ಗೂಗಲ್‌ನ Tez ಆ್ಯಪ್: ಬಳಸುವುದು ಹೇಗೆ, ಹಣ ಗಳಿಸುವುದು ಹೇಗೆ?

ಕಳೆದ ವರ್ಷ ಕೇಂದ್ರ ಸರಕಾರವು ಡೀಮಾನಿಟೈಸೇಶನ್ (ದೊಡ್ಡ ಮೌಲ್ಯದ ಕರೆನ್ಸಿ ನೋಟುಗಳ ರದ್ದತಿ) ಜಾರಿಗೊಳಿಸಿದ ಬಳಿಕ ದೇಶಾದ್ಯಂತ ಡಿಜಿಟಲ್ ನಗದಿನ ಬಳಕೆ ಹೆಚ್ಚಾಗಿದೆ. ಅಂದರೆ, ಜನರು ತಮ್ಮ ಸ್ಮಾರ್ಟ್ ಫೋನ್‌ನ ಮೂಲಕ ಇ-ವ್ಯಾಲೆಟ್ ಎಂಬ ಆನ್‌ಲೈನ್‌ನಲ್ಲಿ ಹಣ ಇಟ್ಟುಕೊಳ್ಳುವ ಪರ್ಸ್‌ನ ಮೂಲಕ ವಹಿವಾಟುಗಳನ್ನು ನಡೆಸಲಾರಂಭಿಸಿದ್ದಾರೆ. ಪೇಟಿಎಂ ಹೆಚ್ಚು ಜನಪ್ರಿಯತೆ ಗಳಿಸಿದ್ದರೆ, ಕೇಂದ್ರ ಸರಕಾರವೇ ಭೀಮ್ ಎಂಬ ಆ್ಯಪ್ ಹೊರತಂದಿತು. ಜತೆಗೆ ಪ್ರತಿಯೊಂದು ದೊಡ್ಡ ಕಂಪನಿಗಳು, ಬ್ಯಾಂಕುಗಳು ಕೂಡ ತಮ್ಮದೇ ಆದ ಇ-ವ್ಯಾಲೆಟ್ ಅನ್ನು ಪರಿಚಯಿಸಿದವು. ಪೇಯುಮನಿ, ಫೋನ್‌ಪೆ,…

Rate this: