iOS 12: ಫೋನ್ ಗೀಳು ಕಡಿಮೆ ಮಾಡಲು ‘ಸ್ಕ್ರೀನ್ ಟೈಮ್’ ಮದ್ದು

ಆ್ಯಪಲ್ ಇತ್ತೀಚೆಗೆ ಅತ್ಯಾಧುನಿಕವಾದ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ -12 ಎಲ್ಲ ಸಾಧನಗಳಿಗೂ ಬಿಡುಗಡೆ ಮಾಡಿದೆ. ಐಫೋನ್ 5ಎಸ್ ಹಾಗೂ ನಂತರದ ಮಾಡೆಲ್‌ಗಳಿಗೆ ಇದರ ಅಪ್‌ಡೇಟ್ ಭಾರತದಲ್ಲೂ ಲಭ್ಯ. ಹಳೆಯ ಸಮಸ್ಯೆಗಳು ಐಒಎಸ್ 12ರಲ್ಲಿ ಪರಿಹಾರ ಕಂಡಿವೆ ಮತ್ತು ಹೊಸದಾಗಿ ಅನಿಮೋಜಿ, ಮೆಮೋಜಿ ಎಂಬ ವೈಯಕ್ತಿಕ ಅವತಾರ, ನೋಟಿಫಿಕೇಶನ್‌ಗಳ ಗುಚ್ಛ, ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಜತೆಗೆ ಕೆಲವೊಂದು ಅತ್ಯುಪಯುಕ್ತ ವೈಶಿಷ್ಟ್ಯಗಳೂ ಸೇರ್ಪಡೆಯಾಗಿವೆ. ತಿಂಗಳ ಕಾಲ ಬಳಸಿದ ಬಳಿಕ ನನ್ನ ಗಮನಕ್ಕೆ ಬಂದ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ. ಕಾರ್ಯಕ್ಷಮತೆ: ಐಫೋನ್ 5ಎಸ್…

Rate this:

ಕನ್ನಡ ಅಸ್ಮಿತೆ: ಐಫೋನ್‌ಗೂ ಬಂತು ಕನ್ನಡದ ಕೀಲಿಮಣೆ

ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11 ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡ ಕೀಲಿಮಣೆ ಸದ್ದು ಮಾಡುತ್ತಿದೆ. ಐಷಾರಾಮಿಗಳ ಫೋನ್ ಎಂದೋ, ಪ್ರತಿಷ್ಠೆಯ ಸಂಕೇತವೆಂದೋ ಪರಿಗಣಿತವಾಗಿದ್ದ ಆ್ಯಪಲ್ ಫೋನ್‌ಗಳು ಕನ್ನಡಿಗರ ಮನವನ್ನೂ ಗೆದ್ದಿದ್ದವು. ಇದುವರೆಗೆ ಸಂಗಮ್ ಅಥವಾ ಗೂಗಲ್ ಒದಗಿಸಿದ ಜಿ-ಬೋರ್ಡ್ ಎಂಬ ಕೀಬೋರ್ಡ್ ಅಳವಡಿಸಿ ಕನ್ನಡ ಟೈಪ್ ಮಾಡುತ್ತಿದ್ದವರೆಲ್ಲರೂ ಐಒಎಸ್‌ನ…

Rate this:

ಸ್ಮಾರ್ಟ್‌ಫೋನ್ ಕಳೆದುಹೋದಾಗ ಇದನ್ನೂ ಪ್ರಯತ್ನಿಸಿ ನೋಡಿ…

ನಾವು ಅಷ್ಟು ಆಸ್ಥೆಯಿಂದ, ನಮ್ಮೆಲ್ಲಾ ಬೇಕು ಬೇಡಗಳನ್ನು ತುಂಬಿಸಿದ್ದ ಸ್ಮಾರ್ಟ್‌ಫೋನ್ ಕಳೆದು ಹೋದರೆ ಆಗುವ ಚಡಪಡಿಕೆ ಯಾರಲ್ಲೂ ಹೇಳಿಕೊಳ್ಳಲಾಗದು. ಅಷ್ಟೊಂದು ಅಮೂಲ್ಯ ಮಾಹಿತಿಗಳನ್ನು ನಾವು ಅದಕ್ಕೆ ಊಡಿಸಿಬಿಟ್ಟಿರುತ್ತೇವೆ. ಎಲ್ಲ ಲಾಗಿನ್‌ಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್ ವಿವರಗಳು ಎಲ್ಲವೂ ಅದರಲ್ಲಿ ಶೇಖರವಾಗಿರುವಾಗ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಹೊಸದಾಗಿ ಫೋನ್ ಕೊಂಡುಕೊಂಡರಂತೂ ಎಲ್ಲೋ ಮರೆತು ಬಿಟ್ಟು ಬಂದಾಗ ಆಗುವ ಯಾತನೆ ಹೇಳತೀರದು. ನಮ್ಮ ಕಣ್ಣ ದೃಷ್ಟಿಯಿಂದ ಮರೆಯಾದ ಫೋನನ್ನು ಹುಡುಕುವುದು ಹೇಗೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಫೋನ್‌ನ ಐಎಂಐಇ…

Rate this:

ಏನಿವು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012) ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್, iOS ಮುಂತಾದವುಗಳೆಲ್ಲಾ ಏನು? ಯಾವುದನ್ನು ಆರಿಸಬೇಕು ಎಂದೆಲ್ಲಾ ಗೊಂದಲದಲ್ಲಿರುವ ಜನಸಾಮಾನ್ಯರಿಗೆ ಈ ಮಾಹಿತಿ. ಕಂಪ್ಯೂಟರುಗಳು ಕಾರ್ಯಾಚರಿಸಲು ವಿಂಡೋಸ್, ಮ್ಯಾಕ್, ಲಿನಕ್ಸ್ ಮುಂತಾದ ಆಪರೇಟಿಂಗ್ ಸಿಸ್ಟಂ (OS – ಕಾರ್ಯಾಚರಣಾ ವ್ಯವಸ್ಥೆ)ಗಳು ಹೇಗೆ ಅನಿವಾರ್ಯವೋ, ಮೊಬೈಲ್ ಫೋನುಗಳಿಗೂ ಇಂಥದ್ದೊಂದು ವ್ಯವಸ್ಥೆ ಅಗತ್ಯ. ಮೇಲೆ ಹೇಳಿರುವುದೆಲ್ಲವೂ ಅದರಲ್ಲಿರುವ…

Rate this: