ಟೆಕ್‌ಟಾನಿಕ್: ಭಾಷಾಂತರಕ್ಕೆ ಗೂಗಲ್ ಆ್ಯಪ್

ವಿದೇಶ ಪ್ರವಾಸ ಮಾಡುವವರಿಗೆ ಗೂಗಲ್ ಒದಗಿಸಿರುವ ಗೂಗಲ್ ಟ್ರಾನ್ಸ್‌ಲೇಟ್ ಎಂಬ ಆ್ಯಪ್ ಅತ್ಯುತ್ತಮ ಸಹಕಾರ ಒದಗಿಸುತ್ತಿದೆ. ಇದು ಜಗತ್ತಿನ 103 ಆ್ಯಪ್‌ಗಳ ನಡುವೆ ಭಾಷಾಂತರ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಅಳವಡಿಸಿಕೊಂಡರೆ, ಯಾವುದೇ ಆ್ಯಪ್ ಓದುತ್ತಿರುವಾಗ, ಬೇರೆ ಭಾಷೆಯ ಸುದ್ದಿ ಅಥವಾ ಪದ ಕಾಣಿಸಿದರೆ, ಅದರ ಅರ್ಥವನ್ನು ತಕ್ಷಣ ತಿಳಿದುಕೊಳ್ಳಲು ಸಹಕಾರಿ. ಇಂಟರ್ನೆಟ್ ಸಂಪರ್ಕವಿಲ್ಲದಿರುವಾಗಲೂ ಇದು 59 ಭಾಷೆಗಳನ್ನು ಪರಸ್ಪರ ಅನುವಾದ ಮಾಡುತ್ತದೆ. ಇಷ್ಟಲ್ಲದೆ 38 ಭಾಷೆಗಳಲ್ಲಿ, ಕ್ಯಾಮೆರಾದ ಮೂಲಕ ಯಾವುದಾದರೂ ಪಠ್ಯವನ್ನು ಸೆರೆಹಿಡಿದರೆ ಅದನ್ನೂ ಭಾಷಾಂತರಿಸುವ ಸಾಮರ್ಥ್ಯವು…

Rate this:

ಹೋದಲ್ಲಿ ಟ್ರ್ಯಾಕ್ ಮಾಡುವ ಗೂಗಲ್: ಸುರಕ್ಷಿತವಾಗಿರುವುದು ಹೇಗೆ?

ಫೇಸ್‌ಬುಕ್‌ನಿಂದ ನಮ್ಮ ವೈಯಕ್ತಿಕ ಮಾಹಿತಿಯು ಮೂರನೆಯವರ ಪಾಲಾದ ವಿಚಾರವು ಕಳೆದ ಮೂರ್ನಾಲ್ಕು ವಾರಗಳಿಂದ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ ಎಂಬುದೇನೋ ನಿಜ. ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ನಿಂದ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಕುರಿತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍‌ಬರ್ಗ್ ಈಗಾಗಲೇ ಜನತೆಯ ಕ್ಷಮೆ ಯಾಚಿಸಿದ್ದಾರೆ. ಇಂತಹ ದೊಡ್ಡ ದೊಡ್ಡ ಕಂಪನಿಗಳು ಒತ್ತಟ್ಟಿಗಿರಲಿ, ಸಣ್ಣ ಪುಟ್ಟವು ಕೂಡ ಆ್ಯಪ್ ಅಥವಾ ವೆಬ್ ಸೈಟ್ ರೂಪದಲ್ಲಿ ನಮ್ಮ ಖಾಸಗಿ ಮಾಹಿತಿಯನ್ನು ಪಡೆಯುತ್ತವೆ ಎಂಬುದು ಅವುಗಳಲ್ಲಿ ಹೆಸರು ನೋಂದಾಯಿಸಿಕೊಂಡಾಗ ಅಥವಾ…

Rate this:

