ನಡೆ ಕನ್ನಡ, ನುಡಿ ಕನ್ನಡ: ಆಗಲಿ ಕೀಬೋರ್ಡ್ ಕೂಡ ಕನ್ನಡ!

ಮಾಹಿತಿ ಮತ್ತು ತಂತ್ರಜ್ಞಾನದ ಕ್ಷೇತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಕೌತುಕಗಳಲ್ಲೊಂದು. ಕೆಲವೇ ವರ್ಷಗಳ ಹಿಂದೆ ಅಂತರ್ಜಾಲದಲ್ಲಿ, ಸ್ಮಾರ್ಟ್ ಫೋನ್‌ಗಳಲ್ಲಿ ಕನ್ನಡ ಬರೆಯಲು ತ್ರಾಸ ಪಡುತ್ತಿರುವವರೆಲ್ಲರೂ ಇದೀಗ ಹುಡುಕಿ ಹುಡುಕಿ ಕನ್ನಡ ಟೈಪಿಂಗ್ ಟೂಲ್‌ಗಳನ್ನು, ಆ್ಯಪ್‌ಗಳನ್ನು ಬಳಸುತ್ತಿದ್ದಾರೆ ಮತ್ತು ಆನ್‌ಲೈನ್ ಕನ್ನಡ ಲೋಕದಲ್ಲಿಯೂ ಕನ್ನಡ ಅಕ್ಷರಗಳ ತೋರಣವನ್ನು ಕಟ್ಟುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ”ದಯವಿಟ್ಟು ಕಂಗ್ಲಿಷ್ (ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡ ವಾಕ್ಯಗಳನ್ನು ಬರೆಯುವುದು) ನಿಲ್ಲಿಸಿ” ಅನ್ನುವ ಕನ್ನಡ ಕಟ್ಟಾಳುಗಳ, ಕನ್ನಡ ಮನಸ್ಸುಗಳ ಕೋರಿಕೆಗಳ, ಸಲಹೆಗಳ, ಸೂಚನೆಗಳ, ಆದೇಶಗಳ ಪ್ರಮಾಣದಲ್ಲಿ ಕುಸಿತ…

Rate this:

ಮೊಬೈಲ್‌ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್

ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್‌ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಈಗಲೂ ಮೊಬೈಲ್ ಫೋನ್‌ಗಳ ಪುಟ್ಟ ಕೀಬೋರ್ಡ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದಕ್ಕಿಂತಲೂ, ಇಂಗ್ಲಿಷಿನಲ್ಲಿಯೇ ಕನ್ನಡವನ್ನು (ಕಂಗ್ಲಿಷ್ ಎನ್ನಲಾಗುತ್ತಿದೆ) ಬರೆಯುವವರೇ ಹೆಚ್ಚು. ಆದರೆ ಅದನ್ನು ಓದುವವರಿಗೆ ಎಷ್ಟು ಕಷ್ಟವಾಗುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಇದಕ್ಕೆ ಸೂಕ್ತ ಮಾಹಿತಿಯ ಕೊರತೆಯೂ ಒಂದು ಕಾರಣ. ಟೈಪಿಂಗ್ ಕಷ್ಟವಾಗಿರುವವರಿಗೆ…

Rate this:

ಕನ್ನಡ ಟೈಪಿಂಗ್‌ಗೆ ಮೈಕ್ರೋಸಾಫ್ಟ್‌ನ ಈ ಟೂಲ್ ಬಳಸಿ

ವಿಕ ಅಂಕಣ: ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ – 28 (18 ಮಾರ್ಚ್, 2013) ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ ಕೆಲಸ ಕಾರ್ಯಗಳನ್ನು ಕಂಪ್ಯೂಟರಿನಲ್ಲಿಯೇ ಮಾಡಿಕೊಳ್ಳುವ ಮೂಲಕ, ‘ಕಂಪ್ಯೂಟರ್ ಸಾಕ್ಷರರು’ ಎಂಬ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಬಗ್ಗೆ ಅವರಿಗೆ ಗೊಂದಲಗಳಿದ್ದೇ ಇವೆ. ಅಂಥವರ ಅನುಕೂಲಕ್ಕಾಗಿ ಈ ಮಾಹಿತಿ. ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಅಕ್ಷರಗಳಿರುವಾಗ ಕನ್ನಡ ಟೈಪ್ ಮಾಡುವುದು ಹೇಗೆ ಎಂಬುದು…

Rate this: