ಮೊಬೈಲ್ ಸ್ಕ್ರೀನ್ ಮೇಲೆ ಬೆರಳಿನಿಂದ ಬರೆದರೆ ಸಾಕು, ಕನ್ನಡ ಟೈಪ್ ಆಗುತ್ತದೆ!
ಸ್ಮಾರ್ಟ್ ಫೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಕನ್ನಡ ಟೈಪಿಂಗ್ ಸ್ವಲ್ಪ ಕಷ್ಟ. ಇದಕ್ಕೆ ಪ್ರಮುಖ ಕಾರಣವೆಂದರೆ, ಅದರಲ್ಲಿರುವ ಪುಟ್ಟ ಕೀಬೋರ್ಡ್. ಇನ್ನೊಂದು ಕಾರಣ, ಹೆಚ್ಚಿನವರಿಗೆ ಕನ್ನಡ ಟೈಪ್ ಮಾಡಲು ಏನು ಮಾಡಬೇಕೆಂಬ ಅರಿವು ಇಲ್ಲದಿರುವುದು. ಜಸ್ಟ್ ಕನ್ನಡ, ಪದ ಮುಂತಾದ ಆ್ಯಪ್‌ಗಳಲ್ಲದೆ ಹಾಗೂ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಗಳ ಫೋನ್‌ಗಳಲ್ಲಿ ಸ್ವತಃ ಗೂಗಲ್ ಕೀಬೋರ್ಡ್‌ನಲ್ಲಿ ಕೂಡ ಕನ್ನಡ ಟೈಪ್ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ. ಇಷ್ಟೆಲ್ಲ ಇದ್ದರೂ ಕೀಬೋರ್ಡ್ ಪುಟ್ಟದಾಗಿರುವುದರಿಂದ ಕನ್ನಡದಲ್ಲಿ ಅಕ್ಷರಗಳನ್ನು ಮೂಡಿಸುವುದು ಒಂದಿಷ್ಟು ಕಷ್ಟವಾಗಬಹುದು. ಆಧುನಿಕ ಆಂಡ್ರಾಯ್ಡ್ ಫೋನ್‌ಗಳಲ್ಲಿ, ಗೂಗಲ್…