ಆಂಡ್ರಾಯ್ಡ್ ಸಾಧನಗಳಲ್ಲಿ ಸ್ವಯಂಚಾಲಿತ ಬ್ಯಾಕಪ್ ಎಂಬ ವರದಾನ

ಆಂಡ್ರಾಯ್ಡ್ ಫೋನ್/ಟ್ಯಾಬ್ಲೆಟ್ ಕಾರ್ಯಾಚರಣಾ ವ್ಯವಸ್ಥೆ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ವ್ಯವಸ್ಥೆಯ ಒಡೆತನವಿರುವುದು ತಂತ್ರಜ್ಞಾನ ದಿಗ್ಗಜ ಕಂಪನಿಯಾಗಿರುವ ಗೂಗಲ್‌ನ ಕೈಯಲ್ಲಿ. ಹೀಗಾಗಿ, ನಾವು ಎಲ್ಲಿಗೆ ಹೋಗುತ್ತೇವೆ, ಏನು ಮಾಡುತ್ತೇವೆ, ಯಾರಿಗೆ ಕರೆ ಮಾಡುತ್ತೇವೆ, ಯಾವ ಆ್ಯಪ್ ಬಳಸುತ್ತೇವೆ, ನಮ್ಮ ಫೋನ್ ಗ್ಯಾಲರಿಯಲ್ಲಿ ಯಾವ ಫೋಟೋ/ವೀಡಿಯೋಗಳಿವೆ, ಮೊಬೈಲ್‌ನಲ್ಲಿ ಯಾವೆಲ್ಲ ಜಾಲತಾಣಗಳಿಗೆ ಭೇಟಿ ಕೊಡುತ್ತೇವೆ ಎಂಬುದೆಲ್ಲ ಗೂಗಲ್‌ಗೆ ಗೊತ್ತಿರುತ್ತದೆ. ಹೌದು, ಗೂಗಲ್ ಒಡೆತನದಲ್ಲಿರುವ ಉಚಿತ ಇಮೇಲ್ ಸೇವೆಯಾಗಿರುವ ಜಿಮೇಲ್, ಆಂಡ್ರಾಯ್ಡ್ ಫೋನ್‌ಗಳ ಕಾರ್ಯಾಚರಣೆಗೆ ಅತ್ಯವಶ್ಯವಾಗಿರುವುದರಿಂದ ಇದು ಸಾಧ್ಯ. ನಮ್ಮೆಲ್ಲ ಫೋನ್…

Rate this:

ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿರುವ Artificial Intelligence

ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಉತ್ತಮ ಫರ್ನಿಚರ್‌ಗಳನ್ನು ಕೊಳ್ಳಬೇಕೆಂಬ ಮನಸ್ಸಾಗಿದೆ ನಿಮಗೆ. ಕಂಪ್ಯೂಟರ್ ಆನ್ ಇದೆ, ಅದರಲ್ಲಿ ಜಿಮೇಲ್ ಖಾತೆ ಸದಾ ಓಪನ್ ಇರುತ್ತದೆ. ಯಾಕೆಂದರೆ ಇಮೇಲ್ ಆಗಾಗ್ಗೆ ಚೆಕ್ ಮಾಡುತ್ತಲೇ ಇರಬೇಕಾಗುತ್ತದೆ. ಮತ್ತೊಂದು ಬ್ರೌಸರ್ ಟ್ಯಾಬ್ ತೆರೆದು, ನಿಮಗೆ ಬೇಕಾದ ಫರ್ನಿಚರ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಇಚ್ಛಿಸುತ್ತೀರಿ, ಜಾಲಾಡುತ್ತೀರಿ. ಕೆಲಸ ಆಯಿತು. ಅದನ್ನು ಕ್ಲೋಸ್ ಮಾಡಿಯೂ ಆಯಿತು. ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ತೆರೆಯುತ್ತೀರಿ. ಅದರಲ್ಲಿ ಯಾವುದೋ ವೆಬ್ ಸೈಟ್ ಅಥವಾ…

Rate this:

ನಿಮ್ಮ Google ಚಟುವಟಿಕೆಯ ಜಾಡು ಅಳಿಸುವುದು ಹೇಗೆ?

ನಿಮ್ಮ ಅಂಕಣ 6ನೇ ವರ್ಷಕ್ಕೆ ಮಾಹಿತಿ ತಂತ್ರಜ್ಞಾನದ ಕೆಲವೊಂದು ಸುಲಭ ತಂತ್ರೋಪಾಯಗಳು ಆ ವಿಷಯದ ಬಗ್ಗೆ ಓದಿದವರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ತಲುಪುವಂತಾಗಲಿ ಎಂಬ ಉದ್ದೇಶದಿಂದ ವಿಜಯ ಕರ್ನಾಟಕದಲ್ಲಿ 27 ಆಗಸ್ಟ್ 2012ರಂದು ಆರಂಭಿಸಿದ ‘ಮಾಹಿತಿ@ತಂತ್ರಜ್ಞಾನ’ ಅಂಕಣ 5 ವರ್ಷಗಳನ್ನು ಪೂರೈಸಿದ ಶುಭ ಘಳಿಗೆ. ಫೋನ್, ಇಮೇಲ್ ಹಾಗೂ ನೇರ ಭೇಟಿಯಾದ ಸಂದರ್ಭದಲ್ಲಿ ತಮ್ಮಸಂದೇಹಗಳನ್ನು ಕೇಳುತ್ತಲೇ ‘ಮೇವು’ ಒದಗಿಸುತ್ತಾ, ಪ್ರತಿ ವಾರದ ಈ ಅಂಕಣವು ರೂಪುಗೊಳ್ಳಲು ಸಹಕರಿಸಿದ ಓದುಗರು, ಸಹೋದ್ಯೋಗಿಗಳೆಲ್ಲರಿಗೂ ಧನ್ಯವಾದಗಳು. ಒಬ್ಬರ ಸಮಸ್ಯೆ ಪರಿಹಾರವಾದ ರೀತಿಯಲ್ಲೇ…

Rate this:

ಟೆಕ್ ಟಾನಿಕ್: ಒಂದು ಫನ್

ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಮನರಂಜನೆ. ಗೂಗಲ್ ಸರ್ಚ್ ಎಂಜಿನ್ ತೆರೆಯಿರಿ. tilt ಅಂತ ಬರೆದು ಸರ್ಚ್ ಮಾಡಿ. ನಿಮ್ಮ ಸ್ಕ್ರೀನ್ ಟಿಲ್ಟ್ ಆದಂತೆ (ಓರೆಯಾಗಿ ವಾಲಿದಂತೆ) ಕಾಣಿಸುತ್ತದೆ. ಇದು ಗೂಗಲ್ ಎಂಜಿನಿಯರ್‌ಗಳು ಮನರಂಜನೆಗಾಗಿಯೇ ಮಾಡಿದ ಕೆಲಸ. ಇನ್ನು ಮೊದಲ ಲಿಂಕ್ ಕಾಣಸಿಗುತ್ತದೆಯಲ್ಲ, ಅದನ್ನು http://elgoog.im/tilt/ ಕ್ಲಿಕ್…

Rate this:

ಗೂಗಲ್ ಸರ್ಚ್ ಮಾಡಲು ಕೆಲವು ಸುಲಭ ಟ್ರಿಕ್ಸ್

ಹಿಂದೆಂದೂ ಗೂಗಲ್ ಎಂಬ ಕ್ಷಿಪ್ರ ಸಂಶೋಧಕ ಇರಲಿಲ್ಲ. ಮುಂದೆ ಅದು ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ ಹುಟ್ಟಿಕೊಂಡಿದೆ ಎಂದಾದರೆ, ಸರ್ಚ್ ಎಂಜಿನ್ ಗೂಗಲ್‌ನ ಸಾಮರ್ಥ್ಯ ಮತ್ತು ವ್ಯಾಪ್ತಿ ಎಷ್ಟೆಂಬುದು ವೇದ್ಯವಾಗುತ್ತದೆ. ಅಂತಹಾ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಹುಡುಕುವುದಕ್ಕಾಗಿ ಕೆಲವೊಂದು ಸರಳವಾದ ಟ್ರಿಕ್ಸ್ ಇಲ್ಲಿದೆ. ನಿಮಗೆ ಉಪಯುಕ್ತವಾಗುತ್ತದೆ. * ಯಾವುದೇ ನಿರ್ದಿಷ್ಟ ಪದ ಗುಚ್ಛ, ಉದಾಹರಣೆಗೆ ಒಂದು ಹಾಡಿನ ಬಗ್ಗೆ ಮಾಹಿತಿ…

Rate this: