Google Assistant ಬಳಸುವುದು ಹೇಗೆ?
“ಒಕೆ ಗೂಗಲ್, ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಮ್ಯಾಪ್ ತೋರಿಸು” “ಹೇ ಗೂಗಲ್, ನಾಳೆ 3.30ಕ್ಕೆ ಕಚೇರಿಯ ಮೀಟಿಂಗ್‌ಗೆ ನೆನಪಿಸು” ಹೀಗೆ ಹೇಳಿದರೆ ಸಾಕು. ನಿಮ್ಮ ಮೊಬೈಲ್ ನಿಮ್ಮ ಆಜ್ಞಾನುವರ್ತಿ ಸಹಾಯಕನಂತೆ ಕೆಲಸ ಮಾಡುತ್ತದೆ. ಇದು ನಮ್ಮ ಫೋನ್‌ನಲ್ಲಿರುವ ಗೂಗಲ್ ಅಸಿಸ್ಟೆಂಟ್ ಎಂಬ ಅದ್ಭುತ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ನಮಗೊಬ್ಬ ಪಿಎ (ಪರ್ಸನಲ್ ಅಸಿಸ್ಟೆಂಟ್) ಇದ್ದಂತೆ. ಕೆಲವರಿಗೆ ಈ ಬಗ್ಗೆ ತಿಳಿದಿದೆ, ಬಳಸುತ್ತಾ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಹಲವರಲ್ಲಿ ಈ ಬಗ್ಗೆ ಹೇಳಿದಾಗ ಅಚ್ಚರಿಪಟ್ಟಿದ್ದಾರೆ, ಹೀಗೂ ಉಂಟೇ ಅಂತನೂ ಕೇಳಿದ್ದಾರೆ.…