ಸ್ಮಾರ್ಟ್ ಫೋನ್ ಮೂಲಕ ಚಿತ್ರ, ವೀಡಿಯೋ, ಧ್ವನಿ ಉಚಿತವಾಗಿ ಕಳುಹಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 24, 2014ಕಳೆದ ತಿಂಗಳು ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಸೇವೆಯನ್ನು ಫೇಸ್‌ಬುಕ್ ‘ಲೈಕ್’ ಮಾಡಿತು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತನ್ನದಾಗಿಸಿಕೊಂಡಿತು. ಈ ಸಂದೇಶ ಸೇವೆಯನ್ನು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಖರೀದಿ ಮಾಡಿರುವುದು ಆನ್‌ಲೈನ್ ಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಆದರೆ, ಕೆಲವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವವರಿಗೆ ಉಚಿತವಾಗಿ ಸಂದೇಶ ರವಾನಿಸಲು ಸಹಾಯ ಮಾಡುವ ವಾಟ್ಸ್‌ಆ್ಯಪ್ ಎಂಬ ಆ್ಯಪ್ ಬಗ್ಗೆ ತಿಳಿದಿಲ್ಲ. ಅವರಿಗಾಗಿ ಈ ಮಾಹಿತಿ. ಸ್ಮಾರ್ಟ್‌ಫೋನ್‌ಗಳೆಂದರೆ, ಅದಕ್ಕೆ ಇಂಟರ್ನೆಟ್…

Rate this: