ಟೆಕ್ ಟಾನಿಕ್: ಗೂಗಲ್ ಮೂಲಕ ವೆಬ್ ಸರ್ಚ್

ನೀವು ಗೂಗಲ್ ಎಂಬ ಸರ್ಚ್ ಎಂಜಿನ್ ಬಳಸಿ ಏನಾದರೂ ಹುಡುಕುತ್ತೀರಿ. ಅದು ಇಡೀ ಇಂಟರ್ನೆಟ್ಟನ್ನು ಜಾಲಾಡಿ, ನೀವು ಹುಡುಕಿದ ಪದದ ಕುರಿತು ಮಾಹಿತಿ ಇರುವ ಎಲ್ಲ ಜಾಲತಾಣಗಳನ್ನು ತೋರಿಸುತ್ತದೆ. ನಿಮಗೆ ಗೊಂದಲ ಹೆಚ್ಚಾಗಬಹುದು. ಆದರೆ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವೆಬ್ ತಾಣದಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಕೂಡ ಗೂಗಲ್ ಮೂಲಕವೇ ಹುಡುಕಬಹುದು. ಹೇಗೆ ಗೊತ್ತೇ? ಸರ್ಚ್ ಮಾಡುವಾಗ, ನಿರ್ದಿಷ್ಟ ಪದದ ಬಳಿಕ ಸ್ಪೇಸ್ ಕೊಟ್ಟು, site: ಅಂತ ಬರೆದು, ಸ್ಪೇಸ್ ಇಲ್ಲದೆ ವೆಬ್‌ಸೈಟಿನ ಯುಆರ್‌ಎಲ್…

Rate this:

ನಿಮ್ಮ Google ಚಟುವಟಿಕೆಯ ಜಾಡು ಅಳಿಸುವುದು ಹೇಗೆ?

ನಿಮ್ಮ ಅಂಕಣ 6ನೇ ವರ್ಷಕ್ಕೆ ಮಾಹಿತಿ ತಂತ್ರಜ್ಞಾನದ ಕೆಲವೊಂದು ಸುಲಭ ತಂತ್ರೋಪಾಯಗಳು ಆ ವಿಷಯದ ಬಗ್ಗೆ ಓದಿದವರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ತಲುಪುವಂತಾಗಲಿ ಎಂಬ ಉದ್ದೇಶದಿಂದ ವಿಜಯ ಕರ್ನಾಟಕದಲ್ಲಿ 27 ಆಗಸ್ಟ್ 2012ರಂದು ಆರಂಭಿಸಿದ ‘ಮಾಹಿತಿ@ತಂತ್ರಜ್ಞಾನ’ ಅಂಕಣ 5 ವರ್ಷಗಳನ್ನು ಪೂರೈಸಿದ ಶುಭ ಘಳಿಗೆ. ಫೋನ್, ಇಮೇಲ್ ಹಾಗೂ ನೇರ ಭೇಟಿಯಾದ ಸಂದರ್ಭದಲ್ಲಿ ತಮ್ಮಸಂದೇಹಗಳನ್ನು ಕೇಳುತ್ತಲೇ ‘ಮೇವು’ ಒದಗಿಸುತ್ತಾ, ಪ್ರತಿ ವಾರದ ಈ ಅಂಕಣವು ರೂಪುಗೊಳ್ಳಲು ಸಹಕರಿಸಿದ ಓದುಗರು, ಸಹೋದ್ಯೋಗಿಗಳೆಲ್ಲರಿಗೂ ಧನ್ಯವಾದಗಳು. ಒಬ್ಬರ ಸಮಸ್ಯೆ ಪರಿಹಾರವಾದ ರೀತಿಯಲ್ಲೇ…

Rate this:

ಗೂಗಲ್‌ನಲ್ಲಿ ಚಿತ್ರದ ಮೂಲಕ ಮಾಹಿತಿ, ಅಂಥದ್ದೇ ಫೋಟೋ ಹುಡುಕುವುದು

ನಮಗೇನಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ, ಒಂದಷ್ಟು ಪದಗಳನ್ನು ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ. ಈ ಪದಗಳಿಗೆ ಕೀವರ್ಡ್ ಅಂತ ಕರೀತಾರೆ. ಸರ್ಚ್‌ಗಾಗಿ ಟೈಪ್ ಮಾಡುತ್ತಿರುವಾಗಲೇ ಗೂಗಲ್ ಪುಟ ಸಲಹೆ ನೀಡಿಬಿಡುತ್ತದೆ. ಉದಾಹರಣೆಗೆ, ನಾವು How to use ಅಂತ ಬರೆದ ತಕ್ಷಣ, ಅತೀ ಹೆಚ್ಚು ಬಳಕೆಯಾಗಿರುವ ಸರ್ಚ್ ಪದಗಳನ್ನು ಗೂಗಲ್ ನಮಗೆ ಡ್ರಾಪ್‌ಡೌನ್ ಮೆನುವಿನಲ್ಲಿ ತೋರಿಸಿಬಿಡುತ್ತದೆ. ಒಂದೋ ನಮಗೆ ಬೇಕಾದ ಪದಗಳನ್ನು ಟೈಪ್ ಮಾಡುವುದನ್ನು ಮುಂದುವರಿಸಬಹುದು, ಇಲ್ಲವೇ ಕೆಳಗಿರುವ ಡ್ರಾಪ್‌ಡೌನ್…

Rate this:

ಗೂಗ್ಲಾಸುರನಿಗೆ ನಮಸ್ಕಾರ

ಏಯ್ ಮರೀ, ನಿನ್ನ ಹೆಸರೇನು? ‘ಅಲಕ್ಷಿತಾ’ ‘ಇದೂ ಒಂದು ಹೆಸರಾ’ ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ. ‘ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!’ ‘ಓಹ್.’ ಇದೊಂದು ಟ್ರೆಂಡ್. ಹುಡುಗ ಆದ್ರೆ ಮೂರು-ಮೂರುವರೆ ಅಕ್ಷರದ ಹೆಸ್ರು, ಹುಡ್ಗಿಯಾದ್ರೆ ನಾಲ್ಕಕ್ಷರ ಅಥ್ವಾ ಎರಡಕ್ಷರ. ಅದರಲ್ಲಿ ಹೊಸತನ ಇರ್ಬೇಕು, ಯಾರೂ ಇಟ್ಟಿರಬಾರದು, ಅನನ್ಯವಾಗಿರ್ಬೇಕು ಅನ್ನೋ ಅಭಿಲಾಷೆ, ಆಕಾಂಕ್ಷೆ ಬೇರೆ. ಹೌದು, ಅಭಿಲಾಷ್ ಅಂತಂದ್ರೆ ಹುಡ್ಗ, ಅಭಿಲಾಷಾ ಅಂದ್ರೆ ಹುಡ್ಗಿ; ವಸಂತಾ ಹುಡುಗಿ, ವಸಂತ್ ಹುಡುಗ. ಆಕಾಂಕ್ಷಾ ಇದ್ದದ್ದು, ಆಕಾಂಕ್ಷ್…

Rate this: