ಅದ್ಭುತವೀ Google ಅಸಿಸ್ಟೆಂಟ್: ಹೇಗೆ ಬಳಸುವುದು ಗೊತ್ತೇ?
ಆಂಡ್ರಾಯ್ಡ್ ಫೋನುಗಳೆಂದರೆ ಅಂಗೈಯಲ್ಲಿರುವ ಅದ್ಭುತ. ಐಫೋನ್ ಅಥವಾ ವಿಂಡೋಸ್ ಫೋನ್ ಬಳಕೆದಾರರಿಗಿಲ್ಲದ ಹಲವಾರು ವೈಶಿಷ್ಟ್ಯಗಳು ಕ್ಷಣ ಕ್ಷಣಕ್ಕೂ ಇಲ್ಲಿ ನಮ್ಮ ಉಪಯೋಗಕ್ಕೆ ಬರುತ್ತವೆ. ಒಂದಿಷ್ಟು ಯೋಚನೆ ಮಾಡಿ ಸೆಟ್ ಮಾಡಿಟ್ಟುಕೊಂಡುಬಿಟ್ಟರೆ, ಇದರಿಂದಾಗುವ ಉಪಯೋಗಗಳಂತೂ ಅನಂತವೇ. ಕೆಲವೊಂದು ಮೂಲಭೂತ ಟ್ರಿಕ್‌ಗಳನ್ನು ತಿಳಿದುಕೊಂಡುಬಿಟ್ಟರೆ, ಆಂಡ್ರಾಯ್ಡ್ ಫೋನ್ ನಿಮಗೆ ಮತ್ತಷ್ಟು ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬ ಆಂಡ್ರಾಯ್ಡ್ ಫೋನ್ ಬಳಕೆದಾರರು ತಿಳಿದಿರಬೇಕಾದ ಗೂಗಲ್ ಅಸಿಸ್ಟೆಂಟ್ ಅಥವಾ ಗೂಗಲ್ ಸರ್ಚ್ ಆ್ಯಪ್ ಕುರಿತ ಮಾಹಿತಿ ಇಲ್ಲಿದೆ. ಬಳಸಿ ನೋಡಿ, ಎಂಜಾಯ್ ಮಾಡಿ. ಆ್ಯಪಲ್‌ನಲ್ಲಿ ಸಿರಿ,…