ಝೂಮ್ ಅಪಾಯಕಾರಿ, ಎಚ್ಚರಿಕೆ ಅಗತ್ಯ
ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕಚೇರಿ ಕೆಲಸ ನಿರ್ವಹಿಸುವವರು, ಕಂಪನಿಯ ತಂಡದ ಜೊತೆ ಸಮಾಲೋಚನೆಗೆ ಬಳಸುವ ಝೂಮ್ ಆ್ಯಪ್ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಆದರೆ, ಇದು ಸೈಬರ್ ದಾಳಿಗಳಿಗೆ ಈಡಾಗುವ ಸಾಧ್ಯತೆಗಳಿವೆ ಎಂದು ಇತ್ತೀಚೆಗೆ ಸೈಬರ್ ಸುರಕ್ಷಾ ವಿಭಾಗವಾಗಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT) ಎಚ್ಚರಿಸಿತ್ತು. ಅದರ ಬೆನ್ನಿಗೇ, ಝೂಮ್ ಮೀಟಿಂಗ್ ತಾಣವು ವಿಡಿಯೊ ಕಾನ್ಫರೆನ್ಸ್‌ಗೆ ಸುರಕ್ಷಿತ ತಾಣವಲ್ಲ ಎಂದು ಕೇಂದ್ರ ಗೃಹ ಸಚಿವಾಲಯವೂ ಹೇಳಿದ್ದು, ಸರ್ಕಾರಿ ನೌಕರರು, ಅಧಿಕಾರಿಗಳು ಇದನ್ನು ಬಳಸುವಂತಿಲ್ಲ ಎಂದು…