Privacy ಧಕ್ಕೆ: ಜಿಮೇಲ್ ಖಾತೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?
ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ ಘಟನೆ ಹಸಿಯಾಗಿರುವಾಗಲೇ, ಆನ್‌ಲೈನ್‌ನಲ್ಲಿ ಅಂದರೆ ಇಂಟರ್ನೆಟ್ ಜಗತ್ತಿನಲ್ಲಿ ಪ್ರೈವೆಸಿ (ನಮ್ಮ ಖಾಸಗಿತನ) ಬಗ್ಗೆ ಮತ್ತೆ ಕೂಗೆದ್ದಿದೆ. ಇದಕ್ಕೆ ಕಾರಣ, ಬಹುತೇಕ ಎಲ್ಲರೂ ಉಚಿತವಾಗಿ ಹೊಂದಿರುವ ಮತ್ತು ಬಳಸುತ್ತಿರುವ ಇಮೇಲ್ ಖಾತೆ ಜಿಮೇಲ್. ಅದು ತನ್ನ ಬಳಕೆದಾರರ ಇಮೇಲ್‌ಗಳನ್ನು ಥರ್ಡ್-ಪಾರ್ಟಿ ಆ್ಯಪ್ ಡೆವಲಪರ್‌ಗಳಿಗೆ ಓದಲು ಅವಕಾಶ ಮಾಡುತ್ತಿದೆ ಎಂಬರ್ಥದ ಸುದ್ದಿಯೊಂದು ಕಳೆದ ವಾರವಿಡೀ ಜಿಮೇಲ್ ಬಳಕೆದಾರರ ನಿದ್ದೆಗೆಡಿಸಿತು. ಉಚಿತ ಇಮೇಲ್ ಸೇವೆ ಪೂರೈಕೆದಾರರೆಲ್ಲರೂ ‘ನಿಮ್ಮ…