ಟೆಕ್‍ಟಾನಿಕ್: ಕಂಪ್ಯೂಟರಿನಲ್ಲಿ ಎಸ್ಸೆಮ್ಮೆಸ್

ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್‌ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ ಎಸ್ಸೆಮ್ಮೆಸ್ ಸಂದೇಶಗಳನ್ನೂ ನೋಡಬಹುದು. ಮತ್ತು ಕಂಪ್ಯೂಟರಿನಲ್ಲೇ ಸಂದೇಶಗಳನ್ನು ಟೈಪ್ ಮಾಡಿ ಕಳುಹಿಸಬಹುದು ಅಥವಾ ಓದಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ. ನಿಮ್ಮ ಮೆಸೇಜ್ ಆ್ಯಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, Messages For Web ಅಂತ ಕ್ಲಿಕ್ ಮಾಡಿ, ಕಂಪ್ಯೂಟರಿನ ಬ್ರೌಸರಿನಲ್ಲಿ https://messages.android.com ಎಂಬ ತಾಣಕ್ಕೆ ಹೋಗಿ,…

Rate this:

ಅಸಲಿ ನಡುವೆ ನುಸುಳುವ ನಕಲಿ ಆ್ಯಪ್‌ಗಳು: ‘ಕಿಂಭೋ’ ನೀಡಿದ ಎಚ್ಚರಿಕೆ!

ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು ಹರಡುವ ವೇಗಕ್ಕಿಂತ ತಪ್ಪು ಮತ್ತು ಕೆಟ್ಟ ಸಂದೇಶಗಳು ಬೇಗನೇ ಹರಡುತ್ತವೆ. ಕಳೆದ ವಾರ ಆಗಿದ್ದೂ ಇದೇ. ಜನರ ಅರಿವಿನ ಕೊರತೆಯನ್ನು ಮತ್ತು ತರಾತುರಿಯನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುವ, ಸಿಕ್ಕದ್ದನ್ನು ಬಾಚಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ ಎಂಬುದಕ್ಕೆ ಉದಾಹರಣೆ, ಕಿಂಭೋ ಎಂಬ ಪತಂಜಲಿಯ ಆ್ಯಪ್. ಇದು ಸ್ವದೇಶೀ ಸಂದೇಶ ವಿನಿಮಯ…

Rate this:

ಫೇಸ್‌ಬುಕ್ ಮೆಸೆಂಜರ್ ಮೂಲಕ ಸುಲಭ, ಕ್ಷಿಪ್ರ ವಾಯ್ಸ್ ಮೆಸೇಜ್

ವಿಜಯ ಕರ್ನಾಟಕ ಅಂಕಣ: ಮಾಹಿತಿ @ ತಂತ್ರಜ್ಞಾನ – 33 – ಏಪ್ರಿಲ್ 22, 2013 ಇಂಟರ್ನೆಟ್ ಎಂಬ ಅದ್ಭುತವು ಕೈಗೆಟುಕತೊಡಗಿರುವಂತೆಯೇ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ಹೀಗಾಗಿ ಹೆಚ್ಚಿನವರೀಗ ಸದಾಕಾಲ ‘ಆನ್‌ಲೈನ್’. ಫೇಸ್‌ಬುಕ್ ಬಳಕೆಯಿಂದಾಗಿ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುವುದು, ಸ್ನೇಹಿತ ವರ್ಗದ ವೃದ್ಧಿಯ ಹೊರತಾಗಿ ಒಂದು ಲಾಭವೂ ಇದೆ. ಇದು ಫೇಸ್‌ಬುಕ್ ಬಳಕೆದಾರರಿಗೆ ಸಂತಸದ ಸುದ್ದಿ. ಅದೆಂದರೆ, ಫೇಸ್‌ಬುಕ್ ಮೆಸೆಂಜರ್ (Facebook Messenger) ಎಂಬ ಸಂದೇಶವಾಹಕ ಅಪ್ಲಿಕೇಶನ್ ಒಂದನ್ನು ನಿಮ್ಮ ಕಂಪ್ಯೂಟರಿನಲ್ಲಿ ಅಥವಾ…

Rate this: