ಫೋನ್ ವಿನಿಮಯಕ್ಕೆ ಕೊಡುವ ಮುನ್ನ ಎಲ್ಲ ಫೈಲುಗಳನ್ನು ಅಳಿಸಿ
ಮಾಹಿತಿ@ತಂತ್ರಜ್ಞಾನ – 98: ವಿಜಯ ಕರ್ನಾಟಕ ಸೋಮವಾರ ಅಕ್ಟೋಬರ್ 20, 2014 ಹಬ್ಬದ ಸೀಸನ್. ಸಾಕಷ್ಟು ಕೊಡುಗೆಗಳಿಂದ ಆಕರ್ಷಿತರಾಗಿ ಫೋನ್ ಬದಲಾಯಿಸುವ, ವಿನಿಮಯ ಮಾಡುವ, ಹಳೆಯದನ್ನು ಮಾರಿ ಹೊಸತು ತೆಗೆದುಕೊಳ್ಳುವ ಪ್ರಕ್ರಿಯೆಗೆ ಕೆಲವರು ಚಾಲನೆ ನೀಡಿರಬಹುದು. ಆದರೆ ಹಳೆಯ ಫೋನ್‌ನಲ್ಲಿದ್ದ, ನಮಗೆ ಗೊತ್ತಾಗದಂತೆ ಉಳಿದುಕೊಳ್ಳಬಹುದಾದ ಫೈಲ್, ಡಾಕ್ಯುಮೆಂಟ್, ಫೋಟೋ, ವೀಡಿಯೋ ಹಾಗೂ ಲಾಗಿನ್ ಐಡಿ, ಪಾಸ್‌ವರ್ಡ್ ಮುಂತಾದ ಇತರ ಯಾವುದೇ ಸೂಕ್ಷ್ಮ ಮಾಹಿತಿಗಳು ಅದರಲ್ಲೇ ಉಳಿದುಕೊಂಡಿದ್ದರೆ, ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ, ಆ ಫೋನನ್ನು ಇನ್ನೊಬ್ಬರು…