮಾಹಿತಿಯ ಕೊರತೆಯೂ ಒಂದು ಕಾರಣ. ಟೈಪಿಂಗ್ ಕಷ್ಟವಾಗಿರುವವರಿಗೆ…

Rate this:

‘ಸ್ಕಿಮ್ಮರ್’ ಭೂತ: ಎಟಿಎಂ ಬಳಸುವಾಗ ಇರಲಿ ಎಚ್ಚರ

ನಿಮ್ಮ ಎಟಿಎಂ (ಡೆಬಿಟ್) ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮ ಜೇಬಿನಲ್ಲೇ ಅಥವಾ ಮನೆಯೊಳಗೆ ಸುರಕ್ಷಿತ ಸ್ಥಳದಲ್ಲಿ ಭದ್ರವಾಗಿರುತ್ತದೆ. ಆದರೆ, ಫೋನ್‌ಗೆ ದಿಢೀರ್ ಸಂದೇಶ – ‘ನಿಮ್ಮ ಖಾತೆಯಿಂದ ಇಂತಿಷ್ಟು ಸಾವಿರ ರೂಪಾಯಿ ವಿತ್‌ಡ್ರಾ ಮಾಡಲಾಗಿದೆ’ ಅಂತ. ‘ಇಲ್ಲ, ಹಾಗಾಗಿರಲು ಸಾಧ್ಯವಿಲ್ಲ, ಎಟಿಎಂ ನನ್ನ ಕೈಯಲ್ಲೇ ಇದೆಯಲ್ಲ’ ಎಂದುಕೊಂಡು ಸುಮ್ಮನಾಗುತ್ತೀರಿ. ಪುನಃ ಮತ್ತೊಂದು ಸಂದೇಶ – ’30 ಸಾವಿರ ರೂ. ನಗದೀಕರಿಸಲಾಗಿದೆ’ ಅಂತ. ಸುಮ್ಮನಿದ್ದ ಪರಿಣಾಮ? ಬ್ಯಾಂಕ್ ಖಾತೆಯಲ್ಲಿದ್ದ ಹಣ ಪೂರ್ತಿ ಖಾಲಿ. ಇದು ವಾಸ್ತವ ಘಟನೆ. ಎರಡು…

Rate this:

ಗೂಗಲ್‌ನಲ್ಲಿ ಚಿತ್ರದ ಮೂಲಕ ಮಾಹಿತಿ, ಅಂಥದ್ದೇ ಫೋಟೋ ಹುಡುಕುವುದು

ನಮಗೇನಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ, ಒಂದಷ್ಟು ಪದಗಳನ್ನು ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ. ಈ ಪದಗಳಿಗೆ ಕೀವರ್ಡ್ ಅಂತ ಕರೀತಾರೆ. ಸರ್ಚ್‌ಗಾಗಿ ಟೈಪ್ ಮಾಡುತ್ತಿರುವಾಗಲೇ ಗೂಗಲ್ ಪುಟ ಸಲಹೆ ನೀಡಿಬಿಡುತ್ತದೆ. ಉದಾಹರಣೆಗೆ, ನಾವು How to use ಅಂತ ಬರೆದ ತಕ್ಷಣ, ಅತೀ ಹೆಚ್ಚು ಬಳಕೆಯಾಗಿರುವ ಸರ್ಚ್ ಪದಗಳನ್ನು ಗೂಗಲ್ ನಮಗೆ ಡ್ರಾಪ್‌ಡೌನ್ ಮೆನುವಿನಲ್ಲಿ ತೋರಿಸಿಬಿಡುತ್ತದೆ. ಒಂದೋ ನಮಗೆ ಬೇಕಾದ ಪದಗಳನ್ನು ಟೈಪ್ ಮಾಡುವುದನ್ನು ಮುಂದುವರಿಸಬಹುದು, ಇಲ್ಲವೇ ಕೆಳಗಿರುವ ಡ್ರಾಪ್‌ಡೌನ್…

Rate this:

ಟೆಕ್-ಟಾನಿಕ್: ಐಫೋನ್‌ನಲ್ಲಿ ವಾಯ್ಸ್ ರೆಕಾರ್ಡ್

ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ, ಆಂಡ್ರಾಯ್ಡ್‌ನ ವಾಯ್ಸ್ ರೆಕಾರ್ಡರ್‌ನಂತಾ ವೈಶಿಷ್ಟ್ಯ ಎಲ್ಲಿ ಅಂತ ಹಲವರು ನನ್ನ ಬಳಿ ಕೇಳಿದ್ದಾರೆ. ಹೀಗಾಗಿ ಐಫೋನ್ ಬಳಕೆದಾರರಿಗಾಗಿ ಈ ಮಾಹಿತಿ. ಫೋನ್‌ನಲ್ಲಿ ಆ್ಯಪ್‌ಗಳ ಪಟ್ಟಿ ನೋಡಿದರೆ, ಅಲ್ಲಿ ವಾಯ್ಸ್ ಮೆಮೋ ಎಂಬ ಆ್ಯಪ್ ಇರುತ್ತದೆ. ಅವರ ಗೊಂದಲಕ್ಕೆ ಕಾರಣವಾಗಿರುವುದು ಈ ಆ್ಯಪ್‌ನ ಹೆಸರು. ವಾಯ್ಸ್ ಮೆಮೋ ಬಳಸಿ ಯಾವುದೇ…

Rate this:

ಆಧಾರ್ ದುರ್ಬಳಕೆ ಬಗ್ಗೆ ಆತಂಕವೇ? Lock ಮಾಡಿಕೊಳ್ಳುವುದು ಸುಲಭ!

“ಹತ್ತು ವರ್ಷಗಳ ಬಳಿಕ ಮದುವೆ ಆಮಂತ್ರಣ ಪತ್ರಗಳು ಹೇಗಿರುತ್ತವೆ? ವಧು-ವರರನ್ನು ಹಾಗೂ ಅವರ ಹೆತ್ತವರನ್ನು ಆಧಾರ್ ನಂಬರ್ ಮೂಲಕವೇ ಹೆಸರಿಸಲಾಗುತ್ತದೆ!” ಆಧಾರ್ ಸಂಖ್ಯೆ ಕಡ್ಡಾಯ ಕುರಿತ ಕೇಂದ್ರ ಸರಕಾರದ ನಿಯಮಾವಳಿಗಳ ಕುರಿತು ಎಲ್ಲೆಡೆ ಹರಿದಾಡುತ್ತಿರುವ ಸಾಕಷ್ಟು ಜೋಕ್‌ಗಳಲ್ಲಿ ಇದೂ ಒಂದು. ಆಧಾರ್ ಕಾರ್ಡ್ ಎಂಬುದು ಭಾರತೀಯನ ಅನನ್ಯತೆಗೆ ಕಾರಣವಾಗುವ ಗುರುತಿನ ಚೀಟಿ ಎಂಬುದು ನಿರ್ವಿವಾದ. ಬ್ಯಾಂಕ್ ಖಾತೆಗೆ, ಮೊಬೈಲ್ ನಂಬರ್‌ಗೆ ಲಿಂಕ್ ಮಾಡಿರಬೇಕೆಂಬುದು ಕೇಂದ್ರ ಸರಕಾರದ ನಿಯಮ. ಸರಕಾರದಿಂದ ಸಿಗಬಹುದಾದ ಯಾವುದೇ ಸವಲತ್ತುಗಳಿಗೂ ಆಧಾರ್ ಕಡ್ಡಾಯ. ಇವೆಲ್ಲವನ್ನು…

Rate this:

ಟೆಕ್ ಟಾನಿಕ್: ಭಯೋತ್ಪಾದಕರಿಗೆ FB ತಡೆ

ಐಸಿಸ್ ಸೇರಿದಂತೆ ವಿಭಿನ್ನ ಭಯೋತ್ಪಾದಕ ಸಂಘಟನೆಗಳನ್ನು ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಮಾಜಿಕ ಜಾಲ ತಾಣಗಳನ್ನೇ ಪ್ರಧಾನವಾಗಿ ಬಳಸುತ್ತಿವೆ. ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಈ ಉಗ್ರ ಸಂಘಟನೆಗಳು ಪ್ರಚಾರ, ಪ್ರಸಾರ ಕಾರ್ಯದಲ್ಲಿ ತೊಡಗಿರುತ್ತವೆ. ಇದೀಗ ಉಗ್ರವಾದಕ್ಕೆ ಪ್ರಚೋದಿಸುವ ವಿಷಯಗಳನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಕೃತಕ ಜಾಣ್ಮೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ. ಈ ತಂತ್ರಜ್ಞಾನದೊಂದಿಗೆ ಮಾನವನ ಹಸ್ತಕ್ಷೇಪವನ್ನೂ ಮಿಳಿತಗೊಳಿಸಿ, ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ವಿಷಯ ಪೋಸ್ಟ್ ಆಗುವ ಸಂದರ್ಭದಲ್ಲಿ ಬೇರೆ ಬಳಕೆದಾರರು ಅದನ್ನು ನೋಡುವ ಮುನ್ನವೇ ಪತ್ತೆ ಹಚ್ಚಿ,…

Rate this:

ಸ್ಮಾರ್ಟ್‌ಫೋನ್ ಇದೆಯೇ? ನೀವು ಮಾಡಬಾರದ ತಪ್ಪುಗಳು ಇಲ್ಲಿವೆ!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ 19 ಜೂನ್ 2017 ಮನೆಯಿಂದ ಹೊರಡುವಾಗ ಪರ್ಸ್ ಇರುವ ರೀತಿಯಲ್ಲೇ ಸ್ಮಾರ್ಟ್‌ಫೋನ್‌ಗಳೀಗ ನಮ್ಮ ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿವೆ. ಅವು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಸಾಧನವಾಗಿದ್ದರೂ ಎಲ್ಲರೂ ಆ ಬಗ್ಗೆ ನಿಷ್ಕಾಳಜಿ ತೋರಿಸುತ್ತಿದ್ದೇವೆ, ಎಲ್ಲೆಲ್ಲೋ ಇಟ್ಟಿರುತ್ತೇವೆ ಅಥವಾ ಮಕ್ಕಳ ಕೈಗೆ ಕೊಟ್ಟಿರುತ್ತೇವೆ. ಮಕ್ಕಳು ಆಟವಾಡುತ್ತಾಡುತ್ತಾ, ಇಂಟರ್ನೆಟ್ ಸಂಪರ್ಕಿಸಿ, ಲಾಗಿನ್ ಆಗಿರುವ ನಿಮ್ಮ ಖಾತೆಗಳಿಂದ ತಮಗರಿವಿಲ್ಲದಂತೆಯೇ ಸಂದೇಶಗಳನ್ನು ಕಳುಹಿಸುವುದು, ಯಾವುದಾದರೂ ಲಿಂಕ್ ಒತ್ತಿಬಿಡುವುದು, ‘ಪರ್ಚೇಸ್’ ಬಟನ್ ಕ್ಲಿಕ್ ಮಾಡುವುದು, ಸಂದೇಶ…

Rate this: