ದಾರಿ ತಪ್ಪಿದಾಗ ನೆರವಿಗೆ ಬರುವ ಮ್ಯಾಪ್ಸ್ ಬಳಸುವುದು ಹೇಗೆ?
ಬಹುಮುಖೀ ಕಾರ್ಯಸಾಧನೆಗೆ ನೆರವಾಗುವ ಸ್ಮಾರ್ಟ್‌ಫೋನ್‌ಗಳ ಹಲವು ಉಪಯೋಗಗಳಲ್ಲಿ ‘ಮಾರ್ಗ’ದರ್ಶನವೂ ಒಂದು. ಅಂದರೆ, ಯಾವುದಾದರೂ ಊರಿಗೆ ಹೋಗಬೇಕೆಂದಾದರೆ, ಇಲ್ಲವೇ ನಗರದೊಳಗೆ ಒಂದು ಪ್ರದೇಶದಿಂದ ಮತ್ತೊಂದಕ್ಕೆ ನಮ್ಮದೇ ಬೈಕ್, ಕಾರು ಅಥವಾ ಸೈಕಲ್‌ನಲ್ಲಿ ತಿರುಗಾಡಬೇಕೆಂದಾದರೆ, ನಮಗೆ ದಾರಿ ಗೊತ್ತಿರಬೇಕು. ಇದೆಯಲ್ಲ ಮೊಬೈಲ್ ಫೋನ್! ಅದುವೇ ನಮಗೆ ಪ್ರತಿ ತಿರುವಿನಲ್ಲಿಯೂ ಮಾರ್ಗದರ್ಶನ ನೀಡುತ್ತಾ, ದಾರಿ ತೋರುವ ಗುರುವಾಗಿಬಿಡುತ್ತದೆ. ಸ್ಮಾರ್ಟ್‌ಫೋನ್ ಅಥವಾ ಅದೇ ರೀತಿ ಕಾಣಿಸಬಲ್ಲ ಜಿಪಿಎಸ್ ನ್ಯಾವಿಗೇಶನ್ ಸಾಧನವನ್ನು ಒಳಗೊಂಡಿರುವ ಸುಲಭವಾದ ಮಾರ್ಗದರ್ಶಕ ತಂತ್ರಜ್ಞಾನವನ್ನು ಈಗೀಗ ಬಹುತೇಕ ಎಲ್ಲ ಕಾರುಗಳ ಡ್ಯಾಶ್‌ಬೋರ್ಡುಗಳಲ್ಲಿಯೂ…