ಸ್ಮಾರ್ಟ್ ಫೋನ್ ಮೂಲಕ ಚಿತ್ರ, ವೀಡಿಯೋ, ಧ್ವನಿ ಉಚಿತವಾಗಿ ಕಳುಹಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 24, 2014ಕಳೆದ ತಿಂಗಳು ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಸೇವೆಯನ್ನು ಫೇಸ್‌ಬುಕ್ ‘ಲೈಕ್’ ಮಾಡಿತು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತನ್ನದಾಗಿಸಿಕೊಂಡಿತು. ಈ ಸಂದೇಶ ಸೇವೆಯನ್ನು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಖರೀದಿ ಮಾಡಿರುವುದು ಆನ್‌ಲೈನ್ ಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಆದರೆ, ಕೆಲವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವವರಿಗೆ ಉಚಿತವಾಗಿ ಸಂದೇಶ ರವಾನಿಸಲು ಸಹಾಯ ಮಾಡುವ ವಾಟ್ಸ್‌ಆ್ಯಪ್ ಎಂಬ ಆ್ಯಪ್ ಬಗ್ಗೆ ತಿಳಿದಿಲ್ಲ. ಅವರಿಗಾಗಿ ಈ ಮಾಹಿತಿ. ಸ್ಮಾರ್ಟ್‌ಫೋನ್‌ಗಳೆಂದರೆ, ಅದಕ್ಕೆ ಇಂಟರ್ನೆಟ್…

Rate this:

ನಿಮ್ಮ ಮೊಬೈಲ್ ಮೂಲಕ ಉಚಿತ ಚಾಟಿಂಗ್, ಆಡಿಯೋ ಧ್ವನಿ, ಚಿತ್ರ ಕಳುಹಿಸುವುದು ಹೀಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ಅಕ್ಟೋಬರ್ 21, 2013 ಕೈಯಲ್ಲೊಂದು ಮೊಬೈಲ್ ಫೋನ್, ಅದಕ್ಕೊಂದು ಇಂಟರ್ನೆಟ್ ಸಂಪರ್ಕವಿದ್ದರೆ ಮತ್ತು ಅದನ್ನು ಸಮರ್ಪಕವಾಗಿ ಬಳಸಲು ತಿಳಿದಿದ್ದರೆ, ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಅಂದುಕೊಳ್ಳಬಹುದು. ಕಾರಣವಿಷ್ಟೆ. ಮೊಬೈಲ್ ಸಾಧನಗಳು ಬಹುತೇಕ ಯುವಜನತೆಯಲ್ಲಿ ಹುಚ್ಚೆಬ್ಬಿಸಿದ್ದೇ ಅದರ ಎಸ್ಎಂಎಸ್ ಕಿರು ಸಂದೇಶ ಸೇವೆಯಿಂದ. ಇದರೊಂದಿಗೆ, ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು ಕೂಡ ಸಾಕಷ್ಟು ಅಗ್ಗದ ದರದಲ್ಲಿ, ವಿಶೇಷ ಎಸ್ಎಂಎಸ್ ಪ್ಯಾಕೇಜ್‌ಗಳನ್ನೂ ಒದಗಿಸಿ, ಯುವಜನರು ತಮ್ಮಿಂದ ದೂರವಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿವೆ. ಈ ಕಾರಣಕ್ಕಾಗಿಯೇ, ಒಂದೇ ಕ್ಯಾರಿಯರ್‌ನಲ್ಲಿ…

Rate this: