ಹಗುರ, ಆಕರ್ಷಕ, ಕ್ಯಾಮೆರಾ ಕೇಂದ್ರಿತ Vivo V11 Pro

ಚೀನಾದ ಟೆಲಿಫೋನ್ ಕಂಪನಿಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲಿ ಪ್ರಮುಖವಾದದ್ದು ವಿವೊ. ಇದರ ವಿ ಸರಣಿಯ ಫೋನ್‌ಗಳು ಭಾರತದಲ್ಲಿ ಆಕರ್ಷಣೆ ಹೆಚ್ಚಿಸಿಕೊಂಡಿದ್ದು, ಇದೀಗ ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆ ಇರುವ ಮೊದಲ ಫೋನ್ ಬಂದಿದೆ. ಅದುವೇ ವಿವೋ ವಿ11 ಪ್ರೋ (Vivo V11 Pro). 26 ಸಾವಿರ ರೂ. ಒಳಗಿನ ಲೇಟೆಸ್ಟ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಿರುವ ಈ ಫೋನ್ ಹೇಗಿದೆ? ನೋಡೋಣ ಬನ್ನಿ. ಇದು ಸೆಲ್ಫೀಯನ್ನೇ ಗುರಿಯಾಗಿರಿಸಿಕೊಂಡು ಬಂದಿರುವ ಫೋನ್ ಎನ್ನಲಡ್ಡಿಯಿಲ್ಲ. ಬೆಲೆ ನೋಡಿದರೆ ಮಧ್ಯಮ ವರ್ಗದವರಿಗೆ…

Rate this:

ಜೆಬ್ರಾನಿಕ್ಸ್ ಪ್ರಿಸಂ Review: ಬಣ್ಣಬಣ್ಣದ LED ದೀಪವುಳ್ಳ ಬ್ಲೂಟೂತ್ ಸ್ಪೀಕರ್

ಎಲೆಕ್ಟ್ರಾನಿಕ್ ಯುಗದ ಕ್ರಾಂತಿಯು ಅದೆಷ್ಟೋ ಸಾಧನಗಳನ್ನು ಮೂಲೆಗುಂಪು ಮಾಡುತ್ತಿದೆ. ಬಲ್ಬು, ಸ್ಪೀಕರ್, ಹೋಂ ಥಿಯೇಟರ್ ಸಿಸ್ಟಂ, ನೈಟ್ ಲ್ಯಾಂಪ್, ಎಫ್ಎಂ ರೇಡಿಯೋ, ಬ್ಲೂಟೂತ್ ಸ್ಪೀಕರ್, ಯುಎಸ್‌ಬಿ ಮೂಲಕ ಪ್ಲೇ ಮಾಡಬಹುದಾದ ಸ್ಪೀಕರ್… ಇವೆಲ್ಲವೂ ಒಂದರಲ್ಲಿಯೇ ಮಿಳಿತವಾಗಿ ಬರುವ ಸಾಕಷ್ಟು ಸಾಧನಗಳು ಈಗ ಮಾರುಕಟ್ಟೆಯಲ್ಲಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ಜೆಬ್ರಾನಿಕ್ಸ್ ಕಂಪನಿ ಹೊರತಂದಿರುವ ಪ್ರಿಸಂ. ಎರಡು ವಾರಗಳ ಕಾಲ ಬಳಸಿದ ನೋಡಿದಾಗ ಕಂಡುಬಂದ ವಿಷಯಗಳು ಇಲ್ಲಿವೆ. ನೋಡಲು ಪುಟ್ಟ ಪೆಟ್ಟಿಗೆಯಂತಿರುವ ಇದು ಹಗುರವಾಗಿದೆ ಮತ್ತು ಇದರ ಆಕರ್ಷಣೆ…

Rate this:

ಕ್ಯಾಮೆರಾ ಕೇಂದ್ರಿತ Tecno Camon i 2x ಹೇಗಿದೆ?

ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಭಾರತದಲ್ಲಿ ನಿಧಾನವಾಗಿ ತನ್ನ ಪ್ರಭಾವ ಬೀರಲಾರಂಭಿಸಿದೆ. ಅವರ ಟೆಕ್‌ನೋ ಬ್ರ್ಯಾಂಡ್‌ನ ಕ್ಯಾಮಾನ್ ಸರಣಿಯ ಫೋನ್‌ಗಳು ಹೆಸರಿನಲ್ಲೇ ಇರುವಂತೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್ ಫೋನ್‌ಗಳು. ಇದರ ಕ್ಯಾಮಾನ್ ಐ 2ಎಕ್ಸ್ ಎಂಬ ಫೋನ್ ಹೇಗಿದೆ? ಮೊದಲು ಇದರ ವಿಶೇಷತೆ ಬಗ್ಗೆ ನೋಡೋಣ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ (13 ಹಾಗೂ 5 ಮೆಗಾಪಿಕ್ಸೆಲ್) ಇದೆ ಹಾಗೂ ಸೆಲ್ಫೀ ಕ್ಯಾಮೆರಾ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ…

Rate this:

ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

ಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯೂ ಒಂದು. ಇದರ ಭಾಗವೇ ಆಗಿರುವ ಇನ್ಫಿನಿಕ್ಸ್ ಮೊಬಿಲಿಟಿ ಕಂಪನಿಯು ಹೊಚ್ಚ ಹೊಸ ಆಂಡ್ರಾಯ್ಡ್ ಒನ್ ಆವೃತ್ತಿಯ ಇನ್ಫಿನಿಕ್ಸ್ ನೋಟ್ 5 (Infinix Note 5) ಬಿಡುಗಡೆ ಮಾಡಿದ್ದು, ಅದ್ಭುತ ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮ ಸೆಲ್ಫೀ ಫೋಟೋಗಳಿಗಾಗಿ ಗಮನ ಸೆಳೆಯಿತು. ಸುಲಭವಾಗಿ ಹೇಳುವುದಾದರೆ,…

Rate this:

Tecno Camon i Twin Review: ಟೆಕ್ನೋ ಕ್ಯಾಮಾನ್ ಐ ಟ್ವಿನ್ ಫೋನ್ ಹೇಗಿದೆ?

ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಹೊಚ್ಚ ಹೊಸ ಫೋನ್ ಜೂ.23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೆಸರು ಕ್ಯಾಮಾನ್ ಐ ಟ್ವಿನ್. ಈ ಮಾಡೆಲ್‌ನ ಹೆಸರಲ್ಲಿರುವಂತೆ ಇದರಲ್ಲಿ ಹಿಂಭಾಗದಲ್ಲಿ (ಪ್ರಧಾನ) ಎರಡು ಕ್ಯಾಮೆರಾಗಳಿವೆ. ಇದನ್ನು ಮೂರು ವಾರ ಬಳಸಿ ನೋಡಿದೆ. ಹೇಗಿದೆ? Camon i TWIN ಫೋನ್‌ನ ಸ್ಪೆಸಿಫಿಕೇಶನ್ಸ್ 13 MP ಪ್ರಧಾನ ಕ್ಯಾಮೆರಾ ƒ/2.0, 2 MP ಮತ್ತೊಂದು ಕ್ಯಾಮೆರಾ, ಜತೆಗೆ LED ಫ್ಲ್ಯಾಶ್ ಚಿತ್ರದ ರೆಸೊಲ್ಯುಶನ್: 4128 x 3096 ಪಿಕ್ಸೆಲ್…

Rate this:

25 ಮೆಗಾಪಿಕ್ಸೆಲ್ ಕ್ಯಾಮೆರಾದ ಗ್ರೂಪ್ ಸೆಲ್ಫೀ: ವಿವೋ ವಿ7 ವೈಶಿಷ್ಟ್ಯ

ಚೀನೀ ಮೊಬೈಲುಗಳ ಪೈಕಿ ಈಗ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲೊಂದು ವಿವೋ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿ7 ಮಾಡೆಲ್ ಆರಂಭದಲ್ಲೇ ಗಮನ ಸೆಳೆಯುತ್ತದೆ. ಆಕರ್ಷಕ ವಿನ್ಯಾಸ, ಅತ್ಯಧಿಕ ರೆಸೊಲ್ಯುಶನ್‌ನ ಕ್ಯಾಮೆರಾಗಳು, ಉತ್ತಮ ಚಿಪ್ ಸೆಟ್ ಹೊಂದಿರುವ ಇದು, ಫಿಫಾ ವಿಶ್ವಕಪ್ 2018ನ ಅಧಿಕೃತ ಸ್ಮಾರ್ಟ್‌ಫೋನ್ ಎಂದು ನೋಂದಾಯಿಸಿಕೊಂಡಿದೆ. ಸೆಲ್ಫೀ ಫೋಟೋಗ್ರಫಿಗೆ ಹೆಚ್ಚು ಒತ್ತು ನೀಡಿರುವ ವಿ7 ಮಾಡೆಲ್‌ನಲ್ಲಿ 24 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರುವುದು ಎಲ್ಲಕ್ಕಿಂತ ಗಮನ ಸೆಳೆಯುತ್ತದೆ. ಸ್ಪೆಸಿಫಿಕೇಶನ್‌ನತ್ತ ಗಮನ ಹರಿಸಿದರೆ, ಸಾಧನವು ಪ್ಲಾಸ್ಟಿಕ್ ಯೂನಿಬಾಡಿ, 2.5ಡಿ…

Rate this: