ಮೊಬೈಲ್‌ನಲ್ಲಿ ಸಂದೇಶ ಕಳುಹಿಸಲು ಗೂಗಲ್ ಕನ್ನಡ ಕೀಬೋರ್ಡ್
ವಿಜಯ ಕರ್ನಾಟಕ ಸಂಡೇ ಸಮಾಚಾರ ಅಕ್ಟೋಬರ್ 19, 2014 ಬೆಂಗಳೂರು: ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಟೈಪ್ ಮಾಡುವುದು ಮಾತೃ ಭಾಷಾ ಪ್ರಿಯರ ಬಹುಕಾಲದ ಬಯಕೆ. ಆಂಡ್ರಾಯ್ಡ್ ಬಳಕೆದಾರರು ಕೆಲವರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಹಲವಾರು ಕೀಬೋರ್ಡ್ ಅಪ್ಲಿಕೇಶನ್‌ಗಳನ್ನು (ಆ್ಯಪ್) ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಮಾತೃಭಾಷೆಯಲ್ಲಿ ಸಂವಹನ ನಡೆಸುವ ಹೆಬ್ಬಯಕೆಯನ್ನು ತಣಿಸಿಕೊಂಡರೆ, ಗೊತ್ತಿಲ್ಲದಿದ್ದವರು ಕನ್ನಡದಲ್ಲೇ ಸಂದೇಶ ಬಂದಿರುವುದನ್ನು ನೋಡಿಯಷ್ಟೇ ಆನಂದಿಸುತ್ತಿದ್ದರು. ಭಾಷಾ ಬಳಕೆದಾರರ ಈ ತ್ರಾಸದ ಬಗ್ಗೆ ಕೊನೆಗೂ ಕಣ್ಣು ಬಿಟ್ಟು, ಪ್ರಾದೇಶಿಕ ಭಾಷೆಗಳ ಮಹತ್ವವನ್ನು…